ಬಾಗಲಕೋಟೆ ಬಿವಿವಿ ಸಂಘದ ಎಸ್. ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಮೃತ ಶರೀರ ಆಧಾರಿತ ಶಸ್ತ್ರಚಿಕಿತ್ಸಾ ಕಾರ್ಯಾಗಾರವನ್ನು ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಉದ್ಘಾಟಿಸಿದರು. ಮಹೇಶ ಅಥಣಿ, ಅಶೋಕ ಸಜ್ಜನ, ಡಾ. ಭುವನೇಶ್ವ ರಿ ಯಳಮಲಿ ಮತ್ತಿತರರಿದ್ದರು. 
ಬಾಗಲಕೋಟೆ

ಶಸ್ತ್ರಚಿಕಿತ್ಸಾ ತಜ್ಞರಿಗೆ ತರಬೇತಿ ಅಗತ್ಯವಿದೆ

ಶಿಲ್ಪಾ ಪವಾರ

ಪ್ರಮುಖ ಮುಖ್ಯಾಂಶಗಳು

  • ಮೃತ ಶರೀರ
  • ಶಸ್ತ್ರಚಿಕಿತ್ಸಾ
  • ಕಾರ್ಯಾಗಾರ
ಬಾಗಲಕೋಟೆ: ವೈದ್ಯಕೀಯ ಕ್ಷೇತ್ರದಲ್ಲಿ ಶಸ್ತ್ರಚಿಕಿತ್ಸೆ ಅತ್ಯಂತ ಸೂಕ್ಷ್ಮವಾದ ಕಾರ್ಯ ವಿಧಾನವಾಗಿದೆ. ಈ ಕ್ಷೇತ್ರದಲ್ಲಿ ವೈದ್ಯರು ಪರಿಣಿತಿಯನ್ನು ಸಾಧಿಸಲು ಅವರಿಗೆ ಹೆಚ್ಚಿನ ತರಬೇತಿ ಅಗತ್ಯವಿದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಅಭಿಪ್ರಾಯಪಟ್ಟರು.
ಬಿವಿವಿ ಸಂಘದ ಎಸ್. ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಮೃತ ಶರೀರ ಆಧಾರಿತ ಶಸ್ತ್ರಚಿಕಿತ್ಸಾ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ವೈದ್ಯಕೀಯ ಕ್ಷೇತ್ರದಲ್ಲಿ ಮೃತ ಶರೀರವನ್ನು ಶಸ್ತ್ರಚಿಕಿತ್ಸಾ ತರಬೇತಿಗಾಗಿ ಉಪಯೋಗಿಸುತ್ತಿರುವುದು ಹೊಸ ವಿಧಾನವಾಗಿದೆ. ಈ ವಿಧಾನವು ಶಸ್ತ್ರಚಿಕಿತ್ಸಾ ತಜ್ಞರು ಪರಿಣತಿ ಹೊಂದಲು ಉಪಯುಕ್ತವಾಗಿದೆ. ತಲೆಬುರುಡೆ ಆಧಾರಿತ ಶಸ್ತ್ರಚಿಕಿತ್ಸೆ ಕಾರ್ಯಾಗಾರವು ಉತ್ತರ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಆಯೋಜಿಸುತ್ತಿರುವುದು ಅಭಿಮಾನದ ಸಂಗತಿ. ಕರ್ನಾಟಕ ಮಾತ್ರವಲ್ಲದೆ ಬೇರೆ ರಾಜ್ಯಗಳ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ವೈದ್ಯರು ಇಲ್ಲಿ ಶಸ್ತ್ರಚಿಕಿತ್ಸಾ ತರಬೇತಿ ಪಡೆಯುತ್ತಿರುವರು ಎಂದರು.
ಅನಾಟಮಿ ವಿಭಾಗದ ಮುಖ್ಯಸ್ಥ ಡಾ. ಸಂಜೀವ ಕೊಳಗಿ ಮಾತನಾಡಿ, 50 ಲಕ್ಷ ರೂ. ವೆಚ್ಚದಲ್ಲಿ ಸ್ಥಾಪಿಸಲಾದ ಮೃತ ಶರೀರ ಆಧಾರಿತ ಶಸ್ತ್ರಚಿಕಿತ್ಸಾ ಕೌಶಲ ಪ್ರಯೋಗಾಲಯದಲ್ಲಿ ಇದುವರೆಗೆ 20 ಕ್ಕೂ ಹೆಚ್ಚು ಶಸ್ತ್ರಚಿಕಿತ್ಸಾ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ. ತಲೆಬುರುಡೆಯ ಕೆಳಭಾಗವು ಬೆನ್ನುಹುರಿ, ಅನೇಕ ರಕ್ತನಾಳಗಳು ಮತ್ತು ನರಗಳು ಹಾದು ಹೋಗುವ ತುಂಬ ಸಂಕೀರ್ಣ ಮತ್ತು ಸೂಕ್ಷ್ಮ ಭಾಗವಾಗಿದೆ. ಈ ಕಾರ್ಯಾಗಾರದಲ್ಲಿ ಮೃತ ಶರೀರದ ತಲೆ ಬುರುಡೆಯ ಕೆಳಭಾಗದಲ್ಲಿ ಶಸ್ತ್ರಚಿಕಿತ್ಸೆ ತರಬೇತಿ ನೀಡಲಾಗುತ್ತಿದೆ ಎಂದರು.
ಹುಬ್ಬಳ್ಳಿ ಕರ್ನಾಟಕ ಮೆಡಿಕಲ್ ಕಾಲೇಜಿನ ಇಎನ್‌ಟಿ ತಜ್ಞ ಡಾ. ರವೀಂದ್ರ ಗದಗ ಮತ್ತು ಡಾ. ಮಂಜುನಾಥ ದಂಡಿ, ಎಸ್.ಎನ್. ಮೆಡಿಕಲ್ ಕಾಲೇಜಿನಲ್ಲಿರುವ ಮೃತಶರೀರ ಆಧಾರಿತ ಶಸ್ತ್ರಚಿಕಿತ್ಸಾ ಕೌಶಲ ಪ್ರಯೋಗಾಲಯ ಇಡೀ ಭಾರತದಲ್ಲೇ ಅತ್ಯುತ್ತಮ ಪ್ರಯೋಗಾಲಯವಾಗಿದೆ. ದೇಶ ಮತ್ತು ವಿದೇಶಗಳಿಂದ ವೈದ್ಯರು ಇಲ್ಲಿ ತರಬೇತಿ ಪಡೆಯಲು ಬರುತ್ತಿರುವುದು ಹೆಮ್ಮೆಯ ಸಂಗತಿ.
ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, ಮೆಡಿಕಲ್ ಕಾಲೇಜಿನ ಪ್ರಾಚಾರ್ಯೆ ಡಾ. ಭುವನೇಶ್ವರಿ ಯಳಮಲಿ, ವೈದ್ಯಕೀಯ ಅಧಕ್ಷಕ ಡಾ. ಶ್ರೀರಾಮ ಕೋರಾ, ಇಎನ್‌ಟಿ ವಿಭಾಗದ ಮುಖ್ಯಸ್ಥ ಡಾ. ಸಿ.ಎಸ್. ಹಿರೇಮಠ ಮತ್ತಿತರರು ಇದ್ದರು.
ವಿವಿಧ ರಾಜ್ಯಗಳಿಂದ ಮತ್ತು ನೆರೆಯ ರಾ ಸುಮಾರು 50 ಶಸ್ತ್ರಚಿಕಿತ್ಸಾ ತಜ್ಞರು ತರಬೇತಿಗಾಗಿ ಪಾಲ್ಗೊಂಡಿದ್ದರು. ಒಟ್ಟು ಐದು ದಿನಗಳ ಕಾಲ ಈ ಕಾರ್ಯಾಗಾರ ನಡೆಯಲಿದೆ. ರಾಜ್ಯದ ವಿವಿಧ ವೈದ್ಯಕೀಯ ಸಂಸ್ಥೆಗಳ ಇಎನ್‌ಟಿ ತಜ್ಞ ವೈದ್ಯರು