ಬಾಗಲಕೋಟೆ ನವನಗರದ ಪೊಲೀಸ್ ಕವಾಯತ್ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೊಲೀಸ್ ಧ್ವಜಾ ದಿನಾಚರಣೆ ಕಾರ್ಯಕ್ರಮದಲ್ಲಿ ನಿವೃತ್ತ ಡಿವೈಎಸ್‌ಪಿ ಮಂಜುನಾಥ ಗಂಗಲ ಮಾತನಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್, ಅಪರ ಪೊಲೀಸ್ ಅಧೀಕ್ಷಕ ಎಂ.ಜಗದೀಶ ಸೇರಿ ಇತರರು ಉಪಸ್ಥಿತರಿದ್ದರು. 
ಬಾಗಲಕೋಟೆ

ಶಾಂತಿ ಕಾಪಾಡುವಲ್ಲಿ ಪೊಲೀಸರ ಪಾತ್ರ ಮಹತ್ವ

ಪ್ರಮುಖ ಮುಖ್ಯಾಂಶಗಳು

  • ಪೊಲೀಸ್ ಧ್ವಜ ದಿನ ಆಚರಣೆ
  • ವಯೋ ನಿವೃತ್ತಿ ಹೊಂದಿದವರಿಗೆ ಸನ್ಮಾನ
ಬಾಗಲಕೋಟೆ: ಸಮಾಜದಲ್ಲಿ ಶಾಂತಿ ಕಾಪಾಡುವುದರಲ್ಲಿ ಪೊಲೀಸರ ಪಾತ್ರ ಮಹತ್ವವಾಗಿದ್ದು, ಬೇರೆ ಇಲಾಖೆಗೆ ಹೋಲಿಸಿದರೆ, ಪೊಲೀಸ್ ಇಲಾಖೆ ಉತ್ತಮವಾಗಿದೆ ಎಂದು ನಿವೃತ್ತ ಡಿವೈಎಸ್‌ಪಿ ಮಂಜುನಾಥ ಗಂಗಲ ಹೇಳಿದರು.
ನವನಗರದ ಪೊಲೀಸ್ ಕವಾಯತ್ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೊಲೀಸ್ ಧ್ವಜಾ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಪೊಲೀಸರು ಎಲ್ಲಿ ಕರ್ತವ್ಯ ನಿರ್ವಹಿಸುತ್ತಾರೋ ಅಲ್ಲಿ ಧ್ವಜ ಇರುತ್ತದೆ. ಪೊಲೀಸ್ ಧ್ವಜದ ಗೌರವ ಎತ್ತಿ ಹಿಡಿಯುವುದು ಪೊಲೀಸರ ಕರ್ತವ್ಯವಾಗಿದೆ. ನಿವೃತ್ತ ಅಽಕಾರಿಗಳಿಗೆ ಇರುವ ಕಲ್ಯಾಣ ಕಾರ್ಯಕ್ರಮಗಳಿಂದ ಬಹಳಷ್ಟು ಅನುಕೂಲವಾಗಿವೆ. ಅಲ್ಲದೆ ಈಚೆಗೆ ವೈದ್ಯಕೀಯ ಚಿಕಿತ್ಸೆಯ ವೆಚ್ಚವನ್ನು ಹೆಚ್ಚಿಸಿದರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.
ಆಸ್ಪತ್ರೆಗಳಿಗೆ ವೈದ್ಯಕೀಯ ವೆಚ್ಚ ಪಾವತಿಯಲ್ಲಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ನಿವೃತ್ತ ಅಽಕಾರಿ ಹಾಗೂ ಸಿಬ್ಬಂದಿಗೆ ಚಿಕಿತ್ಸೆ ನೀಡಲು ಕೆಲವೊಂದು ಆಸ್ಪತ್ರೆಗಳು ಹಿಂದೆಟು ಹಾಕುತ್ತಿದ್ದಾರೆ. ಈ ಬಗ್ಗೆ ದೊಡ್ಡ ಮಟ್ಟದಲ್ಲಿ ಪ್ರಸ್ತಾವಣೆ ಆಗಬೇಕಿದೆ. ಏಕೆಂದರೆ ನಿವೃತ್ತ ಅಧಿಕಾರಿಗಳಿಗೆ ಸಾಕಷ್ಟು ಸೌಲಭ್ಯಗಳು ದೊರೆಯುತ್ತಿವೆ ಎಂದು ಖಾತರಿಯಾದರೆ ಮುಂದಿನ ಆರೋಗ್ಯ ಬಗ್ಗೆ ಯೋಚಿಸುವ ಅವಶ್ಯಕತೆ ಬರುವದಿಲ್ಲ. ನಾವು ನಿವೃತ್ತರಾದರು ನಮ್ಮ ಮೇಲೆ ಇಲಾಖೆ ಇದೆ ಎಂಬ ದೌರ್ಯ ಬರುತ್ತದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ ವರದಿ ವಾಚನ ಮಾಡಿ, ಪ್ರತಿ ವರ್ಷ ಏ. 2ರಂದು ಪೊಲೀಸ್ ಧ್ವಜ ದಿನಾಚರಣೆ ಅತ್ಯಂತ ಶಿಸ್ತು ಮತ್ತು ಗೌರವದಿಂದ ಆಚರಿಸಲಾಗುತ್ತದೆ. ಈ ದಿನದಂದು ಪೊಲೀಸರ ಸೇವೆ, ತ್ಯಾಗ ಮತ್ತು ಕರ್ತವ್ಯನಿಷ್ಠಯನ್ನು ಸ್ಮರಿಸಲಾಗುತ್ತಿದೆ. ಪೊಲೀಸ್ ಇಲಾಖೆಯ ಕಲ್ಯಾಣ ನಿಧಿಯಿಂದ ವೈದ್ಯಕೀಯ ವೆಚ್ಚಕ್ಕಾಗಿ 9.42 ಲಕ್ಷ ಸಹಾಯಧನ ನೀಡಲಾಗಿದೆ. ಆರೋಗ್ಯ ಭಾಗ್ಯ ಯೋಜನೆಯಡಿ 37 ನಿವೃತ್ತ ಅಧಿಕಾರಿ, ಸಿಬ್ಬಂದಿಗಳಿಗೆ ಚಿಕಿತ್ಸೆ ಕೊಡಿಸಲಾಗಿದೆ. 2025-26ನೇ ಸಾಲಿನಲ್ಲಿ ಕರ್ತವ್ಯ ನಿರತ ಅಧಿಕಾರಿ, ಸಿಬ್ಬಂದಿ ಕುಟುಂಬಗಳ 637 ಸದಸ್ಯರಿಗೆ ವೈದ್ಯಕೀಯ ಆರೋಗ್ಯ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದರು.
ವ್ಯಾಸಂಗ ಮಾಡುತ್ತಿರುವ 221 ವಿದ್ಯಾರ್ಥಿಗಳಿಗೆ 35.72 ಲಕ್ಷ ಸಹಾಯಧನ ನೀಡಲಾಗಿದೆ. 6 ಜನರ ಅಂತಿಮ ಸಂಸ್ಕಾರಕ್ಕೆ 1 ಲಕ್ಷ ನೀಡಲಾಗಿದೆ. ಮುಧೋಳದಲ್ಲಿ ರೀಯಾಯಿತಿ ದರದಲ್ಲಿ ಸಮುದಾನ ಭನವ ನೀಡಲಾಗುತ್ತಿದೆ. ಪೊಲೀಸ್ ಕ್ಯಾಂಟಿನದಲ್ಲಿ ರಿಯಾಯಿತಿ ದರದಲ್ಲಿ ದಿನದಿತ್ಯದ ವಸ್ತುಗಳನ್ನು ನೀಡಲಾಗುತ್ತಿದೆ. ನವನಗರದಲ್ಲಿ 5 ಎಕರೆ ವ್ಯಾಪ್ತಿಯಲ್ಲಿ ಗಿಡಗಳನ್ನು ನೆಟ್ಟಿ ಹಸರಿಕರಣ ಮಾಡಲಾಗಿದೆ ಎಂದು ತಿಳಿಸಿದರು.
ಸೇವೆಯಲ್ಲಿ ವಯೋ ನಿವೃತ್ತಿ ಹೊಂದಿದ 13 ಜನರನ್ನು ಸನ್ಮಾನಿಸಲಾಯಿತು. ಪ್ರಾರಂಭದಲ್ಲಿ ಕವಾಯತು ಪರಿವೀಕ್ಷಣೆ ನಡೆಯಿತು. ಅಪರ ಪೊಲೀಸ್ ಅಧೀಕ್ಷಕ ಎಂ.ಜಗದೀಶ ಸೇರಿ ಇತರರು ಉಪಸ್ಥಿತರಿದ್ದರು.