ಬಾಗಲಕೋಟೆಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ ಮಾತನಾಡಿದರು. ಶಾಸಕರಾದ ಸಿದ್ದು ಸವದಿ, ದುರ್ಯೋಧನ ಐಹೊಳೆ, ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಗೌಡ ಪಾಟೀಲ ಇತರರು ಚಿತ್ರದಲ್ಲಿ ಇದ್ದಾರೆ.
ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಇದ್ದರೂ ಸರ್ಕಾರ ಇನ್ನೂ ಬರ ಘೋಷಿಸಲು ಮೀನಮೇಷ ಎಣಿಸುತ್ತಿದೆ. ಕೂಡಲೇ ಬರ ರಾಜ್ಯ ಎಂದು ಘೋಷಣೆ ಮಾಡಿ, ಎಕರೆಗೆ ೫೦ ಸಾವಿರ ರೂ. ಪರಿಹಾರ ಘೋಷಿಸಿ, ಮೊದಲ ಹಂತದಲ್ಲಿ ತಕ್ಷಣಕ್ಕೆ ರೈತರ ಬ್ಯಾಂಕ್ ಖಾತೆಗೆ ೨೫ ಸಾವಿರ ರೂ. ಜಮಾ ಮಾಡಬೇಕು. ಇಲ್ಲವಾದರೆ ಅಽವೇಶನ ನಡೆಸಲು ಬಿಡಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯಸಚೇತಕ ಎನ್.ರವಿಕುಮಾರ ಎಚ್ಚರಿಕೆ ನೀಡಿದರು.
ಬಾಗಲಕೋಟೆ ಜಿಲ್ಲೆಯ ಬರ ಪರಿಸ್ಥಿತಿ ವೀಕ್ಷಿಸಲು ಆಗಮಿಸಿದ್ದ ಅವರು ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಹಿಂದೆAದೂ ಕಾಣದಂತ ಬರ ಸ್ಥಿತಿ ಇದೆ ಎಂದು ಮುಖ್ಯಮಂತ್ರಿ ಡಿಕೆಶಿ ಅವರೇ ಹೇಳಿದ್ದಾರೆ. ಆದರೂ ಈ ವರೆಗೂ ಬರ ಎಂದು ಘೋಷಣೆ ಮಾಡಿಲ್ಲ ಎಂದರು.
ಮಳೆಯ ಕೊರತೆಯಿಂದಾಗಿ ರಾಜ್ಯದಲ್ಲಿ ಶೇ. ೩೦ ರಷ್ಟು ಮಾತ್ರ ಬಿತ್ತನೆ ಆಗಿದೆ. ಅನೇಕ ರೈತರು ಮೂರು ಸಲ ಬಿತ್ತನೆ ಮಾಡಿದ್ದಾರೆ. ಇದರಿಂದ ಸಾಕಷ್ಟು ಸಾಲವನ್ನು ಮಾಡಿಕೊಂಡಿದ್ದಾರೆ. ಆದರೂ ರಾಜ್ಯ ಸರ್ಕಾರ ಬರ ಘೋಷಣೆ ಮಾಡಿದರೆ ಪರಿಹಾರ ಕೊಡಬೇಕಾಗುತ್ತದೆ ಎಂದು ಘೋಷಣೆ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಕಳೆದ ಎರಡು ತಿಂಗಳಿAದ ಮಂತ್ರಿಗಿರಿ ಪೈಪೋಟಿಯಿಂದಾಗಿ ಯಾವೊಬ್ಬ ಶಾಸಕರು ಕ್ಷೇತ್ರದಲ್ಲಿ ಕಾಣಿಸಿಲ್ಲ. ಬರ ವೀಕ್ಷಣೆ ಮಾಡಿಲ್ಲ. ಇದೀಗ ಬಿಜೆಪಿ ರಾಜ್ಯಾದ್ಯಂತ ೬ ತಂಡಗಳಾಗಿ ಭೇಟಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಈಗ ಸಚಿವರನ್ನು ಬರ ವೀಕ್ಷಣೆಗೆ ಕಳುಹಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದರು.
ಕೇAದ್ರ ಸರ್ಕಾರಕ್ಕೆ ಪರಿಹಾರ ಕೊಡುವಂತೆ ಕೋರಿ ಎಂದು ಬಿಜೆಪಿಗೆ ಹೇಳುತ್ತಿದ್ದಾರೆ. ಆಗಿದ್ದರೆ ರಾಜ್ಯ ಸರ್ಕಾರ ಏಕೆ ಇರಬೇಕು? ಮೊದಲು ರಾಜೀನಾಮೆ ಕೊಟ್ಟು ಮನೆಗೆ ನಡೆಯಿರಿ. ಎಕರೆಗೆ ೫೦ ಸಾವಿರ ರೂ. ಪರಿಹಾರ ಘೋಷಿಸಿ, ೭೫ ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ೨೫ ಸಾವಿರ ತಕ್ಷಣೆ ಜಮಾ ಮಾಡಿ, ಬಳಿಕ ಕೇಂದ್ರಕ್ಕೆ ವರದಿ ಸಲ್ಲಿಸಿ, ಆನಂತರ ಉಳಿದ ೨೫ ಸಾವಿರ ಪರಿಹಾರ ವಿತರಿಸಿ ಎಂದು ಆಗ್ರಹಿಸಿದರು.
ಬರ ಇರುವುದರಿಂದ ರಾಜ್ಯದಲ್ಲಿ ಇರುವ ಎಲ್ಲ ಕರೆಗಳ ಹೂಳು ತೆಗೆಯುವ ಕೆಲಸ ಮಾಡಿ. ಗುಳೆ ತಪ್ಪಿಸಲು ಕೇಂದ್ರದ ವಿಬಿ ಜಿ ರಾಮ್ ಜಿ ಯನ್ನು ಸೂಕ್ತ ಯೋಜನೆ ತಯಾರಿಸಿ ಜನರಿಗೆ ಉದ್ಯೋಗ ಕೊಡಬೇಕು. ಬೆಳೆವಿಮೆ ಕಡ್ಡಾಯ ಮಾಡಿ ಕಂತನ್ನು ರಾಜ್ಯ ಸರ್ಕಾರ ಭರಿಸಬೇಕು. ಹಾಗೆಯೇ ಅವಽ ವಿಸ್ತರಣೆ ಮಾಡಬೇಕು. ಮೇವು ಬ್ಯಾಂಕ್ ಜಾನುವಾರುಗಳಿಗೆ ಕುಡಿವ ನೀರಿನ ವ್ಯವಸ್ಥೆ ಮಾಡಬೇಕು. ಎಲ್ಲೆಲ್ಲಿ ಜನರಿಗೆ ಕುಡಿವ ನೀರಿನ ಸಮಸ್ಯೆ ಇದೆಯೋ ಅದನ್ನು ಗುರುತಿಸಿ ನೀರು ಪೂರೈಕೆ ಮಾಡಬೇಕು. ದುರಸ್ತಿಯಲ್ಲಿ ಇರುವ ಶುದ್ಧ ನೀರಿನ ಘಟಕ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ, ಜಿಲ್ಲೆಯಲ್ಲಿ ವಾಡಿಕೆ ಮಳೆಗಿಂತ ಕಡಿಮೆ ಮಳೆ ಆಗಿದೆ. ಬಹುಗ್ರಾಮ ಕುಡಿವ ನೀರಿನ ಯೋಜನೆಗಳು ಎಲ್ಲವೂ ಶುರು ಇಲ್ಲ. ಆ ಬಗ್ಗೆ ಗಮನ ಹರಿಸಿ, ಯಾವ ಗ್ರಾಮದಲ್ಲೂ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಬಂದ್ ಆಗಿರುವ ಶುದ್ಧ ನೀರಿನ ಘಟಕಗಳನ್ನು ಕೂಡಲೇ ಸರಿಪಡಿಸಿ, ಜನರಿಗೆ ಶುದ್ಧ ನೀರು ಸಿಗುವಂತೆ ನೋಡಿಕೊಳ್ಳಬೇಕು ಎಂದರು.
ಶಾಸಕರಾದ ಸಿದ್ದು ಸವದಿ, ದುರ್ಯೋಧನ ಐಹೊಳೆ, ಪರಿಷತ್ ಸದಸ್ಯ ಹನಮಂತ ನಿರಾಣಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಗೌಡ ಪಾಟೀಲ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ, ಪಕ್ಷದ ಮುಖಂಡರಾದ ಬಸವರಾಜ ಯಂಕAಚಿ, ಮಲ್ಲಯ್ಯ ಮೂಗನೂರಮಠ, ಸತ್ಯನಾರಾಯಣ ಹೇಮಾದ್ರಿ ಇದ್ದರು.