ಬನಹಟ್ಟಿಯ ಕಾಡಸಿದ್ಧೇಶ್ವರ ದೇವಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ 12 ವರ್ಷ ಪೂರೈಸಿದ ನಿಮಿತ್ತ ವಿಶೇಷ ಪೂಜೆ ಸಲ್ಲಿಸಿದ ಬಿಜೆಪಿ ಕಾಯಕರ್ತರು. ಶಾಸಕ ಸಿದ್ದು ಸವದಿ, ಸುರೇಶ ಚಿಂಡಕ, ಧರೆಪ್ಪ ಉಳ್ಳಾಗಡ್ಡಿ, ಲಕ್ಕಪ್ಪ ಪಾಟೀಲ, ಅರುಣ ಬುದ್ನಿ, ಶ್ರೀಶೈಲ ಯಾದವಾಡ ಇತರರಿದ್ದರು.
- ಶಾಸಕ ಸಿದ್ದು ಸವದಿ ಅಭಿಮತ
- ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಶ್ಲಾಘನೆ
ರಬಕವಿ/ಬನಹಟ್ಟಿ : ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಯಶಸ್ವಿ 12 ವರ್ಷ ಪೂರೈಸಿದ್ದು, ಬಡವರ ಮತ್ತು ವಂಚಿತರ ಕಲ್ಯಾಣವೇ ಕೇಂದ್ರ ಸರ್ಕಾರದ ಮೂಲಮಂತ್ರವಾಗಿದೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
ಬನಹಟ್ಟಿಯ ಕಾಡಸಿದ್ಧೇಶ್ವರ ದೇವಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ 12 ವರ್ಷ ಪೂರೈಸಿದ ನಿಮಿತ್ತ ಬುಧವಾರ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಎಲ್ಲ ಅಭಿವೃದ್ಧಿಗಳ ಹೃದಯ ಭಾಗದಲ್ಲಿ ಬಡವರು ಮತ್ತು ವಂಚಿತ ವರ್ಗಗಳ ಕಲ್ಯಾಣವಿದೆ. ಅಂತ್ಯೋದಯ ತತ್ವದಿಂದ ಪ್ರೇರಿತವಾಗಿ ಹಲವು ದಶಕಗಳಿಂದ ಅಭಿವೃದ್ಧಿಯಿಂದ ವಂಚಿತರಾಗಿದ್ದ ಜನರಿಗೆ ಅದರ ಲಾಭ ತಲುಪಿಸುವಲ್ಲಿ ಪ್ರಧಾನಿಯವರು ಯಶಸ್ವಿಯಾಗಿದ್ದಾರೆ ಎಂದರು.
ಜನಧನ್, ನೇರ ನಗದು ವರ್ಗಾವಣೆ, ಸ್ವಚ್ಛ ಭಾರತ ಅಭಿಯಾನ, ಪ್ರಧಾನಮಂತ್ರಿ ಆವಾಸ್, ಜಲ್ ಜೀವನ್ ಮಿಷನ್ ಹಾಗೂ ಆಯುಷ್ಮಾನ್ ಭಾರತ್ ಯೋಜನೆಗಳ ಮೂಲಕ ಜನರಿಗೆ ಗೌರವಯುತ ಜೀವನ, ಅವಕಾಶಗಳು ಹಾಗೂ ಉತ್ತಮ ಜೀವನಮಟ್ಟ ಒದಗಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಯಶ ಕಂಡಿದ್ದಾರೆ. ತಂತ್ರಜ್ಞಾನ ಬಡವರ ಬದುಕಿನಲ್ಲಿ ಮಹತ್ವದ ಬದಲಾವಣೆ ತರಲು ನೆರವಾಗಿದೆ. ಡಿಬಿಟಿ ಮತ್ತು ಡಿಜಿಟಲ್ ವೇದಿಕೆಗಳಿಂದ ಸರ್ಕಾರದ ನೆರವು ನೇರವಾಗಿ ಫಲಾನುಭವಿಗಳ ಕೈಗೆ ತಲುಪುತ್ತಿದೆ ಎಂದರು.
ಸುರೇಶ ಚಿಂಡಕ, ಧರೆಪ್ಪ ಉಳ್ಳಾಗಡ್ಡಿ, ಶ್ರೀಶೈಲ ಬೀಳಗಿ, ಲಕ್ಕಪ್ಪ ಪಾಟೀಲ, ಅರುಣ ಬುದ್ನಿ, ಶ್ರೀಶೈಲ ಯಾದವಾಡ, ಮೀನಾಕ್ಷಿ ಸವದಿ, ವೈಷ್ಣವಿ ಬಾಗೇವಾಡಿ, ಗೌರಿ ಮಿಳ್ಳಿ, ಜಯಶ್ರೀ ಬಾಗೇವಾಡಿ, ದುರ್ಗವ್ವ ಹರಿಜನ, ಸುವರ್ಣ ಕೊಪ್ಪದ, ಶ್ರೀಶೈಲ ದಭಾಡಿ, ನಂದು ಗಾಯಕವಾಡ, ಅಪ್ಪು ರಾವಳ, ಗುರು ಶೀಲವಂತ ಸೇರಿ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.