ಬನಹಟ್ಟಿ ಭದ್ರಣ್ಣವರ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಸರ್ಕಾರಿ ನೌಕರರ ಸಹಕಾರಿ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡ ಅಂತಾರಾಷ್ಟೀಯ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಶಾಸಕ ಸಿದ್ದು ಸವದಿ ಚಾಲನೆ ನೀಡಿದರು. ಮೀನಾಕ್ಷಿ ಸವದಿ, ದಾಕ್ಷಾಯಣಿ ಮಂಡಿ, ಬಿ.ಡಿ. ನ್ಯಾಮಗೌಡ, ಮಹದೇವ ಕೋಟ್ಯಾಳ, ಸುರೇಶ ಅಕ್ಕಿವಾಟ, ಸಿದ್ದಪ್ಪ ಮೇಣಿ, ಶೈಲಾ ಮಿರ್ಜೆ, ಅರ್ಜುನ ಕಾಖಂಡಕಿ ಪ್ರಕಾಶ ಮಠಪತಿ ಇತರರಿದ್ದರು.
- ಶಾಸಕ ಸಿದ್ದು ಸವದಿ ಅಭಿಮತ
- 40 ಸಾಧಕ ಶಿಕ್ಷಕಿಯರಿಗೆ ಅಕ್ಷರದ ಪ್ರಶಸ್ತಿ ಪ್ರದಾನ
ರಬಕವಿ/ಬನಹಟ್ಟಿ: ಮಹಿಳೆಯರು ಮನೆ ಮತ್ತು ಉದ್ಯೋಗ ಎರಡನ್ನೂ ನಿಭಾಯಿಸುತ್ತಾ ಅತ್ಯಂತ ಯಶಸ್ವಿ ಜೀವನ ನಿಭಾಯಿಸುತ್ತಿದ್ದಾರೆ. ಇಂದಿನ ಆಧುನಿಕ ಸಮಾಜದಲ್ಲೂ ಕೂಡ ಮಹಿಳೆಯರ ವಿರುದ್ಧ ದೌರ್ಜನ್ಯಗಳು ನಡೆಯುತ್ತಿರುವುದು ವಿಷಾದನೀಯ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಬನಹಟ್ಟಿ ಭದ್ರಣ್ಣವರ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಸರ್ಕಾರಿ ನೌಕರರ ಸಹಕಾರಿ ಸಂಘದ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಹಿಳೆಯರು ಮಕ್ಕಳನ್ನು ತಿದ್ದುವ ಗುರುತರ ಜವಾಬ್ದಾರಿ ಹೊಂದಿದ್ದು, ಮಕ್ಕಳಿಗೆ ದೇಶಿಯ ಸಂಸ್ಕೃತಿ, ದೇಶಪ್ರೇಮ ಕಲಿಸಿ ಬಲಿಷ್ಠ ಭಾರತ ಕಟ್ಟುವಲ್ಲಿ ನೆರವಾಗಬೇಕು ಎಂದು ಹೇಳಿದರು.
ಬನಹಟ್ಟಿಯ ದಿವಾಣಿ ನ್ಯಾಯಾಧೀಶರಾದ ಸೌಮ್ಯ ಹೂಲಿ ಮಾತನಾಡಿ, ಹೆಣ್ಣು ಮಕ್ಕಳಿಗೆ ಸರಿಯಾದ ಶಿಕ್ಷಣ ಕೊಡಿಸಿ ಬಾಲ್ಯವಿವಾಹ ತಡೆಗಟ್ಟಬೇಕು. ಗಂಡು ಮಕ್ಕಳಿಗೆ ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಇದೆ. ಆದರೆ ಹೆಣ್ಣು ಮಕ್ಕಳಿಗೆ ಹೋಂ ಮ್ಯಾನೇಜ್‌ಮೆಂಟ್ ಜನ್ಮದಿಂದಲೇ ಕರಗತವಾಗಿದೆ ಎಂದರು.
ಸಾಹಿತಿ ದಾಕ್ಷಾಯಿಣಿ ಮಂಡಿ ಮಾತನಾಡಿ, ಆಡು ಮುಟ್ಟದ ಸೊಪ್ಪಿಲ್ಲ, ಮಹಿಳೆ ಪ್ರವೇಶಿಸದ ರಂಗವಿಲ್ಲ. ಪುರುಷ ಹಾಗೂ ಮಹಿಳೆಯರು ಸಮಾಜದ ಕಣ್ಣುಗಳು. ಮಹಿಳೆಯರ ಕೊಡುಗೆಯನ್ನು ನಿರ್ಲಕ್ಷಿಸಲಿಕ್ಕಾಗದು ಎಂದರು.
ಮೀನಾಕ್ಷಿ ಸಿದ್ದು ಸವದಿ ಅವರಿಗೆ ಮಮತಾಮಯಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ತಾಲೂಕಿನ ವಿವಿಧ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 40 ಶಿಕ್ಷಕಿಯರ ಸಾಧನೆ ಗುರುತಿಸಿ `ಅಕ್ಷರದ ಅವ್ವ' ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಬಸವರಾಜ್ ಬಾಗೇನ್ನವರ, ಜಮಖಂಡಿ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಜಿ. ಕಡಕೋಳ, ಸಮಿತಿ ಉಪಾಧ್ಯಕ್ಷೆ ಜಯಶ್ರೀ ಕಟ್ಟಿಮನಿ ಮಾತನಾಡಿದರು.
ಸರ್ಕಾರಿ ನೌಕರರ ಸಹಕಾರಿ ಸಂಘದ ಅಧ್ಯಕ್ಷ ಬಿ.ಡಿ. ನ್ಯಾಮಗೌಡ, ಮಹದೇವ ಕೋಟ್ಯಾಳ, ಸುರೇಶ ಅಕ್ಕಿವಾಟ, ಸಿದ್ದಪ್ಪ ಮೇಣಿ, ಶೈಲಾ ಮಿರ್ಜೆ, ಅರ್ಜುನ ಕಾಖಂಡಕಿ ಪ್ರಕಾಶ ಮಠಪತಿ, ಗೌಸಮುದ್ದಿನ್ ಮುಲ್ಲಾ, ಲಕ್ಷ್ಮಣ ಮುತ್ತಣ್ಣವರ, ಎಂ.ಎ. ಭಜಂತ್ರಿ, ಎಸ್.ಎಂ. ಬೆಳಗಲಿ, ಬಾಬಾಗೌಡ ಪಾಟೀಲ, ಶ್ರೀಶೈಲ ಬುರ್ಲಿ, ಜಿ.ಎಸ್. ಕಲಬುರ್ಗಿ, ಬಿ.ಬಿ. ಕಲ್ಲೋಳಿ, ವಿದ್ಯಾ ದಬಾಡಿ, ಗೌರಿ ಮಿಳ್ಳಿ, ಬಿ.ಪಿ. ನುಚ್ಚಿ, ಬಸವರಾಜ ಮುಧೋಳ, ಆರ್.ವಿ. ಹೋಟಕರ, ಬಿ.ಬಿ. ಲೋಕಾಪುರ ಇತರರಿದ್ದರು. ಅನೀಲ್ ಕಡ್ಲಿ ಹಾಗೂ ರಾಜೇಶ್ವರಿ ಬಾಣಕಾರ ನಿರೂಪಿಸಿದರು.