ಬಾಗಲಕೋಟೆ ಬಸವೇಶ್ವರ ಮೈದಾನದಲ್ಲಿ ಮಂಗಳವಾರ ನಾಲ್ಕು ದಿನಗಳ ಡಾ.ಹಾನಿಮನ್ ಟ್ರೋಫಿ ಅಂತರ ಕಾಲೇಜು ಕ್ರಿಕೆಟ ಟೂರ್ನಾಮೆಂಟಗೆ ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಅವರು ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿದರು.
ಬಾಗಲಕೋಟೆ: ಕ್ರೀಡಾಕೂಟವು ಕೇವಲ ದೈಹಿಕ ಚಟುವಟಿಕೆಯಲ್ಲ, ಅದು ವ್ಯಕ್ತಿತ್ವ ವಿಕಸನ, ಶಿಸ್ತು ಮತ್ತು ಒಗ್ಗಟ್ಟಿನ ಸಂಕೇತವಾಗಿದೆ. ಯುವ ಸಮೂಹ ದೇಶಿ ಕ್ರೀಡೆಗಳಿಗೂ ಹೆಚ್ಚಿನ ಒತ್ತು ನೀಡಬೇಕು ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಸಲಹೆ ನೀಡಿದರು.
ನಗರದ ಬಿವಿವಿಎಸ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮಂಗಳವಾರ ಬಸವೇಶ್ವರ ಮೈದಾನದಲ್ಲಿ ಆಯೋಜಸಿದ್ದ ನಾಲ್ಕು ದಿನಗಳ ಡಾ.ಹಾನಿಮನ್ ಟ್ರೋಫಿ ಅಂತರ ಕಾಲೇಜು ಕ್ರಿಕೆಟ ಟೂರ್ನಾಮೆಂಟಗೆ ಚಾಲನೆ ನೀಡಿ ಮಾತನಾಡಿದರು.
ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಸೋಲು-ಗೆಲುವು ಸಮಾನವಾಗಿ ಸ್ವೀಕರಿಸುವ ಮನೋಭಾವ ಹಾಗೂ ಜೀವನದ ಕಠಿಣ ಸವಾಲುಗಳನ್ನು ಎದುರಿಸುವ ಛಲವನ್ನು ಬೆಳೆಸುತ್ತದೆ ಎಂದು ಅಭಿಪ್ರಾಯಪಟ್ಟರು.
ಬಿವಿವ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ಮಾತನಾಡಿ, ಬಿವಿವಿ ಸಂಘವು ಪಠ್ಯದ ಜೊತೆಗೆ ಕ್ರೀಡಾ ಚಟುವಟಿಕೆಗಳಿಗೂ ಹೆಚ್ಚಿನ ಪ್ರಮುಖ್ಯತೆ ನೀಡುತ್ತ ಬಂದಿದೆ. ಕ್ರೀಡೆಗಾಗಿ ಕೋಟ್ಯಂತರ ರೂಪಾಯಿ ವ್ಯಯಿಸಿ ಒಳಾಂಗಣ- ಹೊರಾಂಗಾಣ ಕ್ರೀಡಾ ಮೈದಾನ, ಅಂತಾರಾಷ್ಟಿçÃಯ ಗುಣಮಟ್ಟದ ಈಜು ಕೊಳ, ಬ್ಯಾಡಮಿನ್ ಕೋರ್ಟ್ ನಿರ್ಮಿಸಿದೆ. ವಿದ್ಯಾರ್ಥಿಗಳು ಇವುಗಳ ಸದುಪಯೋಗ ಪಡೆದುಕೊಂಡು ರಾಜ್ಯ, ದೇಶಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಸಂಸ್ಥೆಗೆ ಹೆಸರು ತರಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಬಿವಿವಿ ಸಂಘದ ಆಯುರ್ವೇದ ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ, ಕ್ರೀಡಾಕ್ಷೇತ್ರವು ಇಚ್ಛಾಶಕ್ತಿ, ಏಕಾಗ್ರತೆ ಮತ್ತು ಸ್ಪರ್ಧಾ ಮನೋಭಾವವನ್ನು ಬೆಳೆಸುತ್ತದೆ. ನಿರಂತರವಾದ ಕಠಿಣ ಪ್ರಯತ್ನದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ. ಸೋಲು ಕೊನೆಯಲ್ಲ. ಸೋಲೇ ಗೆಲುವಿನ ಸೋಪಾನ. ಕ್ರೀಡೆಯಲ್ಲಿ ಪರಿಣಿತರಾದವರಿಗೆ ಶ್ಯೆಕ್ಷಣಿಕ ಕ್ಷೇತ್ರದಲ್ಲೂ ಹಲವಾರು ಅವಕಾಶಗಳಿವೆ ಎಂದು ತಿಳಿಸಿದರು.
ಪ್ರಾಚಾರ್ಯ ಡಾ.ಅರುಣ ಹೂಲಿ, ಪ್ರಾಧ್ಯಾಪಕ ಡಾ.ರವಿ.ಕೋಟೆಣ್ಣವರ., ಡಾ.ಸುಽÃರ ಬೆಟಗೇರಿ, ಡಾ.ಪ್ರದೀಪ ಕೆ, ಡಾ. ಶಶಿಕುಮಾರ, ಡಾ.ತೃಪ್ತಿ ಶಿಂಧೆ, ಡಾ.ಐಶ್ವರ್ಯ ಪಾಟೀಲ, ಕ್ರೀಡಾ ಸಂಯೋಜಕರಾದ ಡಾ.ಮಂಜುನಾಥ ಪಾಟೀಲ, ಡಾ. ದೀಪಕ .ಡಾ.ಲಕ್ಷಿ÷್ಮÃ ಮತ್ತಿತರರು ಇದ್ದರು.
ರಾಜ್ಯದ ಬೆಂಗಳೂರು, ಬೆಳಗಾವಿ, ಧಾರವಾಡ, ಮಂಗಳೂರು, ಮೂಡುಬಿದ್ರೆ, ಕಲಬುರ್ಗಿ ಹಾಗೂ ಸಂಕೇಶ್ವರ ಹೋಮಿಯೋ ಮೆಡಿಕಲ್ ಕಾಲೇಜುಗಳ ತಂಡಗಳು ಟೂರ್ನಾಮಂಟ್‌ನಲ್ಲಿ ಭಾಗವಹಿಸಿವೆ.