ಬಾಗಲಕೋಟೆ ನವನಗರದ ಸೆಕ್ಟರ್ ನಂ.15 ರಲ್ಲಿ ಮಾಜಿ ಸಂಸದ ಪ್ರತಾಪ ಸಿಂಹ ಮತಯಾಚನೆ ಮಾಡಿದರು. ರಾಜ್ಯಸಭಾ ಸದಸ್ಯರಾದ ನಾರಾಯಣಸಾಬ ಭಾಂಡಗೆ, ಬೆಳಗಾವಿ ವಿಭಾಗದ ಬಿಜೆಪಿ ಸಹ ಪ್ರಭಾರಿ ಬಸವರಾಜ್ ಯಂಕಚಿ, ಚಂದ್ರು ರಾಮವಡಗಿ ಸೇರಿದಂತೆ ಇತರರು ಇದ್ದರು.
- ಮಾಜಿ ಸಂಸದ ಪ್ರತಾಪ್ ಸಿಂಹ ಅಭಿಮತ
- ಮನೆ ಮನೆ ತಿರುಗಿ ಮತಯಾಚನೆ
- ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಧಾರ್ಮಿಕ, ವೈಚಾರಿಕವಾಗಿ ಸೃಜನಶೀಲರಾಗಿ ಕಾರ್ಯನಿರ್ವಹಿಸಿ
ಬಾಗಲಕೋಟೆ : ನಗರದಾದ್ಯಂತ ಬಿಜೆಪಿ ಮತಪ್ರಚಾರ ಬಿರುಸಾಗಿದ್ದು ಕಾರ್ಯಕರ್ತರ ನವನಗರ ಸೆಕ್ಟೆರ್ ನಂ.15ರಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಮನೆಮನೆಗೆ ತೆರಳಿ ವೀರಣ್ಣ ಚರಂತಿಮಠ ಅವರ ಪರ ಮತಯಾಚನೆ ಮಾಡಿದರು.
ಈ ವೇಳೆ ಛತ್ರಪತಿ ಸಂಭಾಜಿ ಯುವಕ ಮಂಡಳಿ ವತಿಯಿಂದ ಏರ್ಪಡಿಸಲಾಗಿದ್ದ ಮತಪ್ರಚಾರ ಸಭೆಯಲ್ಲಿ ಭಾಗವಹಿಸಿ ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಧಾರ್ಮಿಕ, ವೈಚಾರಿಕವಾಗಿ ಸೃಜನಶೀಲರಾಗಿ ಕಾರ್ಯನಿರ್ವಹಿಸಿ ಜನಸಾಮಾನ್ಯರ ಕನಸುಗಳನ್ನು ನನಸು ಮಾಡಿದ ಕೀರ್ತಿ ವೀರಣ್ಣ ಚರಂತಿಮಠರಿಗೆ ಸಲ್ಲುತ್ತದೆ. ಅಂತಹ ನಾಯಕರನ್ನು ಬಹು ಅಂತರದಲ್ಲಿ ಗೆಲ್ಲಿಸುವ ಕೆಲಸ ಮಾಡೋಣ ಎಂದರು.
ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯರಾದ ನಾರಾಯಣಸಾಬ ಭಾಂಡಗೆ, ಬೆಳಗಾವಿ ವಿಭಾಗದ ಬಿಜೆಪಿ ಸಹ ಪ್ರಭಾರಿ ಬಸವರಾಜ ಯಂಕಚಿ, ಚಂದ್ರು ರಾಮವಡಗಿ ಸೇರಿದಂತೆ ಇತರರು ಇದ್ದರು.