ಗುಳೇದಗುಡ್ಡ ಪಟ್ಟಣದ ಶ್ರೀ ಗುರು ಒಪ್ಪತ್ತೇಶ್ವರ ಮಠದ ಗೋಶಾಲೆ ಟ್ರಸ್ಟ್ ವತಿಯಿಂದ ಅಧಿಕ ಮಾಸದ ನಿಮಿತ್ತ ಹಮ್ಮಿಕೊಂಡಿದ್ದ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ 14ನೇ ಒಪ್ಪತ್ತೇಶ್ವರ ಮಹಾಸ್ವಾಮಿಗಳ ಪಟ್ಟಾಧಿಕಾರ ಮಹೋತ್ಸವ ನಡೆಯಿತು. ಮುರುಘಾಮಠದ ಕಾಶಿನಾಥ ಮಹಾಸ್ವಾಮಿಗಳು, ಒಪ್ಪತ್ತೇಶ್ವರ ಮಹಾಸ್ವಾಮಿಗಳು, ಬಸವಲಿಂಗ ಮಹಾಸ್ವಾಮಿಗಳು, ಸದಾನಂದ ಶಿವಾಚಾರ್ಯರು ಇತರರಿದ್ದರು.
- ಮುರುಘಾಮಠದ ಕಾಶಿನಾಥ ಶ್ರೀ ಹೇಳಿಕೆ
- 14ನೇ ಒಪ್ಪತ್ತೇಶ್ವರ ಮಹಾಸ್ವಾಮಿಗಳ ಪಟ್ಟಾಧಿಕಾರ ಮಹೋತ್ಸವ
- ತತ್ವ ಪ್ರಧಾನ ನಿಜವಾದ ಧರ್ಮ
ಗುಳೇದಗುಡ್ಡ : ತತ್ವ ಪ್ರಧಾನ ನಿಜವಾದ ಧರ್ಮ. ಈ ಭೂಮಿಯಲ್ಲಿರುವ ಸಕಲ ಚರಾಚರಗಳಿಗೆ ಸನ್ಮಾರ್ಗದಲ್ಲಿ ನಡೆಸುವ, ಏಳಿಗೆ ಬಯಸುವದೆಂದರೆ ಅದು ವೀರಶೈವ ಲಿಂಗಾಯತ ಸಮಾಜವಾಗಿದೆ. ಯಾರಿಗೂ ವಿರೋಧ ಮಾಡದ ಧರ್ಮವಾಗಿದೆ ಎಂದು ಮುರುಘಾಮಠದ ಕಾಶಿನಾಥ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಶ್ರೀ ಗುರು ಒಪ್ಪತ್ತೇಶ್ವರ ಮಠದ ಗೋಶಾಲೆ ಟ್ರಸ್ಟ್ ವತಿಯಿಂದ ಅಧಿಕ ಮಾಸದ ನಿಮಿತ್ತ ಹಮ್ಮಿಕೊಂಡಿದ್ದ ಮೌನಾನುಷ್ಠಾನ ಹಾಗೂ ಪುರಾಣ ಪ್ರವಚನ, 14ನೇ ಒಪ್ಪತ್ತೇಶ್ವರ ಮಹಾಸ್ವಾಮಿಗಳ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಭೂಮಿ ಮೇಲೆ ಯಾವುದೂ ನಿಷ್ಪ್ರಯೋಜಕವಾಗಿಲ್ಲ. ತಪಸ್ಸು ಅನುಷ್ಠಾನವೇ ಸ್ವಾಮೀಜಿಗಳ ಆಸ್ತಿ. ಒಪ್ಪತ್ತೇಶ್ವರ ಶ್ರೀಗಳು ಅಧಿಕ ಮಾಸದಲ್ಲಿ ಮೌನಾನುಷ್ಠಾನ ನಡೆಸುವುದರ ಜೊತೆಗೆ ಧರ್ಮ ಬೋಧನೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಒಪ್ಪತ್ತೇಶ್ವರ ಮಹಾಸ್ವಾಮಿಗಳು ಮಾತನಾಡಿ, ಮಠಾಧೀಶರ ಪಟ್ಟಾಧಿಕಾರ ಮಹೋತ್ಸವದ ವಿಧಿ ವಿಧಾನಗಳು, ಅದರ ಆಚರಣೆಗಳನ್ನು ಮಹತ್ವವನ್ನು ತಿಳಿಸುವುದು ಕಾರ್ಯಕ್ರಮ ಉದ್ದೇಶ. ಪ್ರತಿಯೊಬ್ಬರು ಗುರುವಿನ ಸ್ಮರಣೆ ಮಾಡಬೇಕು. ಶಿಷ್ಯನನ್ನು ಗುರುವಾಗಿ ಮಾಡುವ ಏಕೈಕ ಸಂಸ್ಕೃತಿ ಅದು ಭಾರತೀಯರದ್ದಾಗಿದೆ ಎಂದರು.
ಕೋಟೆಕಲ್ ಗ್ರಾಮದ ಕೆಲೂಡಿ ಕುಟುಂಬದಿಂದ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮ, ಸೇವೆಗಳು ನಡೆದವು. ಯಲಬುರ್ಗಾದ ಬಸವಲಿಂಗ ಮಹಾಸ್ವಾಮಿಗಳು 14ನೇ ಒಪ್ಪತ್ತೇಶ್ವರರಾಗಿ ಪಟ್ಟಾಧಿಕಾರ ಸ್ವೀಕರಿಸಿದರು. ಮುರುಘಾಮಠದ ಕಾಶಿನಾಥ ಮಹಾಸ್ವಾಮಿಗಳು ಪಟ್ಟಾಧಿಕಾರ ಹಸ್ತಾಂತರ ಮಾಡಿದರು. ಕೆಲೂಡಿ ಕುಟುಂಬದವರು ಮಠಾಧಿಶರಿಗೆ ಬೆತ್ತ, ಆವಿಗೆಗಳನ್ನು ನೀಡಿ, ಗೌರವಿಸಿದರು. ಗೋಶಾಲೆ ಸೇವಾಕರ್ತರಿಗೆ ಸತ್ಕರಿಸಲಾಯಿತು.
ಯಲಬುರ್ಗಾದ ಮರಡಿಮಠದ ಬಸವಲಿಂಗ ಮಹಾಸ್ವಾಮಿಗಳು, ಗುರುಗುಂಟಾ ಚರಮೂತೇಶ್ವರ ಮಠದ ಸದಾನಂದ ಶಿವಾಚಾರ್ಯರು, ಟೀಕಿನಮಠದ ಮಲ್ಲಿಕಾರ್ಜುನ ಶ್ರೀಗಳು, ಪುರುತಗೇರಿಯ ಕೈಲಾಸಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಶ್ಯಾಮಣ್ಣ ಪತ್ತಾರ, ಬಸವರಾಜ ಅಬ್ಬಿಗೇರಿ ಸಂಗೀತ ಸೇವೆ ನೀಡಿದರು.
ಸಂಗಪ್ಪ ಜವಳಿ, ರಂಗಪ್ಪ ಅರಮನ್ನವರ, ನೀಲಪ್ಪ ಅಬಕಾರಿ, ಸಂಗಪ್ಪ ಆಲೂರ, ಮುತ್ತಪ್ಪ ಅಬಕಾರಿ, ಮಹಾಂತೇಶ ಹಿರೇಮಠ, ಸಂಗಪ್ಪ ಹಡಪದ, ಶಿವಾನಂದ ಮಳಿಮಠ, ಶರಣಪ್ಪ ಚಿಕ್ಕನರಗುಂದ, ಯಲಗೂರೇಶ ಅರಮನಿ, ಹುಚ್ಚೇಶ ಕಮತರ ಇತರರಿದ್ದರು.