ಬಿಜೆಪಿ ‌ಅಭ್ಯರ್ಥಿ ವೀರಣ್ಣ ಚರಂತಿಮಠ ಹಾಗೂ ಕಾಂಗ್ರೆಸ್ ‌ಅಭ್ಯರ್ಥಿ ಉಮೇಶ ಮೇಟಿ 
ಬಾಗಲಕೋಟೆ

ಬಾಗಲಕೋಟೆ ಕ್ಷೇತ್ರದಲ್ಲಿ ಯಾರು ಯಾರು ಶಾಸಕರು ಆಗಿದ್ರು ಗೊತ್ತಾ..?!

ಅಶೋಕ ಶೆಟ್ಟರ, ಬಾಗಲಕೋಟೆ: 
ಬಾಗಲಕೋಟೆ ವಿಧಾನಸಭೆ ಕ್ಷೇತ್ರದಲ್ಲಿ ೧೯೫೨ರಲ್ಲಿ ನಡೆದ ಬಾಂಬೆ ಸ್ಟೇಟ್ ಅಸೆಂಬ್ಲಿ ಚುನಾವಣೆಯಿಂದ ಹಿಡಿದು ೨೦೨೩ರ ವರೆಗೆ ನಡೆದ ಒಟ್ಟು ೧೬ ಸಾರ್ವತ್ರಿಕ ಹಾಗೂ ೨ ಉಪ ಚುನಾವಣೆಗಳು ಸೇರಿ ಒಟ್ಟು ೧೮ ಸಲ ಚುನಾವಣೆ ನಡೆದಿವೆ. ಇದೀಗ ಉಪ ಚುನಾವಣೆ ನಡೆಯುತ್ತಿರುವುದು ೧೯ನೇ ಸಮರವಾಗಿದೆ.
ಈ ಪೈಕಿ ೧೯೫೨ ರಿಂದ ೧೯೭೨ ಸತತ ಐದು ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದ್ದಿರುವ ಬಿ.ಟಿ.ಮುರನಾಳ ಈ ಕ್ಷೇತ್ರದಲ್ಲಿ ಅತಿ ಹೆಚ್ಚು ಸಲ ಶಾಸಕರಾಗಿದ್ದವರು ಎನ್ನುವ ದಾಖಲೆ ಬರೆದಿದ್ದಾರೆ( ಈ ಪೈಕಿ ೧೯೬೨ರ ಚುನಾವಣೆಯಲ್ಲಿ ಗೆದ್ದ ತಕ್ಷಣವೇ ಎಸ್.ನಿಜಲಿಂಗಪ್ಪ ಅವರಿಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು) ಇದರ ಜೊತೆಗೆ ಕ್ಷೇತ್ರದ ಇತಿಹಾಸದಲ್ಲಿ ಅತಿ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಪಡೆದ ಶಾಸಕ ಎನ್ನು ದಾಖಲೆಯೂ ಈ ವರೆಗೂ ಬಿ.ಟಿ.ಮುರನಾಳ ಅವರ ಹೆಸರಿನಲ್ಲಿದೆ. 
೧೯೫೨ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪಽðಸಿದ್ದ ಬಿ.ಟಿ.ಮುರನಾಳ ಅವರು ಎದುರಾಳಿ ಕೆಎಂಪಿಪಿ ಅಭ್ಯರ್ಥಿ ಜಿ.ಕೆ.ದೇಸಾಯಿ ಅವರ ವಿರುದ್ಧ ೧೮,೧೦೮ ಮತಗಳ ಅಂತರದಿAದ ಗೆಲುವು ಪಡೆದಿದ್ದರು. ಅದು ಈ ವರೆಗೂ ಬಾಗಲಕೋಟೆ ವಿಧಾನಸಭೆ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂತರದ ಗೆಲುವು ಎಂದು ದಾಖಲಾಗಿದೆ. ಇದಾದ ಬಳಿಕ ೧೯ ಸಲ ಚುನಾವಣೆ ನಡೆದಿದ್ದರೂ ಈ ದಾಖಲೆಯನ್ನು ಯಾರೂ ಮುರಿದಿಲ್ಲ ಎನ್ನುವುದು ಗಮನಾರ್ಹ. 
ಮೊದಲ ಚುನಾವಣೆ ಬಳಿಕ ಮತ್ತೆ ಸತತ ೪ ಸಲ ಚುನಾವಣೆ ಎದುರಿಸಿದ ಬಿ.ಟಿ.ಮುರನಾಳ ಅವರು ಅಂತರವನ್ನು ಹೆಚ್ಚಿಸಲು ಆಗಲಿಲ್ಲ. ಬದಲಿಗೆ ೧೯೭೨ರಲ್ಲಿ ಅವರು ಸ್ಪಽðಸಿದ ಕೊನೆ ಚುನಾವಣೆ ತಮ್ಮ ಎದುರಾಳಿ ಐಎನ್‌ಸಿಒ ಅಭ್ಯರ್ಥಿ ಎನ್.ಪಿ.ಮಲ್ಲನಗೌಡ ಅವರ ವಿರುದ್ಧ ಏದುಸಿರು ಬಿಟ್ಟು ಗೆಲ್ಲುವ ಸ್ಥಿತಿ ನಿರ್ಮಾಣವಾಗಿತ್ತು. ಆ ಚುನಾವಣೆಯಲ್ಲಿ ಮುರನಾಳ ಅವರು ಬರೀ ೨೧೨ ಮತಗಳ ಅಂತರದಲ್ಲಿ ಗೆದ್ದಿದ್ದರು.
ಮುರುನಾಳ ಬಳಿಕ ಹೆಚ್ಚು ಸಲ ಗೆದ್ದಿದ್ದು ಚರಂತಿಮಠ : 
ಬಾಗಲಕೋಟೆ ವಿಧಾನಸಭೆ ಕ್ಷೇತ್ರದಲ್ಲಿ ಸತತ ಐದು ಸಲ ಗೆದ್ದಿದ್ದ ಬಿ.ಟಿ.ಮುರನಾಳ ಅವರ ಬಳಿಕ ಹೆಚ್ಚು ಸಲ ಶಾಸಕರಾಗಿದ್ದು ಸದ್ಯ ಬಿಜೆಪಿ ಅಭ್ಯರ್ಥಿಯಾಗಿ ಉಪ ಚುನಾವಣೆಗೆ ನಿಂತಿರುವ ವೀರಣ್ಣ ಚರಂತಿಮಠ. ಇವರು ೨೦೦೪, ೨೦೦೮ ಮತ್ತು ೨೦೧೮ರಲ್ಲಿ ಬಿಜೆಪಿಯಿಂದ ಗೆದ್ದು ಶಾಸಕರಾಗಿದ್ದರು. ೨೦೧೩ ಮತ್ತು ೨೦೨೩ರಲ್ಲಿ ಎರಡು ಸಲ ಸೋತಿದ್ದು, ಇದೀಗ ಉಪ ಚುನಾವಣೆಗೆ ಮತ್ತೆ ಅಖಾಡಕ್ಕೆ ಇಳಿದಿದ್ದಾರೆ.
ರಾಜಶೇಖರ ಕಂಠಿಗೆ ಎಂಎಲ್‌ಎ ಆಗುವ ಅದೃಷ್ಟವೇ ಬರಲಿಲ್ಲ: 
ಇನ್ನು ಬಾಗಲಕೋಟೆ ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ ಡಾ.ರಾಜಶೇಖರ ಕಂಠಿ ನತದೃಷ್ಟ ರಾಜಕಾರಣಿ ಎಂದೇ ಹೇಳಬಹುದು. ನಾಲ್ಕು ಸಲ ಸ್ಪರ್ಧೆ ಮಾಡಿದ್ದ ಅವರು ೨ ಸಲ ಇನ್ನೇನು ಗೆದ್ದೆ ಬಿಟ್ಟರೂ ಎನ್ನುವಷ್ಟರಲ್ಲಿ ವಿರೋಚಿತ ಸೋಲು ಅನುಭವಿಸುವಂತಾಯಿತು. ೧೯೮೫ರ ವಿಧಾನಸಭೆ ಚುನಾವಣೆಯಲ್ಲಿ ಜನತಾ ಪಕ್ಷದಿಂದ ಜಿ.ವಿ.ಮಂಟೂರ ಅವರು ಅಖಾಡದಲ್ಲಿ ಇದ್ದರು. ಅವರ ಎದುರಾಳಿಯಾಗಿ ಕಾಂಗ್ರೆಸ್ ಪಕ್ಷ ರಾಜಶೇಖರ ಕಂಠಿ ಅವರಿಗೆ ಟಿಕೆಟ್ ನೀಡಿತ್ತು. ಜನತಾ ಪಕ್ಷ, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನಡೆದ ತ್ರಿಕೋನ ಸ್ಪರ್ಧೆಯಲ್ಲಿ ಜನತಾ ಪಕ್ಷದ ಜಿ.ವಿ.ಮಂಟೂರ ಗೆದ್ದರು. ಆಗ ಕಂಠಿ ಅವರು ಬರೀ ೧೮೪ ಮತಗಳ ಅಂತರದಲ್ಲಿ ಸೋಲು ಅನುಭವಿಸಬೇಕಾಯಿತು.
ಬಳಿಕ ೧೯೮೯ರ ಚುನಾವಣೆಯಲ್ಲಿ ಅವರಿಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದರಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದರೂ ಮತ ಪ್ರಮಾಣ ಕಡಿಮೆಯಾಗಿ ಜನತಾದಳದ ಅಜಯಕುಮಾರ ಸರನಾಯಕ ವಿರುದ್ಧ ಸೋಲು ಕಾಣಬೇಕಾಯಿತು. ಆದರೆ, ಕಾಂಗ್ರೆಸ್ ಅಭ್ಯರ್ಥಿಗಿಂತಲೂ ಅಽಕ ಮತ ಪಡೆದಿದ್ದರು. ೧೯೯೪ ಚುನಾವಣೆಯಲ್ಲೂ ಕಂಠಿ ಅವರು ಪಕ್ಷೇತರ ಅಭ್ಯರ್ಥಿಯಾಗಿದ್ದರು.  ಜನತಾದಳದ ಅಜಯಕುಮಾರ ಸರನಾಯಕ ವಿರುದ್ಧ ಮತ್ತೆ ಸೋಲು ಕಂಡು ನಾಲ್ಕನೇ ಸ್ಥಾನಕ್ಕೆ ಕುಸಿದರು. ೧೯೯೯ರಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ರಾಜಶೇಖರ ಕಂಠಿ ಅವರಿಗೆ ಟಿಕೆಟ್ ನೀಡಿತ್ತು. ಈ ಸಲ ಕಾಂಗ್ರೆಸ್ ಗೆದ್ದೆ ಗೆಲ್ಲುತ್ತದೆ ಎನ್ನುವ ವಿಶ್ವಾಸವೂ ಇತ್ತು. ಅದಾಗಲೇ ಜನತಾದಳ ಛಿತ್ರವಾಗಿ ಕ್ಷೇತ್ರದಲ್ಲಿ ಅದರ ಪ್ರಭಾವ ತಗ್ಗಿತ್ತು. ೧೯೯೮ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯ ಪಿ.ಎಚ್.ಪೂಜಾರ ವಿಜಯಪತಾಕೆ ಹಾರಿಸಿದ್ದರು. ಹೀಗಾಗಿ ಈ ಚುನಾವಣೆಯಲ್ಲಿ ಬಿಜೆಪಿಯ ಪೂಜಾರ ಮತ್ತು ಕಾಂಗ್ರೆಸ್ ಪಕ್ಷದ ಕಂಠಿ ನಡುವೆ ನೇರ ಹಣಾಹಣಿ ನಡೆದು ಅಂತಿಮವಾಗಿ ೧೩೮ ಕಡಿಮೆ ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲು ಕಾಣುವ ಮೂಲಕ ರಾಜಶೇಖರ ಕಂಠಿ ಅವರು ಶಾಸಕರಾಗುವ ಕನಸು ಮುರಿದು ಬಿದ್ದಿತ್ತು. ಬಳಿಕ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಯನ್ನು ಬದಲಿಸಿಕೊಂಡು ಬಂದಿತು. ೧೩೮ ಮತಗಳ ಅಂತರದಲ್ಲಿ ಸೋತಿದ್ದಾಗ ಆಗ ಬಿಎಸ್ಪಿ ಅಭ್ಯರ್ಥಿ ಪರಶುರಾಮ ಜಲಗಾರ ಅವರು ಪಡೆದಿದ್ದ ೨೧೧೬ ಮತಗಳು ಕಂಠಿ ಅವರಿಗೆ ಮುಳ್ಳಾಗಿದ್ದವು.
ಕ್ಷೇತ್ರದಲ್ಲಿ ಈ ವರೆಗೂ ಶಾಸಕರಾಗಿದ್ದವರು ಯರ‍್ಯಾರು...?
ಬಾಗಲಕೋಟೆ ವಿಧಾನಸಭೆ ಕ್ಷೇತ್ರದಲ್ಲಿ ಈ ವರೆಗೂ ನಡೆದ ಸಾರ್ವತ್ರಿಕ ಮತ್ತು ಉಪ ಚುನಾವಣೆ ಸೇರಿ ಒಟ್ಟು ೧೮ ಚುನಾವಣೆಗಳು ನಡೆದಿವೆ. ಇದರಲ್ಲಿ ಅತಿ ಹೆಚ್ಚು ೫ ಸಲ ಶಾಸಕರಾಗಿದ್ದವರು ಕಾಂಗ್ರೆಸ್‌ನ ಬಿ.ಟಿ.ಮುರನಾಳ. ೩ಸಲ ಬಿಜೆಪಿಯ ವೀರಣ್ಣ ಚರಂತಿಮಠ, ತಲಾ ಎರಡು ಸಲ ಜನತಾ ಪಕ್ಷದಿಂದ ಜಿ.ವಿ.ಮಂಟೂರ(೧೯೮೩ರಲ್ಲಿ ಪಕ್ಷೇತರ- ೧೯೮೫ರಲ್ಲಿ ಜನತಾ ಪಕ್ಷ) ಜನತಾದಳದ ಜನತಾದಳದಿಂದ ಅಜಯಕುಮಾರ ಸರನಾಯಕ, ಬಿಜೆಪಿಯ ಪಿ.ಎಚ್.ಪೂಜಾರ, ಕಾಂಗ್ರೆಸ್ ಪಕ್ಷದ ಎಚ್.ವೈ.ಮೇಟಿ, ತಲಾ ಒಂದು ಸಲ ಕಾಂಗ್ರೆಸ್ ಪಕ್ಷದ ಪರಪ್ಪ ಕಳ್ಳಿಗುಡ್ಡ, ಕಾಂಗ್ರೆಸ್ ಪಕ್ಷದಿಂದ ಮಾಜಿ ಸಿಎಂ ಎಸ್.ನಿಜಲಿಂಗಪ್ಪ ಬಾಗಲಕೋಟೆ ಶಾಸಕರಾಗಿದ್ದರು.
೧೯ನೇ ಶಾಸಕ ಯಾರು...?
ಇದೀಗ ಉಪ ಚುನಾವಣೆ ನಡೆಯುತ್ತಿದ್ದು ಬಿಜೆಪಿಯಿಂದ ವೀರಣ್ಣ ಚರಂತಿಮಠ ಹಾಗೂ ಕಾಂಗ್ರೆಸ್ ಪಕ್ಷದಿಂದ ದಿ.ಎಚ್.ವೈ.ಮೇಟಿ ಪುತ್ರ ಉಮೇಶ ಮೇಟಿ ಕಣದಲ್ಲಿ ಇದ್ದಾರೆ. ಇಬ್ಬರ ನಡುವೆ ನೇರ ಹಣಾಹಣಿ ನಡೆಯಲಿದ್ದು, ಇಬ್ಬರಲ್ಲಿ ಯಾರು ಬಾಗಲಕೋಟೆ ಕ್ಷೇತ್ರದ ೧೯ನೇ ಶಾಸಕರಾಗುತ್ತಾರೆ ಎಂದು ಕಾಯ್ದು ನೋಡಬೇಕಿದೆ. 
================