ಇಳಕಲ್ಲ ನಗರದ ಕುಲಕರ್ಣಿ ಪೇಟೆ ನಿವಾಸಿಗಳು ನಗರಸಭೆ ಎದುರು ಪ್ರತಿಭಟನೆ ನಡೆಸಿದರು. ರಾಜು ಕುಲಕರ್ಣಿ, ಅಮರೇಶ ತುಗಲಿ, ರವಿಕುಮಾರ ಲಿಂಗಸುಗೂರು, ಮಹಾಂತೇಶ ಮೂರಂಕಣ, ರಾಘವೇಂದ್ರ, ಮಂಜುಳಾ ಲಾಲಿ, ನರ್ಮಂದಾ ತುಗಲಿ ಇತರರಿದ್ದರು 
ಬಾಗಲಕೋಟೆ

ಕುಲಕರ್ಣಿ ಪೇಟೆಯ ನಿವಾಸಿಗಳಿಂದ ಹೋರಾಟ

ಇಳಕಲ್ಲ: ಕಳೆದ ಒಂದು ತಿಂಗಳಿನಿಂದ ಸರಿಯಾಗಿ ಕುಡಿಯುವ ನೀರು ಪೂರೈಸಿಲ್ಲ. ಕುಡಿಯಲು, ಬಳಕೆ ಮಾಡಲು ನೀರು ಇಲ್ಲದಂತಾಗಿದೆ ಎಂದು ನಗರದ ಕುಲಕರ್ಣಿ ಪೇಟೆಯ ನಿವಾಸಿಗಳು ಮಂಗಳವಾರ ಪ್ರತಿಭನೆ ನಡೆಸಿದರು.
ಪ್ರತಿಭಟನೆ ಮೆರವಣಿಗೆ ಮೂಲಕ ನಗರಸಭೆ ಕಚೇರಿಗೆ ಆಗಮಿಸಿದ ನಿವಾಸಿಗಳು ಅಧಿಕಾರಿಗಳು- ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರಾಜು ಕುಲಕರ್ಣಿ ಮಾತನಾಡಿ, ಬೇಸಿಗೆ ಸಮಯದಲ್ಲಿ ನಗರಸಭೆ ಅಧಿಕಾರಿಗಳು ನಗರದ ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದ ಕುಲಕರ್ಣಿ ಪೇಟೆಯಲ್ಲಿ ನೀರು ಬರುತ್ತಿಲ್ಲ. ಕೇವಲ ಭರವಸೆಗಳಲ್ಲಿ ಕಾಲ ಹರಣ ಮಾಡುತ್ತಿದ್ದಾರೆ. ಆದರೇ ನೀರು ಹರಿಸುತ್ತಿಲ್ಲ. ಹೀಗೆ ಆದರೆ ಹೇಗೆ ಎಂದು ಪ್ರಶ್ನೆಗಳ ಸುರಿಮಳೆಗೈದರು.
ಅಮರೇಶ ತುಗಲಿ, ರವಿಕುಮಾರ ಲಿಂಗಸಗೂರು, ಮಹಾಂತೇಶ ಮೂರಂಕಣ, ರಾಘವೇಂದ್ರ, ಮಂಜುಳಾ ಲಾಲಿ, ನರ್ಮಂದಾ ತುಗಲಿ, ಮಮತಾ, ಜ್ಯೋತಿ, ಸ್ವಾತಿ ಇದ್ದರು.
"

ಬೇಸಿಗೆ ಸಮಯದಲ್ಲಿ ಜನರಿಗೆ ಕುಡಿಯುವ ನೀರು ಪೂರೈಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಕೂಡಲೇ ನೀರಿನ ಸಮಸ್ಯೆಯನ್ನು ಸರಿಪಡಿಸಬೇಕು. ಇಲ್ಲವಾದಲ್ಲಿ ಇಳಕಲ್ಲ ನಗರ ಬಂದ್‌ಗೆ ಕರೆ ಕೊಡಲಾಗುವುದು.