ಗುಳೇದಗುಡ್ಡ ಪಟ್ಟಣದಲ್ಲಿ ತಾಲೂಕು ಆಡಳಿತ, ತಾ.ಪಂ. ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಬುಧವಾರ ಸಂವಿಧಾನ ದಿನ ಆಚರಿಸಲಾಯಿತು. ಬಾದಾಮಿಯ ಸರ್ಕಾರಿ ಪೌಢಶಾಲೆ ಉಪನ್ಯಾಸಕಿ ಭಾಗ್ಯಶ್ರೀ ಮರಡಿತೋಟ, ತಹಸೀಲ್ದಾರ ಎಸ್.ಎ್. ಬೊಮ್ಮಣ್ಣವರ, ತಾ.ಪಂ. ಇಒ ಮಲ್ಲಿಕಾರ್ಜುನ ಬಡಿಗೇರ, ಸಮಾಜ ಕಲ್ಯಾಣ ಇಲಾಖೆ ಸಂಜು ಮಬ್ರುಮಕರ ಇದ್ದರು. 
ಬಾಗಲಕೋಟೆ

ಸಂವಿಧಾನ ರಚನೆಯಲ್ಲಿ ಮಹಿಳೆಯರು ಭಾಗಿ

ಪ್ರಮುಖ ಮುಖ್ಯಾಂಶಗಳು

  • ಉಪನ್ಯಾಸಕಿ ಭಾಗ್ಯಶ್ರೀ ಮರಡಿತೋಟ ಹೇಳಿಕೆ
  • ಎಲ್ಲರಿಗೂ ಸಮಾನ ಅವಕಾಶ
  • ಡಾ. ಬಿ.ಆರ್. ಅಂಬೇಡ್ಕರ್ ಅವರಿಂದ ರಚಿತವಾದ ಸಂವಿಧಾನ ಸಮಾನತೆಯ ಹಕ್ಕು ನೀಡಿದೆ
ಗುಳೇದಗುಡ್ಡ : ಭಾರತವನ್ನು ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿ, ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವ ನಿಟ್ಟಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಂದ ರಚಿತವಾದ ಸಂವಿಧಾನ ಸಮಾನತೆಯ ಹಕ್ಕು ನೀಡಿದೆ ಎಂದು ಬಾದಾಮಿಯ ಸರ್ಕಾರಿ ಪೌಢಶಾಲೆ ಉಪನ್ಯಾಸಕಿ ಭಾಗ್ಯಶ್ರೀ ಮರಡಿತೋಟ ಹೇಳಿದರು.
ಪಟ್ಟಣದ ಕರನಂದಿ ರಂಗಮಂದಿರದಲ್ಲಿ ಬುಧವಾರ ತಾಲೂಕು ಆಡಳಿತ, ತಾ.ಪಂ. ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ನಮ್ಮ ಸಂವಿಧಾನದ ಪೀಠಿಕೆಯಲ್ಲಿ ಹೇಳಿದಂತೆ ದೇಶದ ಪ್ರತಿಯೊಬ್ಬ ಪ್ರಜೆಗೂ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ, ಧರ್ಮಶ್ರದ್ಧೆ, ಅಭಿವ್ಯಕ್ತಿ, ವಿಚಾರ ಸ್ವಾತಂತ್ರೃ, ಸ್ಥಾನಮಾನ ಹಾಗೂ ಅವಕಾಶಗಳಲ್ಲಿ ಸಮಾನತೆ ನೀಡಿದೆ. ಡಾ. ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ರಚಿತವಾದ ಸಂವಿಧಾನ ರಚನೆಯ ಸಮಿತಿಯಲ್ಲಿ ಸರೋಜಿನಿ ನಾಯ್ಡು, ವಿಜಯಲಕ್ಷ್ಮೀ ಪಂಡಿತ, ಸುಜೇತಾ ಕೃಪಾಲಿನಿ ಸೇರಿ ಮಹಿಳೆಯರು ಪಾಲ್ಗೊಂಡಿದ್ದರು. ಅನೇಕ ದೇಶಗಳ ಸಂವಿಧಾನಗಳನ್ನು ಅಧ್ಯಯನಮಾಡಿ ರಚಿತವಾದ ನಮ್ಮ ಸಂವಿಧಾನ ಜಗತ್ತಿನಲ್ಲಿಯೇ ಶ್ರೇಷ್ಠ ಸಂವಿಧಾನವಾಗಿದೆ ಎಂದರು.
ಬಳಿಕ ಸಂವಿಧಾನ ಪೀಠಿಕೆಯ ಪ್ರತಿಜ್ಞಾವಿಧಿ ತಹಸೀಲ್ದಾರ ಎಸ್.ಎ್. ಬೊಮ್ಮಣ್ಣವರ ಬೋಧಿಸಿದರು. ತಾ.ಪಂ. ಇಒ ಮಲ್ಲಿಕಾರ್ಜುನ ಬಡಿಗೇರ, ಸಮಾಜ ಕಲ್ಯಾಣ ಇಲಾಖೆಯ ಸಂಜು ಮಬ್ರುಮಕರ, ವೈ.ಆರ್. ಹೆಬ್ಬಳ್ಳಿ, ರಾಜು ಹೆಬ್ಬಳ್ಳಿ, ಯಮನಪ್ಪ ದಳಪತಿ, ಸಿ.ಎಂ. ಜೋಶಿ, ಎಚ್.ಎಸ್. ಅಚನೂರ, ಎ.ಎಚ್. ನದ್ಾ, ಎಂ.ಎಸ್. ಮದರಂಗಿ ಮತ್ತಿತರರು ಇದ್ದರು.