ಮಹಾಲಿಂಗಪುರದ ಕೆಎಲ್‌ಇ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ಬದುಕು-ನೆನಪು ಹಾಗೂ ಇತಿಹಾಸದ ಮೆರಗು ಪ್ರಬಂಧಗಳನ್ನು ಸಹಜಯೋಗಿ ಸಹಜಾನಂದ ಶ್ರೀಗಳು ಲೋಕಾರ್ಪಣೆಗೊಳಿಸಿದರು. ಕಿರಣ ರಾಮ, ಎಸ್.ಐ. ಕುಂದಗೋಳ ಇದ್ದರು.
- ಕಿರಣರಾಮ ಹೇಳಿಕೆ
- ರಾಷ್ಟ್ರೋತ್ಥಾನ ಪರಿಷತ್‌ನಿಂದ ಪುಸ್ತಕ ಲೋಕಾರ್ಪಣೆ
ಮಹಾಲಿಂಗಪುರ: ರಾಷ್ಟ್ರೋತ್ಥಾನ ಬಳಗ ಮೈ.ಚ. ಜಯದೇವ ಅವರ ಕಲ್ಪನೆ ಕೂಸು. ಸ್ವಾರ್ಥ ಎನ್ನುವುದು ಲವಲೇಶವೂ ಹೊಂದಿರದ ಜಯದೇವ ಪರಾರ್ಥಕ್ಕಾಗಿ ಬದುಕಿದರು ಎಂದು ಯುವ ಬ್ರಿಗೇಡ್ ರಾಜ್ಯ ಪ್ರಕಲ್ಪ ಪ್ರಮುಖ ಹಾಗೂ ಪ್ರಶಿಕ್ಷಣ ಭಾರತಿ ಸಂಪನ್ಮೂಲ ವ್ಯಕ್ತಿ ಕಿರಣರಾಮ ಹೇಳಿದರು.
ನಗರದ ಕೆಎಲ್‌ಇ ಪಾಲಿಟೆಕ್ನಿಕ್ ಕಾಲೇಜ ಸಾಭಾಭವನದಲ್ಲಿ ಶನಿವಾರ ಸಂಜೆ ರಾಷ್ಟ್ರೋತ್ಥಾನ ಪರಿಷತ್, ಬೆಂಗಳೂರು ಹಾಗೂ ರಾಷ್ಟ್ರೋತ್ಥಾನ ಬಳಗ ಬಾಗಲಕೋಟೆ ಜಿಲ್ಲೆ ವತಿಯಿಂದ ಜರುಗಿದ ಅವಿಶ್ರಾಂತ ಧ್ಯೆಯ ಜೀವಿ, ಮೈ.ಚ. ಜಯದೇವ ಬದುಕು-ನೆನಪು ಹಾಗೂ ಎಸ್.ಆರ್.ರಾಮಸ್ವಾಮಿಯವರ ಪರಾಮರ್ಶೆ ಪ್ರಬಂಧ ಇತಿಹಾಸದ ಸೆರಗು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಾಲಿಯನ್‌ವಾಲಿಬಾಗ ಸೇರಿ ಅನೇಕ ಸಂಗತಿಗಳನ್ನು ತಿರುಚಿ ಜನತೆಯ ಮುಂದಿಡಲಾಗಿದೆ ಎಂಬದು ಈ ಪುಸ್ತಕದಲ್ಲಿದೆ. ಗತಿಸಿ ಹೋದ ಇತಿಹಾಸದ ಅನೇಕ ಸತ್ಯ ಘಟನೆಗಳನ್ನು ಅನಾವರಣ ಮಾಡಲಾಗಿದೆ ಎಂದರು.
ಸಹಜಯೋಗಿ ಸಹಜಾನಂದ ಶ್ರೀಗಳು ಮಾತನಾಡಿ, ಭಾರತೀಯ ಸಂಸ್ಕೃತಿಯನ್ನು ತಲೆಕೆಳಗಾಗಿಸುವ ಶಿಕ್ಷಣ ವ್ಯವಸ್ಥೆ ನಮ್ಮಲ್ಲಿ ಇದೆ. ಮೈ.ಚ. ಜಯದೇವ ಹಾಗೂ ರಾಮಸ್ವಾಮಿಯವರ ಪ್ರಬಂಧಗಳಂತಹ ವಿಷಯಗಳನ್ನು ಪಠ್ಯದಲ್ಲಿ ಸೇರಿಸಬೇಕು. ಯವುದಕ್ಕೂ ಆಸೆ ಪಡದೇ, ಬೇಡದೇ ನೀಡುವ ಕೈಗಳ ಸಂಸ್ಥೆ ರಾಷ್ಟ್ರೋತ್ಥಾನ ಸಂಸ್ಥೆ ನಮ್ಮ ದೇಶದ ಹೆಮ್ಮೆ ಎಂದರು.
ಶಾಸಕ ಸಿದ್ದು ಸವದಿ,ಸುರೇಶ ಅಕ್ಕಿವಾಟ, ಕೆಎಲ್‌ಇ ಪಾಲಿಟೆಕ್ನಿಕ್ ಪ್ರಾಚಾರ್ಯ ಎಸ್.ಐ. ಕುಂದಗೋಳ, ನಾಗರಾಳ ಗ್ರಾಮದ ಮಾಧವಾನಂದ ಪ್ರಾಥಮಿಕ ಶಾಲೆಯ ಅಧ್ಯಕ್ಷ ವಿಠ್ಠಲಗೌಡ ನ್ಯಾಮಗೌಡ, ಪ್ರಶಿಕ್ಷಣ ಭಾರತಿ ಜಿಲ್ಲಾ ಸಂಚಾಲಕ ನಾರನಗೌಡ ಉತ್ತಂಗಿ, ಮಹಾಲಿಂಗಪ್ಪ ಕಂಕನವಾಡಿ, ವೇಮನ ಗಿರಡ್ಡಿ,ಬಸವರಾಜ ನಿಂಗನೂರ, ಯಲ್ಲಪ್ಪ ಜಗದಾಳ ಇತರರಿದ್ದರು.
ವಿಜಯಲಕ್ಷ್ಮೀ ಕುಳ್ಳೋಳ್ಳಿ ಪ್ರಾರ್ಥಿಸಿದರು. ಪ್ರೊ.ಶಿವಲಿಂಗ ಸಿದ್ನಾಳ ಪರಿಚಯಿಸಿದರು. ಶಿಕ್ಷಕಿ ಸಪ್ನಾ ಅನಿಗೋಳ ನಿರೂಪಿಸಿದರು. ಪ್ರೀತಿ ಕಲ್ಯಾಣಿ ವಂದಿಸಿದರು. ಶಂಕ್ರೆಮ್ಮ ಮಾತಾಜಿ ಅವರ ಶಾಂತಿ ಮಂತ್ರದ ಮೂಲಕ ಕಾರ್ಯಕ್ರಮ ಮುಕ್ತಾಯವಾಯಿತು.