ಗುಳೇದಗುಡ್ದದ ಭಂಡಾರಿ ಕಾಲೇಜಿನ ವಾಣಿಜ್ಯ ವಿಭಾಗ ಹಾಗೂ ಬೆಂಗಳೂರಿನ ಐಸಿಎಐ ವತಿಯಿಂದ ಹಮ್ಮಿಕೊಂಡಿದ್ದ ಹಣಕಾಸು ಮತ್ತು ಜಿಎಸ್‌ಟಿ ಕಾರ್ಯಕ್ರಮ ಪ್ರೊ. ಎಸ್.ಎಸ್. ನಾಯಿನೇಗಲಿ ಉದ್ಘಾಟಿಸಿದರು. ಪ್ರಾಚಾರ್ಯ ಡಾ. ಎನ್.ವೈ. ಬಡಣ್ಣವರ, ಸಂಪನ್ಮೂಲ ವ್ಯಕ್ತಿ ಪ್ರಶಾಂತ ಹಂಚಾಟೆ, ರಾಜು ತಾಪಡಿಯಾ, ಪ್ರೊ. ಸಿದ್ಧಲಿಂಗಪ್ಪ ಬರಗುಂಡಿ, ಪುರುಷೋತ್ತಮ ಜಂವಾರ್ ಇದ್ದರು. 
ಬಾಗಲಕೋಟೆ

ಹಣದುಬ್ಬರ ಗಮನಿಸಿ ಹಣ ಉಳಿಸಿ

ದತ್ತಾತ್ರೇಯ ಪಿ ಕುಲಕರ್ಣಿ

ಪ್ರಮುಖ ಮುಖ್ಯಾಂಶಗಳು

  • ಲೆಕ್ಕಪರಿಶೋಧಕ ಶಿವಾನಂದ ಮಲಗಾವಿ ಸಲಹೆ
  • ಹಣಕಾಸು
  • ಜೆಎಸ್‌ಡಿ ಜಾಗೃತಿ ಕಾರ್ಯಕ್ರಮ
ಗುಳೇದಗುಡ್ಡ: ವೈಯಕ್ತಿಕ ಹಣದ ಉಳಿತಾಯ, ಹಣದ ವ್ಯವಹಾರ ಇಂದು ಬಹಳ ಅಗತ್ಯವಾಗಿದೆ. ವೈಯಕ್ತಿಕ ಉಳಿತಾಯಕ್ಕೆ ಹಣದುಬ್ಬರದ ದರ ನೋಡಿಕೊಂಡು ಹಣ ಉಳಿತಾಯ ಮಾಡುವುದು ಮತ್ತು ಹೂಡಿಕೆ ಮಾಡುವುದು ಕಲಿತುಕೊಳ್ಳಬೇಕು ಎಂದು ಲೆಕ್ಕ ಪರಿಶೋಧಕ ಶಿವಾನಂದ ಮಲಗಾವಿ ಸಲಹೆ ನೀಡಿದರು.
ಪಟ್ಟಣದ ಭಂಡಾರಿ ಕಾಲೇಜಿನ ವಾಣಿಜ್ಯ ವಿಭಾಗ ಹಾಗೂ ಬೆಂಗಳೂರಿನ ಐಸಿಎಐ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಹಣಕಾಸು ಮತ್ತು ಜಿಎಸ್‌ಟಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಅನಿಶ್ಚಿತತೆಯ ಸಂದರ್ಭದಲ್ಲಿ ಹಣಕಾಸು ವ್ಯವಹಾರ ಜಾಗೃತಿಯಿಂದ ಮಾಡಬೇಕು. ಪ್ರತಿಯೊಬ್ಬ ನಾಗರಿಕನು ಆರೋಗ್ಯ ವಿಮೆಯ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಪ್ರಶಾಂತ ಹಂಚಾಟೆ ಮಾತನಾಡಿ, ಜಿಎಸ್‌ಟಿ ದೇಶದ ಅಭಿವೃದ್ಧಿಗೆ ಸಹಾಯಕವಾಗಿದೆ. ಆದರೆ ಆರಂಭದಲ್ಲಿ ಅನೇಕ ಸಮಸ್ಯೆಗಳು ಎದುರಾಗಿದ್ದವು. ಕೆಲವು ವ್ಯಾಪಾರಿಗಳಿಗೆ ನೋಟಿಸ್ ಬಂದಿರುವುದು ಉಂಟು. ಸಾಮಾನ್ಯವಾಗಿ ಪೇಪರ್, ಪೆನ್, ಪೆನ್ಸಿಲ್ ಮಾರುವ ಬಡವರಿಗೆ, ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಹೊರೆಯಾಗಿದೆ. ಇದಕ್ಕೆ ಕಾನೂನು ಅರಿವು ಮಹತ್ವದ್ದು. ವೈಯಕ್ತಿಕ ಖರೀದಿ ಅದರ ಮಾಹಿತಿ ಪಡೆದು ಜಾಗ್ರತೆ ವಹಿಸಬೇಕು ಎಂದು ತಿಳಿಸಿದರು.
ಪ್ರಾಚಾರ್ಯ ಡಾ. ಎನ್.ವೈ. ಬಡಣ್ಣವರ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಎಸ್.ಎಸ್. ನಾಯಿನೇಗಲಿ ಉದ್ಘಾಟಿಸಿದರು. ಸಂಸ್ಥೆಯ ನಿರ್ದೇಶಕರಾದ ರಾಜು ತಾಪಡಿಯಾ, ಪ್ರೊ. ಸಿದ್ಧಲಿಂಗಪ್ಪ ಬರಗುಂಡಿ, ಪುರುಷೋತ್ತಮ ಜಂವಾರ್, ಬಿ.ಯು. ಹಣಗಿ, ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ. ಗಿರೀಶ್ ಕುಮಾರ, ಡಾ. ಎಂ.ಪಿ. ಅಳ್ಳಿಚಂಡಿ. ಡಾ. ಚಿದಾನಂದ ನಂದಾರ, ಡಾ. ಸಣ್ಣವೀರಣ್ಣ ದೊಡ್ಡಮನಿ ಉಪಸ್ಥಿತರಿದ್ದರು.