ಗುಳೇದಗುಡ್ಡದಲ್ಲಿ ಪಟ್ಟಸಾಲಿ ನೇಕಾರ ಮಹಿಳಾ ಸಂಘ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಡಾ. ಶಾಂತಾ ಕರಡಿಗುಡ್ಡ ಉದ್ಘಾಟಿಸಿದರು. ಪಟ್ಟಸಾಲಿ ನೇಕಾರ ಮಹಿಳಾ ಸಂಘದ ಅಧ್ಯಕ್ಷೆ ಗೌರಮ್ಮ ಕಲಬುರ್ಗಿ, ಗಿರಿಜಾ ಕಲ್ಯಾಣಿ, ಭಾಗ್ಯಾ ಉದ್ನೂರ, ತಾರಾಮತಿ ರೋಜಿ, ದೀಪಾ ಉಂಕಿ, ವೇದಾ ಶೀಪ್ರೀ, ನಾಗರತ್ನಾ ಎಣ್ಣೆ, ದ್ರಾಕ್ಷಾಯಿಣಿ ಗೊಬ್ಬಿ ಇದ್ದರು.
- ಡಾ. ಶಾಂತಾ ಕರಡಿಗುಡ್ಡ ಹೇಳಿಕೆ
- ಭಾರತೀಯ ಪರಂಪರೆಯಲ್ಲಿ ನಾರಿ ಸಂಕುಲವನ್ನು ಇಡೀ ಜಗತ್ತು ಗೌರವಿಸುತ್ತದೆ
- ಮಹಿಳಾ ಸಂಘ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ಗುಳೇದಗುಡ್ಡ: ಭಾರತೀಯ ಪರಂಪರೆಯಲ್ಲಿ ನಾರಿ ಸಂಕುಲವನ್ನು ಇಡೀ ಜಗತ್ತು ಗೌರವಿಸುತ್ತದೆ. ಸಮಾಜದ ಪ್ರತಿಯೊಂದು ರಂಗದಲ್ಲಿ ಮಹಿಳೆ ತನ್ನದೇ ಆದ ವಿಶೇಷ ಮತ್ತು ವಿಶಿಷ್ಠ ಸಾಧನೆ ಮಾಡಿದ್ದಾರೆ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಡಾ. ಶಾಂತಾ ಕರಡಿಗುಡ್ಡ ಹೇಳಿದರು.
ಪಟ್ಟಣದ ಸಾಲೇಶ್ವರ ಸಮುದಾಯ ಭವನದಲ್ಲಿ ಪಟ್ಟಸಾಲಿ ನೇಕಾರ ಮಹಿಳಾ ಸಂಘ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆ ಸಮಾಜದ ಶಕ್ತಿಯಾಗಿ ಪ್ರತಿಯೊಂದು ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿದ್ದಾಳೆ ಎಂದರು.
ಸರ್ಕಾರಿ ಶಾಲೆ ಮುಖ್ಯ ಶಿಕ್ಷಕಿ ಭಾರತಿ ತಾಂಡೂರ ಮಾತನಾಡಿ, ಮಹಿಳೆಯರು ಸಮಾಜದಲ್ಲಿ ಆರ್ಥಿಕ, ಸಾಮಾಜಿಕವಾಗಿ ಮುಂದೆ ಬರಬೇಕು. ಅದಕ್ಕೆ ಮೊದಲು ಮಹಿಳೆಯರು ಶಿಕ್ಷಣ, ಸಂಸ್ಕಾರ, ಸಂಸ್ಕತಿ ಬೆಳೆಸಿಕೊಳ್ಳಬೇಕು. ಮಹಿಳಾ ದಿನಾಚರಣೆ ಒಂದು ದಿನದ ಆಚರಣೆ ಆಗಬಾರದು. ಮಹಿಳೆಗೆ ಎಲ್ಲರೂ ಗೌರವ, ಸತ್ಕಾರದಿಂದ ಕಾಣಬೇಕು ಎಂದು ತಿಳಿಸಿದರು.
ಪಟ್ಟಸಾಲಿ ನೇಕಾರ ಮಹಿಳಾ ಸಂಘದ ಅಧ್ಯಕ್ಷೆ ಗೌರಮ್ಮ ಕಲಬುರ್ಗಿ ಮಾತನಾಡಿದರು. ಗಿರಿಜಾ ಕಲ್ಯಾಣಿ, ಭಾಗ್ಯಾ ಉದ್ನೂರ, ತಾರಾಮತಿ ರೋಜಿ, ದೀಪಾ ಉಂಕಿ, ವೇದಾ ಶೀಪ್ರೀ, ನಾಗರತ್ನಾ ಎಣ್ಣೆ, ದ್ರಾಕ್ಷಾಯಿಣಿ ಗೊಬ್ಬಿ, ಮಾಲಾ ರಾಜನಾಳ, ಅನಿತಾ ಶಿರೋಳ, ಅನಸೂಯ ಅಲದಿ, ಮುರಿಗೆವ್ವ ಸಾರಂಗಿ, ಮೀನಾಕ್ಷಿ ಜಿಡಗಿ, ಶಶಿಕಲಾ ಭಾವಿ ಇತರರಿದ್ದರು.