ಹುನಗುಂದ ನಗರದ ಬಸವ ಮಂಟಪದಲ್ಲಿ ವಿಜಯ ಮಹಾಂತೇಶ ತರುಣ ಸಂಘದ ಸಹಯೋಗದಲ್ಲಿ ಶಿವರಾತ್ರಿ ನಿಮಿತ್ತ ಹಮ್ಮಿಕೊಂಡ ಸಾಮೂಹಿಕ ವಚನ ಪಠಣ, ಇಷ್ಟ ಲಿಂಗಪೂಜೆ, ಪ್ರಸಾದ ಹಾಗೂ ಬಸವ ಭಕ್ತರಿಗೆ ಇಷ್ಟಲಿಂಗ ಧಾರಣೆಯನ್ನು ಚಿತ್ತರಗಿ ಗುರುಮಹಾಂತ ಸ್ವಾಮಿಗಳು ನೆರವೇರಿಸಿದರು. ಬಸವಲಿಂಗ ಸ್ವಾಮಿಗಳು ಇತರರಿದ್ದರು. 
ಬಾಗಲಕೋಟೆ

ನಮ್ಮೊಳಗಿನ ಆತ್ಮವೇ ದೇವರು..!

ಪ್ರಮುಖ ಮುಖ್ಯಾಂಶಗಳು

  • ಚಿತ್ತರಗಿ ಸಂಸ್ಥಾನಮಠ ಗುರುಮಹಾಂತ ಸ್ವಾಮಿಗಳ ಅಭಿಮತ
  • ಶಿವರಾತ್ರಿ ನಿಮಿತ್ತ ಸಾಮೂಹಿಕ ವಚನ ಪಠಣ
  • ಮೂಢ ನಂಬಿಕೆಯಿಂದ ವಾಮಾಚಾರ ನಂಬದೆ ಇಷ್ಟ ಲಿಂಗವನ್ನು ಪೂಜಿಸಿ
ಹುನಗುಂದ: ಅಣ್ಣ ಬಸವಣ್ಣನವರು ನೀಡಿದ ಇಷ್ಟಲಿಂಗವನ್ನು ಅಂಗದ ಮೇಲೆ ಧರಿಸಿ, ಏಕ ದಷ್ಟಿ ಹರಿಸಿದಾಗ ಸಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಲು ಸಾಧ್ಯ ಎಂದು ಚಿತ್ತರಗಿ ಸಂಸ್ಥಾನಮಠದ ಗುರುಮಹಾಂತ ಸ್ವಾಮಿಗಳು ಹೇಳಿದರು.
ನಗರದ ಬಸವ ಮಂಟಪದಲ್ಲಿ ಬಸವ ಕೇಂದ್ರ, ಅಕ್ಕನ ಬಳಗ ಮತ್ತು ವಿಜಯ ಮಹಾಂತೇಶ ತರುಣ ಸಂಘ ಹಾಗೂ ಶೈಲ ಪಾದಯಾತ್ರಾ ಸೇವಾ ಸಮಿತಿ ಜಂಟಿ ಸಹಯೋಗದಲ್ಲಿ ಶಿವರಾತ್ರಿ ನಿಮಿತ್ತ ಭಾನುವಾರ ಆಯೋಜಿಸಿದ್ದ ಸಾಮೂಹಿಕ ವಚನ ಪಠಣ, ಇಷ್ಟ ಲಿಂಗಪೂಜೆ, ಪ್ರಸಾದ ಹಾಗೂ ಬಸವ ಭಕ್ತರಿಗೆ ಇಷ್ಟಲಿಂಗ ಧಾರಣೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಶ್ರೀಗಳು ಆಶೀರ್ವಚನ ನೀಡಿ, ಮೂಢ ನಂಬಿಕೆಯಿಂದ ವಾಮಾಚಾರ ನಂಬದೆ ಇಷ್ಟ ಲಿಂಗವನ್ನು ಪೂಜಿಸಿ. ನಮ್ಮೊಳಗಿರುವ ಆತ್ಮವೇ ನಮಗೆ ದೇವರಾಗಿದ್ದಾನೆ. ಹಸವಿನಿಂದ ಶಿವರಾತ್ರಿ ಮಾಡದೆ, ಬೆಳಗ್ಗೆ ಲಿಂಗ ಪೂಜೆ, ಹಣ್ಣುಗಳ ಪ್ರಸಾದ ಸ್ವೀಕರಿಸಿ ಶಿವರಾತ್ರಿ ಆಚರಿಸಿ ಎಂದರು.
ಶಿರೂರದ ಮಹಾಂತ ತೀರ್ಥದ ಡಾ. ಬಸವಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಸಂಗಣ್ಣ ಕೊಟ್ರಪ್ಪ ದೇವಶಟ್ಟಿ, ಕಿಡಿಯಪ್ಪ ಹೂಲಗೇರಿ, ಶಿವಪ್ಪ ನಾಗೂರ, ಪರಸಪ್ಪ ಪಲ್ಲೇದ, ಮಹಾಂತೇಶ ಹೊದ್ಲೂರ, ಸಂಗಣ್ಣ ಚಿನಿವಾಲರ, ಬಸವರಾಜ ಕಡಪಟ್ಟಿ, ಮುತ್ತಕ್ಕ ಬಾವಿಕಟ್ಟಿ, ವೀರೇಶ ಕುರ್ತಕೋಟಿ, ವೀರಣ್ಣ ಬಳೂಟಗಿ, ಬಸವರಾಜ ದರಗಾದ, ಬಸವರಾಜ ಗದ್ದಿ, ಮಹಾಂತೇಶ ಅವಾರಿ, ಪ್ರಭು ನಾಗೂರ ಇತರರಿದ್ದರು.