ಬಾಗಲಕೋಟೆ ಬಿವಿವಿ ಸಂಘದ ಪಿ.ಎಂ.ನಾಡಗೌಡ ದಂತ ವೈದ್ಯಕೀಯ ಕಾಲೇಜಿನಲ್ಲಿ ಸೋಮವಾರ ದಂತ ವಿಜ್ಞಾನ ಶಿಕ್ಷಣ ಕಾರ್ಯಾಗಾರದಲ್ಲಿ ಭಾರತೀಯ ಬಾಯಿ ಮತ್ತು ಮುಖದ ಶಸöಚಿಕಿತ್ಸಾ ತಜ್ಞರ ಸಂಘದ ಕರ್ನಾಟಕ ಶಾಖೆಯ ವಿದ್ಯುನ್ಮಾನ ವಾರ್ತಾ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ಶಾಖೆಯ ಅಧ್ಯಕ್ಷ ಡಾ.ವೆಂಕಟೇಶ ಆನೆಹೊಸುರ, ಅಶೋಕ ಸಜ್ಜನ, ಡಾ.ಮಮತಾ, ಡಾ.ರವಿರಾಜ ದೇಸಾಯಿ ಮತ್ತಿತರರು ಇದ್ದರು.
ಬಾಗಲಕೋಟೆ: ತಂತ್ರಜ್ಞಾನದ ಪರಿಣಾಮ ಇಂದಿನ ದಿನಗಳಲ್ಲಿ ದಂತ ವಿಜ್ಞಾನದ ಅಧ್ಯಯನಕ್ಕೆ ಅಗತ್ಯವಾದ ಮಾಹಿತಿ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುತ್ತಿದೆ. ಲಭ್ಯವಿರುವ ಸಂಪನ್ಮೂಲ ಬಳಸಿಕೊಂಡು ದಂತ ವೈದ್ಯಕೀಯ ಕ್ಷೇತ್ರದಲ್ಲಿ ಪರಿಣಿತಿ ಸಾಽಸಲು ಸಾಧ್ಯವಿದೆ. ಅಧ್ಯಯನದ ಜೊತೆಗೆ ಯುವ ದಂತ ವೈದ್ಯರಿಗೆ ತರಬೇತಿಯನ್ನು ನೀಡುವುದು ಅಗತ್ಯವಿದೆ ಎಂದು ಭಾರತೀಯ ಬಾಯಿ ಮತ್ತು ಮುಖದ ಶಸ್ತçಚಿಕಿತ್ಸಾ ತಜ್ಞರ ಕರ್ನಾಟಕ ಶಾಖೆಯ ಅಧ್ಯಕ್ಷ ಡಾ.ವೆಂಕಟೇಶ ಆನೆಹೊಸುರ ಅಭಿಪ್ರಾಯಪಟ್ಟರು.
ಬಿವಿವಿ ಸಂಘದ ಪಿ.ಎಂ.ನಾಡಗೌಡ ಮೆಮೋರಿಯಲ್ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಸೋಮವಾರ ಬಾಯಿ ಮತ್ತು ಮುಖದ ಶಸ್ತçಚಿಕಿತ್ಸಾ ವಿಭಾಗ ಮತ್ತು ಭಾರತೀಯ ಬಾಯಿ ಮತ್ತು ಮುಖದ ಶಸ್ತçಚಿಕಿತ್ಸಾತಜ್ಞರ ಸಂಘದ ಕರ್ನಾಟಕ ಶಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ದಂತ ವಿಜ್ಞಾನ ಶಿಕ್ಷಣ ಕಾರ್ಯಾಗಾರದಲ್ಲಿ ಮಾತನಾಡಿದರು.
ಭಾರತೀಯ ಬಾಯಿ ಮತ್ತು ಮುಖದ ಶಸ್ತçಚಿಕಿತ್ಸಾ ತಜ್ಞರ ಕರ್ನಾಟಕ ಶಾಖೆಯ ಮೂಲಕ ದಂತ ವೈದ್ಯಕೀಯ ಕಾರ್ಯಾಗಾರಗಳನ್ನು ರಾಜ್ಯಾದ್ಯಂತ ಆಯೋಜಿಸಲು ಯೋಜನೆ ರೂಪಿಸಲಾಗಿದೆ. ಈ ಮೂಲಕ ದಂತ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮತ್ತು ದಂತ ವೈದ್ಯರಿಗೆ ಪರಿಣತಿ ಹೊಂದಲು ಪ್ರಯೋಜನವಾಗಲಿದೆ. ಇದರಿಂದ ರೋಗಿಗÀಳಿಗೆ ತೊಂದರೆಯಾಗದAತೆ ಚಿಕಿತ್ಸೆ ನೀಡಿ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿವಿವಿ ಸಂಘದ ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, ಪಿಎಂಎನ್‌ಎA ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆ ರಾಜ್ಯದ ಪ್ರತಿಷ್ಠಿತ ಸಂಸ್ಥೆ ಎನ್ನುವ ಗೌರವಕ್ಕೆ ಪಾತ್ರವಾಗಿದೆ. ಕಾರ್ಯಾಗಾರದಲ್ಲಿನ ವಿಷಯ ಪರಿಣತರ ಚರ್ಚೆ ಮತ್ತು ಸಂವಾದಗಳಿAದ ಹೊಸ ಅವಿಷ್ಕಾರಗಳು ದಂತ ವೈದ್ಯಕೀಯ ಕ್ಷೇತ್ರಕ್ಕೆ ಲಭ್ಯವಾಗಲಿ ಎಂದರು.
ಪ್ರಾಚಾರ್ಯ ಡಾ.ರವಿರಾಜ ದೇಸಾಯಿ, ದಂತ ವೈದ್ಯರಲ್ಲಿ ದಂತ ವಿಜ್ಞಾನದ ಹೊಸ ಅವಿಷ್ಕಾರಗಳ ಕುರಿತು ಚರ್ಚೆ ಮತ್ತು ಸಂವಾದ ನಡೆಸಲು ಕಾರ್ಯಾಗಾರಗಳು ಉಪಯುಕ್ತವಾಗಿವೆ. ವಿಶೇಷವಾಗಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮತ್ತು ಯುವ ವೈದ್ಯರಿಗೆ ಪ್ರಯೋಜನವಾಗಲಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಭಾರತೀಯ ಬಾಯಿ ಮತ್ತು ಮುಖದ ಶಸ್ತçಚಿಕಿತ್ಸಾತಜ್ಞರ ಸಂಘದ ಕರ್ನಾಟಕ ಶಾಖೆಯ ವಿದ್ಯುನ್ಮಾನ ವಾರ್ತಾಪತ್ರಿಕೆಯನ್ನು (ಇ-ನ್ಯೂಸ್ ಲೆಟರ್) ಬಿಡುಗಡೆಗೊಳಿಸಲಾಯಿತು. ಪತ್ರಿಕೆ ಕುರಿತು ಸಂಪಾದಕಿ ಡಾ.ಮಮತಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಖ್ಯಾತ ಬಾಯಿ ಮತ್ತು ಮುಖದ ಶಸ್ತçಚಿಕಿತ್ಸಾ ತಜ್ಞರಾದ ಡಾ.ಸತ್ಯಜೀತ ದಂಡಗಿ ಮತ್ತು ಡಾ.ಮಮತಾ ಅವರಿಂದ ವಿಶೇಷ ಉಪನ್ಯಾಸ ನಡೆಯಿತು. ವಿವಿಧ ಜಿಲ್ಲೆಗಳ ಮತ್ತು ನೆರೆಯ ರಾಜ್ಯಗಳಿಂದ ಐವತ್ತಕ್ಕೂ ಹೆಚ್ಚು ದಂತ ವೈದ್ಯರು ಮತ್ತು ವಿದ್ಯಾರ್ಥಿಗಳು ಶಿಬಿರಾರ್ಥಿಗಳಾಗಿ ಪಾಲ್ಗೊಂಡಿದ್ದರು.
ಡಾ.ಭೀಮಪ್ಪ, ಡಾ.ಗಂಗಾಧರ, ಡಾ.ಪಾರ್ವತಿ, ಡಾ.ವಿಶ್ವನಾಥ, ಡಾ.ಸುಮಾ ಸರಾಫ, ಡಾ.ಆಶಾ ಬಡದೇಸಾಯಿ, ಡಾ.ಸೌಮ್ಯ ಸೂಳಿಭಾವಿ, ಡಾ.ಗಿರೀಶ ಚೌರ, ಡಾ.ಶ್ರದ್ಧಾ ಮತ್ತು ಡಾ.ಶ್ರೇಯಾ ಇದ್ದರು.