ಬೀಳಗಿಯಲ್ಲಿ ವಿದ್ಯುತ್ ಕ್ಷೇತ್ರದ ಖಾಸಗೀಕರಣ ನೀತಿಯನ್ನು ಖಂಡಿಸಿ ಹೆಸ್ಕಾಂ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಮತ್ತು ಲೈನ್‌ಮೆನ್‌ರು ಪ್ರತಿಭಟನೆ ನಡೆಸಿದರು. ಮಂಜುನಾಥ ಭೋಕಿ, ಎಚ್.ಡಿ. ಚಾಪಿ, ಎಸ್.ಜಿ.ಹಳ್ಳಿ, ಎಸ್.ಜಿ.ಸನ್ನಕ್ಕಿ, ನೌಕರರ ಸಂಘದ ಅಧ್ಯಕ್ಷ ಎಚ್.ಎಂ.ಕರಡಿ, ಕಾರ್ಯದರ್ಶಿ ವಿ.ಸಿ ಹಜಾರೆ, ಎಸ್, ವಿ.ಎಸ್ ಅಗಸಿಮುಂದಿನ, ಕಷ್ಣಾ ನಾಯಕ ಇತರರಿದ್ದರು.
- ವಿದ್ಯುತ್ ಕ್ಷೇತ್ರದ ಖಾಸಗೀಕರಣ ನೀತಿಯನ್ನು ಖಂಡಿಸಿ ಹೆಸ್ಕಾಂ ಇಲಾಖೆ ಅಧಿಕಾರಿಗಳು ಪ್ರತಿಭಟನೆ ನಡೆಸಿದರು
- ಖಾಸಗೀಕರಣದಿಂದ ನೌಕರರ ಭದ್ರತೆ ಮತ್ತು ಗ್ರಾಹಕರ ಹಿತಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ
- ಸರ್ಕಾರ ಈ ನೀತಿಯನ್ನು ಹಿಂಪಡೆದು ಸಾರ್ವಜನಿಕ ಹಿತವನ್ನು ಕಾಪಾಡಬೇಕು
ಬೀಳಗಿ: ನಗರದಲ್ಲಿ ವಿದ್ಯುತ್ ಕ್ಷೇತ್ರದ ಖಾಸಗೀಕರಣ ನೀತಿಯನ್ನು ಖಂಡಿಸಿ ಹೆಸ್ಕಾಂ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಮತ್ತು ಲೈನ್‌ಮೆನ್‌ರು ಪ್ರತಿಭಟನೆ ನಡೆಸಿದರು. ಭಿತ್ತಿ ಪತ್ರಗಳನ್ನು ಪ್ರದರ್ಶಿಸಿ ತಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸಿದರು.
ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಮಂಜುನಾಥ ಭೋಕಿ ಮಾತನಾಡಿ, ಖಾಸಗೀಕರಣದಿಂದ ನೌಕರರ ಭದ್ರತೆ ಮತ್ತು ಗ್ರಾಹಕರ ಹಿತಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು. ಟಾಟಾ ಪವರ್ ಕಂಪನಿ ರಾಜ್ಯದಲ್ಲಿ ವಿದ್ಯುತ್ ವಿತರಣಾ ಜಾಲ ವಿಸ್ತರಣೆಗಾಗಿ ಅರ್ಜಿ ಸಲ್ಲಿಸಿರುವುದು ಪರಿಸ್ಥಿತಿಯನ್ನು ಗಂಭೀರಗೊಳಿಸಿದ್ದು, ಆರಂಭದಲ್ಲಿ ಸೌಲಭ್ಯಗಳ ಭರವಸೆ ನೀಡಿದರೂ ನಂತರ ಗ್ರಾಹಕರಿಗೆ ಹೆಚ್ಚುವರಿ ಹೊರೆ ಬೀಳುವ ಸಾಧ್ಯತೆ ಇದೆ ಎಂದು ಹೇಳಿದರು. ಸರ್ಕಾರ ಈ ನೀತಿಯನ್ನು ಹಿಂಪಡೆದು ಸಾರ್ವಜನಿಕ ಹಿತವನ್ನು ಕಾಪಾಡಬೇಕು ಎಂದು ಆಗ್ರಹಿಸಿದರು.
ಕೆಪಿಟಿಸಿಎಲ್ ಎಇಇ ಎಚ್.ಡಿ. ಚಾಪಿ ಮಾತನಾಡಿ, ಖಾಸಗೀಕರಣದಿಂದ ರೈತರಿಗೆ ಸಮಸ್ಯೆಗಳು ಹೆಚ್ಚಾಗಲಿದ್ದು, ವಿದ್ಯುತ್ ಸೇವೆ ನಿರ್ವಹಣೆಯಲ್ಲೂ ಅಡಚಣೆ ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು. ಈ ಹಿನ್ನೆಲೆಯಲ್ಲಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಂಡು ಖಾಸಗೀಕರಣವನ್ನು ತಪ್ಪಿಸಬೇಕು ಎಂದು ಮನವಿ ಮಾಡಿದರು.
ತಾಂತ್ರಿಕ ಸಹಾಯಕ ಅಭಿಯಂತರ ಎಸ್.ಜಿ.ಹಳ್ಳಿ, ಎಸ್.ಜಿ.ಸನ್ನಕ್ಕಿ, ನೌಕರರ ಸಂಘದ ಅಧ್ಯಕ್ಷ ಎಚ್.ಎಂ.ಕರಡಿ, ಕಾರ್ಯದರ್ಶಿ ವಿ.ಸಿ ಹಜಾರೆ, ಎಸ್, ವಿ.ಎಸ್ ಅಗಸಿಮುಂದಿನ, ಕಷ್ಣಾ ನಾಯಕ, ಹನಮಂತ ಆಟಕ, ಗಿರಮಲ್ಲಪ್ಪ ಕಿಡಿಯಪ್ಪನವರ, ಮಂಜು ಗುಳೆದಗುಡ್ಡ, ವೆಂಕಟೇಶ ಪಾಮಾ, ಇಮಾಮ ಬುದಿಹಾಳ, ಶಿವಾನಂದ ಕವಳ್ಳಿ ಸೇರಿ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.