ಮಹಾಲಿಂಗಪುರದ ಬನಶಂಕರಿದೇವಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಶ್ರೀಚಕ್ರ ಮಂಡಲ ಪೂಜೆ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಚಿಮ್ಮಡ ವಿರಕ್ತಮಠದ ಪ್ರಭು ಶ್ರೀಗಳು, ಮಾಲಾ ವಿಜಯಕುಮಾರ, ಮಲ್ಲಪ್ಪ ಭಾವಿಕಟ್ಟಿ, ಲಕ್ಕಪ್ಪ ಚಮಕೇರಿ, ನಾರಾಯಣ ಕಿರಗಿ, ಸಿದಗಿರೆಪ್ಪ ಕಾಗಿ, ಶ್ರೀಶೈಲಪ್ಪ ಬಾಡನವರ, ಜಿ.ಎಸ್.ಗೊಂಬಿ ಇತರರಿದ್ದರು.
- ಚಿಮ್ಮಡ ವಿರಕ್ತಮಠದ ಪ್ರಭು ಮಹಾಸ್ವಾಮಿಗಳ ಹೇಳಿಕೆ
- ಶ್ರೀಚಕ್ರ ಮಂಡಲ ಪೂಜೆ
- ಬನಶಂಕರಿ ದೇವಸ್ಥಾನದಲ್ಲಿ ಧಾರ್ಮಿಕ ಚೈತನ್ಯ
ಮಹಾಲಿಂಗಪುರ: ಶತಮಾನಗಳ ಇತಿಹಾಸ ಹೊಂದಿರುವ ಬನಶಂಕರಿದೇವಿ ದೇವಸ್ಥಾನದಲ್ಲಿ ಶ್ರೀಚಕ್ರ ಸ್ಥಾಪನೆಯ ಬಳಿಕ ನಡೆಯುತ್ತಿರುವ ಮಂಡಲ ಪೂಜೆಗಳು ಧಾರ್ಮಿಕ ಹಾಗೂ ಆಧ್ಯಾತ್ಮೀಕ ಚೈತನ್ಯ ಹೆಚ್ಚಿಸಿವೆ ಎಂದು ಚಿಮ್ಮಡ ವಿರಕ್ತಮಠದ ಪ್ರಭು ಮಹಾಸ್ವಾಮಿಗಳು ಹೇಳಿದರು.
ನಗರದ ಬನಶಂಕರಿದೇವಿ ದೇವಸ್ಥಾನದಲ್ಲಿ ಇಳಕಲ್ಲದ ಮಾಲಾ ವಿಜಯಕುಮಾರ ಕಾಳಗಿ ಅವರ ನೇತೃತ್ವದಲ್ಲಿ ನಡೆದ ಹಮ್ಮಿಕೊಂಡಿದ್ದ ಶ್ರೀಚಕ್ರದ ಐದನೇ ಮಂಡಲ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ದೇವಿಯ ಆರಾಧನೆ ಮತ್ತು ಶ್ರೀಚಕ್ರದ ದರ್ಶನದಿಂದ ಭಕ್ತರು ಮನಶಾಂತಿ ಹಾಗೂ ಬದುಕಿನ ಕಷ್ಟಗಳಿಂದ ನಿವಾರಣೆ ಪಡೆಯಬಹುದು ಎಂದರು. ಕುಟುಂಬದಲ್ಲಿ ಸಂಸ್ಕಾರ ಬೆಳೆಸುವಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದ್ದು, ತಾಯಿಯೇ ಮೊದಲ ಗುರು ಎಂದು ತಿಳಿಸಿದರು.
ಉಪ್ಪಾರ ಸಮಾಜದ ಮುಖಂಡ ಮಹಾಲಿಂಗಪ್ಪ ಲಾತೂರ ಮಾತನಾಡಿ, ಆಧ್ಯಾತ್ಮೀಕ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಸಂಘಟನೆಗೆ ಮಾದರಿಯಾಗಿರುವ ಬನಶಂಕರಿದೇವಿ ದೇವಸ್ಥಾನದ ಹಿರಿಯರು ಶ್ರೀಚಕ್ರ ಸ್ಥಾಪನೆ, ನವದುರ್ಗೆಯರ ಮೂರ್ತಿ ಪ್ರತಿಷ್ಟಾಪನೆ, ಮಾದರಿ ದಸರಾ ಉತ್ಸವ ಸೇರಿ ವರ್ಷವಿಡಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳೂತ್ತಿರುವುದು ಶ್ಲಾಘನೀಯ ಎಂದರು.
ಉಪ್ಪಾರ ಸಮಾಜದ ಮುಖಂಡ ಮಹಾಲಿಂಗಪ್ಪ ಲಾತೂರ ಮಾತನಾಡಿ, ಆಧ್ಯಾತ್ಮೀಕ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಸಂಘಟನೆಗೆ ಮಾದರಿಯಾಗಿರುವ ಬನಶಂಕರಿದೇವಿ ದೇವಸ್ಥಾನದ ಹಿರಿಯರು ಶ್ರೀಚಕ್ರ ಸ್ಥಾಪನೆ, ನವದುರ್ಗೆಯರ ಮೂರ್ತಿ ಪ್ರತಿಷ್ಟಾಪನೆ, ಮಾದರಿ ದಸರಾ ಉತ್ಸವ ಸೇರಿ ವರ್ಷವಿಡಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳೂತ್ತಿರುವುದು ಶ್ಲಾಘನೀಯ ಎಂದರು.
ಅರ್ಚಕ ಶಿವಾನಂದ ಛಟ್ಟಿಮಠ, ಸಂಗಮೇಶ ಛಟ್ಟಿಮಠ ಮತ್ತು ಶ್ರೀಶೈಲ ಸ್ವಾಮೀಜಿ ಶಾಸ್ತ್ರೋಕ್ತವಾಗಿ ಅಭಿಷೇಕ ಹಾಗೂ ಮಹಾಪೂಜೆ ನೆರವೇರಿಸಿದರು. ನೂರಾರು ಮಹಿಳೆಯರಿಗೆ ಉಡಿ ತುಂಬಲಾಯಿತು. ಗಣ್ಯರಾದ ಚನ್ನಬಸಪ್ಪಾ ಹೊಸೂರ, ಡಾ.ಎಂ.ಆಯ್.ಹುಡೇದಮನಿ, ಎಂ.ಆರ್.ತೇರದಾಳ, ಮಂಜು ಗಲಗಲಿ, ಈರಣ್ಣ ಅಂಬಿ ದಂಪತಿಯನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಮಲ್ಲಪ್ಪ ಭಾವಿಕಟ್ಟಿ, ಲಕ್ಕಪ್ಪ ಚಮಕೇರಿ, ನಾರಾಯಣ ಕಿರಗಿ, ಸಿದಗಿರೆಪ್ಪ ಕಾಗಿ, ಶ್ರೀಶೈಲಪ್ಪ ಬಾಡನವರ, ಜಿ.ಎಸ್.ಗೊಂಬಿ, ಅಶೋಕ ಬಾಣಕಾರ, ಪ್ರಭು ಬೆಳಗಲಿ, ಅಶೋಕ ಧಡೂತಿ, ಶಂಕರ ಅಂಬಿ, ಮಹಾದೇವ ಹುಣಶ್ಯಾಳ, ಬಿ.ಸಿ.ಪೂಜಾರಿ, ಕೆ.ಎಂ.ಬಿಜಾಪುರ, ಈರಣ್ಣ ಹಲಗತ್ತಿ, ಸಂಜು ಜಮಖಂಡಿ, ರಾಜೇಶ ಭಾವಿಕಟ್ಟಿ, ಈರಪ್ಪ ಮುದಕವಿ, ಗಂಗಪ್ಪ ಕರಡಿ ಮತ್ತಿತರರಿದ್ದರು.