ರಬಕವಿ ಬನಹಟ್ಟಿ ತಾಲೂಕಿನ ಯಲ್ಲಟ್ಟಿಯ ವಿಶ್ವಭಾರತಿ ಅಂತಾರಾಷ್ಟೀಯ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ನಿರ್ದೇಶಕ ಕಿರಣ ಭದ್ರನ್ನವರ ಮಾತನಾಡಿದರು. ಸದಾಶಿವ ಗೌಡಪ್ಪನವರ, ಸದಾಶಿವ ಸಂತಿ, ಗೋಪಾಲ ಲಡ್ಡಾ, ರಾಜು ಕಡಕಬಾಂವಿ ಇದ್ದರು. 
ಬಾಗಲಕೋಟೆ

ಇಂದು ವಿಶ್ವಭಾರತಿ ಅಂತಾರಾಷ್ಟೀಯ ಶಾಲೆ ಉದ್ಘಾಟನೆ

ಪ್ರಮುಖ ಮುಖ್ಯಾಂಶಗಳು

  • ಶಾಲಾ ಆವರಣದಲ್ಲಿ ಪೂರ್ವಭಾವಿ ಸಭೆ
  • ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಭಾಗಿ
ರಬಕವಿ/ಬನಹಟ್ಟಿ: ಸಮೀಪದ ಯಲ್ಲಟ್ಟಿಯಲ್ಲಿ ಜಗಜ್ಯೋತಿ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಡಿಯಲ್ಲಿ ವಿಶ್ವಭಾರತಿ ಅಂತಾರಾಷ್ಟೀಯ ಶಾಲೆಯ ಕಟ್ಟಡ ಉದ್ಘಾಟನೆ ಸಮಾರಂಭ ಮೇ 5ರಂದು ಬೆಳಗ್ಗೆ 10ಕ್ಕೆ ಜರುಗಲಿದೆ ಎಂದು ಆಡಳಿತ ಮಂಡಳಿ ನಿರ್ದೇಶಕ ಕಿರಣ ಭದ್ರನ್ನವರ ತಿಳಿಸಿದರು.
ತಾಲೂಕಿನ ಯಲ್ಲಟ್ಟಿಯ ಕುಡಚಿ-ಜಮಖಂಡಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಶಾಲಾ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹಾಗೂ ಗದಗ ಶಿರುಂಜಿಯ ಬಸವ ಸಮರ್ಥ ಸಿದ್ಧೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದಾರೆ. ಸಚಿವ ಆರ್.ಬಿ. ತಿಮ್ಮಾಪೂರ ಉದ್ಘಾಟಿಸಲಿದ್ದು, ಶಾಸಕ ಸಿದ್ದು ಸವದಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಪಿ.ಸಿ. ಗದ್ದಿಗೌಡರ, ಶಾಸಕರಾದ ಪ್ರಕಾಶ ಹುಕ್ಕೇರಿ, ಉಮಾಶ್ರೀ, ಸಿದ್ದು ಕೊಣ್ಣೂರ ಉಪಸ್ಥಿತಿಯಲ್ಲಿ ಎಂ.ಜಿ. ದಾಸರ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಅತಿಥಿಗಳಾಗಿ ಶಾಸಕರಾದ ಪಿ.ಎಚ್. ಪೂಜಾರ, ಹನಮಂತ ನಿರಾಣಿ, ಸುನೀಲಗೌಡ ಪಾಟೀಲ, ಪ್ರಾಧಿಕಾರ ಅಧ್ಯಕ್ಷ ದಾನಪ್ಪ ಹುಲಜತ್ತಿ, ಸಿ.ಎಂ. ನ್ಯಾಮಗೌಡ, ಬಿ.ಕೆ. ಕೊಣ್ಣೂರ ಆಗಮಿಸಲಿದ್ದಾರೆ ಎಂದರು.
ಸಂಸ್ಥೆ ಅಧ್ಯಕ್ಷ ಸದಾಶಿವ ಸಂತಿ, ಸದಾಶಿವ ಗೌಡಪ್ಪನವರ, ವಸಂತ ಪಾಟೀಲ, ಭಾರತಿ ನ್ಯಾಮಗೌಡ, ಸುಜಾತಾ ಹನಗಂಡಿ, ಅಪ್ಪಜಪ್ಪ ಸಂತಿ, ಗೋಪಾಲ ಲಡ್ಡಾ, ರಾಜು ಕಡಕಭಾಂವಿ, ಮುಖ್ಯಾಧ್ಯಾಪಕ ಗಣೇಶ ಚಿಕ್ಕೂಡ ಉಪಸ್ಥಿತರಿದ್ದರು.