ಜಮಖಂಡಿ ತಾಲೂಕಿನ ಗೊಠೆ ಗ್ರಾಮದಲ್ಲಿ ಸತ್ಯಶೋಧಕ ಸಂಘ, ಜಾತ್ಯಾತೀತ, ಬಹುತ್ವ ಕರ್ನಾಟಕ ಸಂಕಲ್ಪದ ಸರ್ವ ಜಾತಿ ಸರ್ವಧರ್ಮ, ಸಹೋದರತ್ವ ಸಮಾವೇಶ, ಬಸವ-ಭೀಮ ಸಂಗಮ ಕಾರ್ಯಕ್ರಮವನ್ನು ಸಚಿವರಾದ ಸತೀಶ ಜಾರಕಿಹೊಳಿ, ವಿಜಯಾನಂದ ಕಾಶಪ್ಪನವರ ಉದ್ಘಾಟಿಸಿದರು. ಶಾಸಕ ಜೆ.ಟಿ. ಪಾಟೀಲ, ಪರಶುರಾಮ ಮಹಾರಾಜನವರ, ಗಂಗಾ ಅನಂತಪುರ, ಬಿ.ಎಸ್. ಸಿಂಧೂರ ಇತರರಿದ್ದರು.
- ಸಚಿವ ಸತೀಶ ಜಾರಕಿಹೊಳಿ ಹೇಳಿಕೆ
- ಬಸವ-ಭೀಮ ಸಂಗಮ ಕಾರ್ಯಕ್ರಮ
ಇತಿಹಾಸ ಮರೆಮಾಚುವ ಕಾರ್ಯ ಮೊದಲಿಂದಲೂ ನಡೆದುಕೊಂಡು ಬಂದಿದೆ, ಶಿವಾಜಿ ಮಹಾರಾಜರ ಇತಿಹಾಸವನ್ನು ಮರೆಮಾಚಿದವರೇ ಇಂದು ಶಿವಾಜಿ ಮಹಾರಾಜರನ್ನು ತಲೆ ಮೆಲೆ ಹೊತ್ತುಕೊಂಡಿದ್ದಾರೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ತಾಲೂಕಿನ ಗೊಠೆ ಗ್ರಾಮದಲ್ಲಿ ಸತ್ಯಶೋಧಕ ಸಂಘ, ಜಾತ್ಯಾತೀತ, ಬಹುತ್ವ ಕರ್ನಾಟಕ ಸಂಕಲ್ಪದ ಸರ್ವ ಜಾತಿ ಸರ್ವ ಧರ್ಮ, ಸಹೋದರತ್ವ ಸಮಾವೇಶ, ಬಸವ-ಭೀಮ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಸವಣ್ಣನವರನ್ನು ಇತಿಹಾಸದಿಂದ ಅಳಿಸಿ ಹಾಕಲು ಅವರ ಕೆಲ ವಚನಗಳನ್ನೇ ಸುಟ್ಟು ಹಾಕಿದರು, ತಾಳಿಕೋಟೆ ಬಹಮನಿ ಸುಲ್ತಾನರು ಬರಿಯದೆ ಇದ್ದಿದ್ದರೆ ಬಸವಣ್ಣವರ ಇತಿಹಾಸ ಹೊರಗೆ ಬರುತ್ತಿರಲಿಲ್ಲ. ಜ್ಯೋತಿಬಾ ಫುಲೆ ಬರಿಯದೇ ಇದ್ದಿದ್ದರೆ ಶಿವಾಜಿ ಮಹಾರಾಜರ ಇತಿಹಾಸ ಹೊರಗೆ ಬರುತ್ತಿರಲಿಲ್ಲ. ಸಂವಿಧಾನ ಬದಲಿಸಿ ಅಂಬೇಡ್ಕರ್ ಅವರನ್ನು ಇತಿಹಾಸದಿಂದ ಮರೆಮಾಚುವ ಷಡ್ಯಂತ್ರ ನಡೆದಿದೆ ಅದಕ್ಕೆ ತಾವೆಲ್ಲರೂ ವಿರೋಽಸಬೇಕು ಅದಕ್ಕೆ ತಾವೆಲ್ಲರೂ ಬರಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಮಾತನಾಡಿ, ನಮ್ಮಲ್ಲಿ ಸಮಾನತೆ, ಸಾಮಾಜಿಕ ನ್ಯಾಯದ ಕೊರತೆಯಿದೆ, ಬಸವಣ್ಣ ಮಾನವರಾಗಿ ನಡೆಯಬೇಕು ಎಂದು ಹೇಳಿದರು. ಸ್ವಾತಂತ್ರ‍್ಯ ದೊರೆತು 80 ವಷÀ ಕಳೆದರೂ ಸಮಾನತೆ ಮೂಡಿಸಿಲ್ಲ, ಸಮಾನತೆ ಮೇಲೆ ಸಮಾಜ ಕಟ್ಟಬೇಕಾಗಿದೆ. ನಮ್ಮ ಸ್ವಾರ್ಥಕ್ಕೆ ಸಮಾಜ ಬಲಿ ಕೊಡಬಾರದು ಎಂದರು.
ಬೀಳಗಿ ಶಾಸಕ ಜೆ.ಟಿ. ಪಾಟೀಲ ಮಾತನಾಡಿ, ಬಸವಣ್ಣ ತತ್ವಕ್ಕೆ ತಿಲಾಂಜಲಿ ನೀಡಿ ತದ್ವಿರುದ್ಧವಾಗಿ ನಡೆಯುತ್ತಿದ್ದೇವೆ. ಎಲ್ಲರೂ ಆರ್ಥಿಕ ಮತ್ತು ಶೈಕ್ಷಣಿಕವಾಗಿ ಮುಂದೆ ಬರಬೇಕು, ಸಂವಿಧಾನ ಉಳಿಸಿಕೊಳ್ಳಬೇಕು ಕೆಲವರು ಹಾಳು ಮಾಡಲು ಹೊಟ್ಟಿದ್ದಾರೆ. ಅಂಬೇಡ್ಕರ್ ಅವರ ಆಶಯಗಳು ಇನ್ನೂ ಈಡೇರಿಲ್ಲ ಎಂದರು.
ಸಂಘದ ಅಧ್ಯಕ್ಷ ಪರಶುರಾಮ ಮಹಾರಾಜನವರ, ಗಂಗಾ ಅನಂತಪುರ ಮಾತನಾಡಿದರು.
ಬಿ.ಎಸ್. ಸಿಂಧೂರ, ನಜೀರ ಕಂಗನೊಳ್ಳಿ, ಸಿದ್ದು ಕೊಣ್ಣೂರ, ಸುಶೀಲಕುಮಾರ ಬೆಳಗಲಿ, ಸಮೀರ ಕಂಗನೊಳ್ಳಿ, ಬಿ.ಜಿ. ಪಾಟೀಲ ಇತರರಿದ್ದರು. ಸಂತೋಷ ತಳಕೇರಿ ಸ್ವಾಗತಿಸಿ ನಿರೂಪಿಸಿದರು.