ರಬಕವಿ/ ಬನಹಟ್ಟಿ ನಗರದ ಕಾಳಿಕಾದೇವಿ ದೇವಸ್ಥಾನದಲ್ಲಿ ಬಾನುಆರ್ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಹಾಗೂ ಮಹಾಲಿಂಗಪುರ ವಲಯದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಪುಸ್ತಕಾವಲೋಕನ-55 ಕಾರ್ಯಕ್ರಮದಲ್ಲಿ ಬಿ. ಆರ್. ಪೊಲೀಸ್ ಪಾಟೀಲ, ಶಿಕ್ಷಕಿ ರತ್ನಾ ಝಳಕಿ, ಮ. ಕೃ ಮೇಗಾಡಿ ಇತರರಿದ್ದರು. 
ಬಾಗಲಕೋಟೆ

ತುಲಾಭಾರ ನಾಟಕ ಮೌಲಿಕ ಕೃತಿ

ಪ್ರಮುಖ ಮುಖ್ಯಾಂಶಗಳು

  • ಶಿಕ್ಷಕಿ ರತ್ನಾ ಝಳಕಿ ಅಭಿಮತ
  • ರಬಕವಿಯಲ್ಲಿ ಪುಸ್ತಕಾವಲೋಕನ-55
ರಬಕವಿ/ಬನಹಟ್ಟಿ: ಒಬ್ಬ ಶಿಕ್ಷಕ ದೃಢ ಸಂಕಲ್ಪದಿಂದ ಪ್ರಬಲ ಪ್ರತಿರೋಧಗಳ ನಡುವೆಯೂ ಹಳ್ಳಿಯ ಬದುಕನ್ನು ಪ್ರಗತಿಯತ್ತ ಕೊಂಡೊಯ್ಯಬಲ್ಲ ಎಂಬ ಸಂದೇಶ ಸಾರುವ 'ತುಲಾಭಾರ' ನಾಟಕವು ಸಮಾಜದ ಕಣ್ಣು ತೆರೆಸುವ ಮೌಲಿಕ ಕೃತಿಯಾಗಿದೆ ಎಂದು ರಬಕವಿ ವಿದ್ಯಾನಗರ ಶಾಲೆಯ ಶಿಕ್ಷಕಿ ರತ್ನಾ ಝಳಕಿ ಹೇಳಿದರು.
ನಗರದ ಕಾಳಿಕಾದೇವಿ ದೇವಸ್ಥಾನದಲ್ಲಿ ಬಾನುಆರ್ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಹಾಗೂ ಮಹಾಲಿಂಗಪುರ ವಲಯದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಪುಸ್ತಕಾವಲೋಕನ-55 ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಪ್ರೊ. ಬಿ.ಆರ್. ಪೋಲೀಸ್ ಪಾಟೀಲ ಅವರ 'ತುಲಾಭಾರ' ನಾಟಕವನ್ನು ಅವಲೋಕಿಸಿ ಅವರು ಮಾತನಾಡಿದರು.
ನಾಟಕದ ಕೇಂದ್ರ ಪಾತ್ರ ಮೈನುದ್ದಿನ್ ಮಾಸ್ತರರ ವ್ಯಕ್ತಿತ್ವವು ಸಮನ್ವಯ, ಮಾನವೀಯತೆ ಹಾಗೂ ಶಿಕ್ಷಕರ ಸಾಮಾಜಿಕ ಜವಾಬ್ದಾರಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಬನಹಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ನೂತನ ವಿದ್ಯಾಲಯದ ದೈಹಿಕ ಶಿಕ್ಷಕಿ ಎಂ.ಸಿ. ಹಂಚಿನಾಳ ಮಾತನಾಡಿ, ಪುಸ್ತಕಾವಲೋಕನದಂತಹ ಕಾರ್ಯಕ್ರಮಗಳ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯವನ್ನು ಮನೆಮನೆಗೆ ತಲುಪಿಸುತ್ತಿರುವುದು ಶ್ಲಾಘನೀಯ ಎಂದರು.
ವಿಜಯಪುರದ ಪತ್ರಕರ್ತ ಮೋಹನ್ ಕಟ್ಟಿಮನಿ ಮಾತನಾಡಿ, ಸಮಾಜ ನಿರ್ಮಾಣದಲ್ಲಿ ಗುರುವಿನ ಸ್ಥಾನ ಅತ್ಯುನ್ನತವಾಗಿದ್ದು, ಇತಿಹಾಸದಲ್ಲೂ ಗುರುಗಳ ಮಹತ್ವಕ್ಕೆ ಸಾಕಷ್ಟು ಉಲ್ಲೇಖಗಳಿವೆ ಎಂದು ಹೇಳಿದರು.
ಕೃತಿಕಾರ ಪ್ರೊ. ಬಿ.ಆರ್. ಪೊಲೀಸ್ ಪಾಟೀಲ ಮಾತನಾಡಿ, ಮಕ್ಕಳನ್ನು ನೈತಿಕ ಮೌಲ್ಯಗಳಿಂದ ಬೆಳೆಸಲು ಪುಸ್ತಕಗಳ ಓದು ಅಗತ್ಯವಾಗಿದ್ದು, ಓದುಗರು ಪುಸ್ತಕಗಳನ್ನು ಖರೀದಿಸಿ ಲೇಖಕರನ್ನು ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು.
ಸಂವಾದದಲ್ಲಿ ಕವಿ ಸಿದ್ಧರಾಜ ಪೂಜಾರಿ, ಮಹಾದೇವ ಕವಿಶೆಟ್ಟಿ, ಎಂ.ಎಸ್. ಬದಾಮಿ ಹಾಗೂ ಮಲ್ಲಿಕಾರ್ಜುನ ಜವಳಗಿ ಭಾಗವಹಿಸಿದರು.
ತಾಲೂಕು ಕಸಾಪ ಅಧ್ಯಕ್ಷ ಮ.ಕೃ. ಮೇಗಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಾಹಿತ್ತಾಸಕ್ತರಾದ ಶಿವಾನಂದ ಬಾಗಲಕೋಟಮಠ, ಶಿವಾನಂದ ದಾಶಾಳ, ತೇರದಾಳ ತಾಲೂಕು ಕಸಾಪ ಅಧ್ಯಕ್ಷ ಗಂಗಾಧರ ಮೋಪಗಾರ, ಮಹಾಲಿಂಗಪುರ ಕಸಾಪ ವಲಯ ಅಧ್ಯಕ್ಷ ಬಸವರಾಜ ಮೇಟಿ, ವಿನೋದ ಮಾತುಗಾರ ಮೃತ್ಯುಂಜಯ ರಾಮದುರ್ಗ, ಮಲ್ಲಪ್ಪ ಗಣಿ, ಚಿರಂಜೀವಿ ರೋಡಕರ, ಸಂತೋಷಮಾ ರಾಮದುರ್ಗ, ಎಂ.ಕೆ. ತೇಲಿ, ಬಿ.ಎಂ. ಮಟ್ಟಿಕಲ್ಲಿ, ಚಿತ್ರನಟಿ ಸುಪ್ರಿಯಾ ನಿಪ್ಪಾಣಿ, ಇಂದುಧರ ಬೆಳಗಲಿ, ಶ್ರೀಶೈಲ ಪಟ್ಟಣಶೆಟ್ಟಿ, ದಾನಪ್ಪ ಆಸಂಗಿ, ಭಾರತಿ ಪಾವಟೆ, ಎಂ.ಎಸ್. ಕುಂಬಾರ, ಕವಿ ಎಮ್ಮಾರ್ಕೆ ಸೇರಿ ಹಿರಿಯ ಸಾಹಿತಿಗಳು, ಸಾಹಿತ್ಯಾಸಕ್ತರು, ಕಲಾವಿದರು, ಕಸಾಪ ಪದಾಽಕಾರಿಗಳು, ಕುಂಬಾರ ಪರಿವಾರ ಪಾಲ್ಗೊಂಡಿದ್ದರು.
ಶರತ್ ಜಂಬಗಿ ಸ್ವಾಗತಿಸಿದರು. ರಾಜೇಶ್ವರಿ ಕುಂಬಾರ ನಿರೂಪಿಸಿದರು, ಧರೇಶ ಕುಂಬಾರ ವಂದಿಸಿದರು.
ನಂತರ ಶಿಕ್ಷಕರ ಕಲಾ ತಂಡ ತುಲಾಭಾರ ನಾಟಕದ ಕೆಲವು ಪ್ರಸಂಗಗಳನ್ನು ಅಭಿನಯಿಸಿ ಪ್ರೇಕ್ಷಕರ ಗಮನ ಸೆಳೆದರು.