ಹುನಗುಂದ ತಾಲೂಕಿನ ಇದ್ದಲಗಿ ಗ್ರಾಮದಲ್ಲಿ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ನಾರಾಯಣಪುರ ಪುನರ್ವಸತಿ ಹಾಗೂ ಪುನರ್ನಿರ್ಮಾಣ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಲ್ಲಿಕಾರ್ಜುನ ಕೆಂದೊಳ್ಳಿ ಭೇಟಿ ನೀಡಿ ಸಂತ್ರಸ್ತರ ಬೇಡಿಕೆಯ ಮನವಿ ಪತ್ರವನ್ನು ಸ್ವೀಕರಿಸಿದರು. ಶರಣಪ್ಪ ಮುಳ್ಳೂರ, ಹಸನಸಾಬ ಪಿಂಜಾರ, ಹಬೀಸಾಬ ಮುಲ್ಲಾ ಇತರರಿದ್ದರು.
- ಪುನರ್ನಿರ್ಮಾಣ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಲ್ಲಿಕಾರ್ಜುನ ಕೆಂದೊಳ್ಳಿ ಧರಣಿ ಸ್ಥಳಕ್ಕೆ ಭೇಟಿ
- ಶಿಥಿಲಗೊಂಡ ಶೆಡ್ ಪರಿಶೀಲನೆ
ಹುನಗುಂದ: ತಾಲೂಕಿನ ಇದ್ದಲಗಿ ಗ್ರಾಮದ ಮುಳಗಡೆ ಸಂತ್ರಸ್ತರು ಶೆಡ್‌ಗಳ ಮರು ನಿರ್ಮಾಣ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ನಾಲ್ಕನೇ ದಿನವಾದ ಶನಿವಾರ ಕೂಡ ಮುಂದುವರಿಯಿತು.
ಧರಣಿ ಸ್ಥಳಕ್ಕೆ ನಾರಾಯಣಪುರದ ಪುನರ್ವಸತಿ ಹಾಗೂ ಪುನರ್ನಿರ್ಮಾಣ (ಆರ್‌ಆರ್) ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಲ್ಲಿಕಾರ್ಜುನ ಕೆಂದೊಳ್ಳಿ ಭೇಟಿ ನೀಡಿ ಸಂತ್ರಸ್ತರ ಬೇಡಿಕೆ ಮನವಿ ಪತ್ರವನ್ನು ಸ್ವೀಕರಿಸಿದರು.
ನಂತರ ಶಿಥಿಲಗೊಂಡ ಶೆಡ್‌ಗಳನ್ನು ಪರಿಶೀಲಿಸಿ ಅಲ್ಲಿ ವಾಸಿಸುವ ಸಂತ್ರಸ್ತರ ಹೆಸರಗಳನ್ನು ಪಟ್ಟಿಮಾಡಿ ಬಳಿಕ ಮಾತನಾಡಿದ ಅವರು, ಶಿಥಿಲಗೊಂಡ ಶೆಡ್‌ಗಳನ್ನು ಪುನರ್ವಸತಿ ಕೇಂದ್ರದಲ್ಲಿ ಸಂತ್ರಸ್ತರ ಜಾಗೆಯಲ್ಲಿ ನಿರ್ಮಿಸಿಕೊಡುವ ಭರವಸೆ ನೀಡಿದರು.
ಅಧಿಕಾರಿಗಳ ಭರವಸೆಗೆ ಸಂತ್ರಸ್ತರು ಪಟ್ಟು ಸಡಿಲಿಸದೇ ನಮ್ಮ ಸಂಪೂರ್ಣ ಬೇಡಿಕೆ ಈಡೆರಿಸುವರೆಗೂ ಧರಣಿ ನಿಲ್ಲಿಸುವುದಿಲ್ಲ ಎಂದರು.
ಬೆಳಗ್ಗೆ ನರೇಗಾ ಸೇರಿ ಕೃಷಿ ಕೆಲಸ ಕಾರ್ಯಗಳಿಗೆ ಹೋಗಿದ್ದ ಸಂತ್ರಸ್ತರು ಶುಕ್ರವಾರ ಮಧ್ಯಾಹ್ನದಿಂದ ರಾತ್ರಿ 10ರವರೆಗೆ ಅನಿರ್ದಿಷ್ಟಾವಧಿ ಧರಣಿಯಲ್ಲಿ ಪಾಲ್ಗೊಂಡು ತಮ್ಮ ಬೆಂಬಲ ವ್ಯಕ್ತಪಡಿಸಿದರು.
ಪುನರ್ವಸತಿ ಹಾಗೂ ಪುನರ್ನಿರ್ಮಾಣ ಇಲಾಖೆ ಅಧಿಕಾರಿಗಳಾದ ಸುಭಾಸ ಅರಬಾಳ, ಇಂಜಿನಿಯರ್ ಕೆ.ಎನ್. ಒಡೆಯರ, ಸಂತ್ರಸ್ತರಾದ ಹನಮಂತ ಹಂಡರಗಲ್ಲ, ಶರಣಪ್ಪ ಮುಳ್ಳೂರ, ಹಬೀಸಾಬ ಮುಲ್ಲಾ, ಕಲ್ಲಪ್ಪ ಬೇನಾಳ, ಶರಣಪ್ಪ ಹೂಗಾರ, ಇಮಾಮಸಾಬ್ ನಿಡಗುಂದಿ, ಬಸವರಾಜ ನಾಡಗೌಡರ, ಬಸವರಾಜ ತಿಮ್ಮಾಪೂರ ಇತರರಿದ್ದರು.