ಗುಳೇದಗುಡ್ಡದ ಪರ್ವತಿ ಗ್ರಾಮದ ಹತ್ತಿರ ರಾಷ್ಟ್ರೀಯ ಹೆದ್ದಾರಿಯ ಅಂಡರ್ ಪಾಸ್ ರಸ್ತೆಯ ಎತ್ತರವನ್ನು ಹೆಚ್ಚಿಸುವಂತೆ ಆಗ್ರಹಿಸಿ ಮಾಜಿ ಶಾಸಕ ರಾಜಶೇಖರ ಶೀಲವಂತ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ. ಪಾಟೀಲ ನೇತೃತ್ವದಲ್ಲಿ ರೈತರು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗೆ ಮನವಿ ಸಲ್ಲಿಸಿದರು. ಪರ್ವತಿ ಗ್ರಾಮದ ನಿಂಗಪ್ಪ ಗಾಜಿ, ಗಂಗಾಧರ ಆಸಂಗಿ, ಮರಿಯಪ್ಪ ತೋಗುಣಶಿ, ರಂಗಪ್ಪ ಗುನ್ನಳ್ಳಿ, ಭೀಮಪ್ಪ ಡುಮ್ಮಳ್ಳಿ ಮತ್ತಿತರರಿದ್ದರು.
- ಪಣಜಿ-ಹೈದ್ರಾಬಾದ್ ರಾಷ್ಟ್ರೀಯ ಹೆದ್ದಾರಿ
- ಯೋಜನಾ ನಿರ್ದೇಶಕ ಪವಣ ಗುರಿವೆ ಅವರಿಗೆ ಬಾಗಲಕೋಟೆಯಲ್ಲಿ ಮನವಿ
ಗುಳೇದಗುಡ್ಡ : ಪಣಜಿ-ಹೈದ್ರಾಬಾದ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಡಿ ಪರ್ವತಿ ಗ್ರಾಮದ ಸಮೀಪ ನಿರ್ಮಾಣವಾಗುತ್ತಿರುವ ಅಂಡರ್‌ಪಾಸ್ ರಸ್ತೆಯ ಎತ್ತರವನ್ನು ಹೆಚ್ಚಿಸಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮಾಜಿ ಶಾಸಕ ರಾಜಶೇಖರ ಶೀಲವಂತ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ನೇತೃತ್ವದಲ್ಲಿ ರೈತರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಪವಣ ಗುರಿವೆ ಅವರಿಗೆ ಬಾಗಲಕೋಟೆಯಲ್ಲಿ ಮನವಿ ಸಲ್ಲಿಸಿದರು.
ಪ್ರಸ್ತುತ ಯೋಜನೆ ಪ್ರಕಾರ ಅಂಡರ್‌ಪಾಸ್ ಅಗಲ 15 ಅಡಿ ಮತ್ತು ಎತ್ತರ 10 ಅಡಿ ನಿಗದಿಯಾಗಿದೆ. ಆದರೆ ದಕ್ಷಿಣ ಭಾಗದಲ್ಲಿ 476 ಎಕರೆ ಕೃಷಿ ಭೂಮಿ ಇರುವುದರಿಂದ ರೈತರು ಈ ಮಾರ್ಗದ ಮೇಲೆಯೇ ಅವಲಂಬಿತರಾಗಿದ್ದಾರೆ. ಬೋರ್‌ವೆಲ್ ಯಂತ್ರಗಳು ಹಾಗೂ ಕಬ್ಬು ಸಾಗಿಸುವ ಟ್ರಾಕ್ಟರ್ ಟ್ರೆಲರ್‌ಗಳ ಎತ್ತರ 15-16 ಅಡಿ ಇರುವುದರಿಂದ ಸಂಚಾರಕ್ಕೆ ಅಡಚಣೆ ಉಂಟಾಗಲಿದೆ.
ಈ ಹಿನ್ನೆಲೆ, ರೈತರ ಹಿತದೃಷ್ಟಿಯಿಂದ ಅಂಡರ್‌ಪಾಸ್ ಎತ್ತರವನ್ನು ಕನಿಷ್ಠ 16 ಅಡಿಗೆ ಹೆಚ್ಚಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. ಪರ್ವತಿ ಗ್ರಾಮದ ನಿಂಗಪ್ಪ ಗಾಜಿ, ಗಂಗಾಧರ ಆಸಂಗಿ, ಮರಿಯಪ್ಪ ತೋಗುಣಶಿ, ರಂಗಪ್ಪ ಗುನ್ನಳ್ಳಿ, ಭೀಮಪ್ಪ ಡುಮ್ಮಳ್ಳಿ ಮತ್ತಿತರರಿದ್ದರು.