ಲೋಕಾಪುರದ ಹಿಂದೂ-ಮುಸ್ಲಿಂ ಭಾವೈಕ್ಯ ಜ್ಞಾನೇಶ್ವರ ಮಠದಲ್ಲಿ ನಡೆದ ಗುರು ಅಜಮೀರ ಸಾಹೇಬರ ಉರುಸು ನಿಮಿತ್ತ ಅನ್ನಪ್ರಸಾದ ವಿತರಣೆ ನಡೆಯಿತು.
ಲೋಕಾಪುರ: ಹಿಂದೂ-ಮುಸ್ಲಿಂ ಭಾವೈಕ್ಯತೆ ಪಟ್ಟಣದ ಜ್ಞಾನೇಶ್ವರ ಮಠದಲ್ಲಿ ಪೀಠಾಧಿಕಾರಿ ಬ್ರಹ್ಮಾನಂದ ಸ್ವಾಮಿಗಳ ನೇತೃತ್ವದಲ್ಲಿ ಗುರುವಾರ ಗುರು ಅಜಮೀರ ಸಾಹೇಬರ ಉರುಸು ನೂರಾರು ಭಕ್ತರ ನಡುವೆ ಸಂಭ್ರಮದಿಂದ ನಡೆಯಿತು.
ಪಟ್ಟಣದ ಮೌಲಾಅಲಿ ಮುಲ್ಲಾ ಸಾಬ ಅವರಿಂದ ಕುರಾನ್ ಪಠಣ ನಡೆಯಿತು. ಉರುಸು ನಿಮಿತ್ತ ವೈದಿಕ ಪೂಜಾ ಪದ್ಧತಿಯೊಂದಿಗೆ ಮುಸ್ಲಿಂ ಧರ್ಮ ಸಂಪ್ರದಾಯದ ಪೂಜೆ ನಡೆಯಿತು. ಬ್ರಹ್ಮಾನಂದ ಸ್ವಾಮಿಗಳಿಂದ ಗುರು ಅಜಮೀರ ಸಾಹೇಬರ ಗದ್ದುಗೆಗೆ ವಿಶೇಷ ಪೂಜೆ, ಅಲಂಕಾರ, ಧೂಪ-ದೀಪ ನಡೆಯಿತು. ಲೋಕಾಪುರ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಪಾಲ್ಗೊಂಡಿದ್ದರು.