ಜಮಖಂಡಿ ತಾಲೂಕಿನ ಮೈಗೂರ ಗ್ರಾಮದಲ್ಲಿ ತಾಪಂ ಇಒ ಮಂಜುನಾಥ ಬಡಿಗೇರ ಹಾಗೂ ವಿವಿಧ ಗ್ರಾಮ ಪಂಚಾಯಿತಿಗಳ ಪಿಡಿಒಗಳು ಮತ್ತು ಅಧಿಕಾರಿಗಳು ವಿಬಿಜಿ ರಾಮಜಿ ಯೋಜನೆ ಕುರಿತು ಬೈಕ್ ಜಾಥಾ ಮೂಲಕ ಜಾಗೃತಿ ಮೂಡಿಸಿದರು. ಮೈಗೂರ ಗ್ರಾಪಂ ಪಿಡಿಒ ಕುತ್ಬುದ್ದಿನ್ ಖಾಜಿ, ಸಹಾಯಕ ನಿರ್ದೇಶಕ (ಗ್ರಾ.ಉ), ತಾಲೂಕಿನ ವಿವಿಧ ಗ್ರಾಪಂಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಎಸ್‌ಡಿಎಗಳು, ವಿಬಿಜಿ ರಾಮಜಿ ಸಿಬ್ಬಂದಿ ಇತರರಿದ್ದರು.
- ತಾಪಂ ಇಒ ಮಂಜುನಾಥ ಬಡಿಗೇರ ಹೇಳಿಕೆ
- ಮೈಗೂರಲ್ಲಿ ಅಧಿಕಾರಿಗಳ ಬೈಕ್ ಜಾಥಾ
- ಮೈಗೂರ ಗ್ರಾಮ ಹಾಗೂ ಪುನರ್ವಸತಿ ಕೇಂದ್ರದ ಪ್ರಮುಖ ಬೀದಿಗಳಲ್ಲಿ ಬೈಕ್ ಜಾಥಾ ನಡೆಸುವ ಮೂಲಕ ವಿಬಿಜಿ ರಾಮಜಿ ಯೋಜನೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
ವಿಬಿಜಿ ರಾಮಜಿ ಯೋಜನೆ ಸಮರ್ಪಕವಾಗಿ ಬಳಸಿಕೊಂಡರೆ ಗ್ರಾಮಗಳ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ತಾಪಂ ಇಒ ಮಂಜುನಾಥ ಬಡಿಗೇರ ಹೇಳಿದರು.
ತಾಲೂಕಿನ ಮೈಗೂರ ಗ್ರಾಮದಲ್ಲಿ ವಿಬಿಜಿ ರಾಮಜಿ ಯೋಜನೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಬೈಕ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯೋಜನೆಯ ಸೌಲಭ್ಯಗಳನ್ನು ಗ್ರಾಮಸ್ಥರು ಸಮರ್ಪಕವಾಗಿ ಬಳಸಿಕೊಂಡು ಗ್ರಾಮಾಭಿವೃದ್ಧಿಗೆ ಕೈಜೋಡಿಸಬೇಕು ಎಂದರು.
ಮೈಗೂರ ಗ್ರಾಮ ಹಾಗೂ ಪುನರ್ವಸತಿ ಕೇಂದ್ರದ ಪ್ರಮುಖ ಬೀದಿಗಳಲ್ಲಿ ಬೈಕ್ ಜಾಥಾ ನಡೆಸುವ ಮೂಲಕ ವಿಬಿಜಿ ರಾಮಜಿ ಯೋಜನೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು. ತಾಪಂ ಇಒ ಮಂಜುನಾಥ ಬಡಿಗೇರ ಸೇರಿದಂತೆ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಪಿಡಿಒಗಳು ಹಾಗೂ ಅಧಿಕಾರಿಗಳು ಜಾಥಾದಲ್ಲಿ ಪಾಲ್ಗೊಂಡು ಗಮನ ಸೆಳೆದರು.
ಮೈಗೂರ ಗ್ರಾಪಂ ಪಿಡಿಒ ಕುತ್ಬುದ್ದಿನ್ ಖಾಜಿ, ಸಹಾಯಕ ನಿರ್ದೇಶಕ (ಗ್ರಾ.ಉ), ತಾಲೂಕಿನ ವಿವಿಧ ಗ್ರಾಪಂಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಎಸ್‌ಡಿಎಗಳು, ವಿಬಿಜಿ ರಾಮಜಿ ಸಿಬ್ಬಂದಿ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಜಾಥಾದಲ್ಲಿ ಭಾಗವಹಿಸಿದ್ದರು.