ಗುಳೇದಗುಡ್ಡದಲ್ಲಿ ಬಾಗಲಕೋಟೆ ಶಾಸಕ ಉಮೇಶ ಮೇಟಿ ಅವರನ್ನು ಸ್ನೇಹಿತರು, ಕಾರ್ಯಕರ್ತರು ಸನ್ಮಾನಿಸಿದರು. ಹೊಳಬಸು ಶೆಟ್ಟರ, ಈರಣ್ಣ ಚಿಂದಿ, ಬಸವರಾಜ ಯಂಡಿಗೇರಿ, ಯಮನಪ್ಪ ತಿಮ್ಮಾಪೂರ ಇತರರಿದ್ದರು.
- ಶಾಸಕ ಉಮೇಶ ಮೇಟಿ ಹೇಳಿಕೆ
- ಸ್ನೇಹಿತರಿಂದ ಸನ್ಮಾನ ಸಮಾರಂಭ
- ನಮ್ಮ ತಂದೆಯವರ ರಾಜಕೀಯ ಜೀವನಕ್ಕೆ ಭದ್ರ ಬುನಾದಿ ಹಾಕಿದ ಕ್ಷೇತ್ರವೇ ಗುಳೇದಗುಡ್ಡ.
ಗುಳೇದಗುಡ್ಡ: ನಮ್ಮ ತಂದೆಯವರ ರಾಜಕೀಯ ಜೀವನಕ್ಕೆ ಭದ್ರ ಬುನಾದಿ ಹಾಕಿದ ಕ್ಷೇತ್ರವೇ ಗುಳೇದಗುಡ್ಡ. ಈ ಹಳೆಯ ಮತಕ್ಷೇತ್ರವನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಬಾಗಲಕೋಟೆ ಶಾಸಕ ಉಮೇಶ ಮೇಟಿ ಹೇಳಿದರು.
ಪಟ್ಟಣದಲ್ಲಿ ಸ್ನೇಹಿತರು, ಕಾರ್ಯಕರ್ತರು ಹಾಗೂ ಗುಳೇದಗುಡ್ಡ ಯುವಶಕ್ತಿ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಸೋಮವಾರ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಈ ಕ್ಷೇತ್ರದ ಹಿರಿಯರು, ಸ್ನೇಹಿತರು ಹಾಗೂ ಕಾರ್ಯಕರ್ತರೊಂದಿಗೆ ನಮ್ಮ ಕುಟುಂಬಕ್ಕೆ ತಂದೆಯವರ ಕಾಲದಿಂದಲೇ ಆತ್ಮೀಯ ಬಾಂಧವ್ಯವಿದೆ. ಕ್ಷೇತ್ರಗಳ ಮರುವಿಂಗಡಣೆಯಿಂದ ಮತಕ್ಷೇತ್ರ ಬದಲಾಗಿದ್ದರೂ, ಇಲ್ಲಿನ ಜನರೊಂದಿಗೆ ನಮ್ಮ ಸಂಬಂಧ ಎಂದಿಗೂ ಕಡಿದು ಹೋಗುವುದಿಲ್ಲ. ಮುಂದೆಯೂ ಸ್ನೇಹಿತರು ಹಾಗೂ ಬಂಧುಗಳೊಂದಿಗೆ ನಿರಂತರ ಒಡನಾಟ ಮುಂದುವರಿಯಲಿದೆ ಎಂದು ಹೇಳಿದರು.
ಹೊಳಬಸು ಶೆಟ್ಟರ, ಈರಣ್ಣ ಚಿಂದಿ, ಬಸವರಾಜ ಯಂಡಿಗೇರಿ, ಯಮನಪ್ಪ ತಿಮ್ಮಾಪೂರ, ಶರಣಪ್ಪ ಚಿಕ್ಕನರಗುಂದ, ಅಂಬರೀಶ ಕ ವಡಿಮಟ್ಟಿ, ರಂಗಪ್ಪ ಅಮರಣ್ಣವರ, ಹೇಮಾ ಇಂಗಳೆ, ಗಾಯತ್ರಿ ಕುಪ್ಪಸ್ತ, ಬೆನಕಪ್ಪ ಶೇಬಿನಕಟ್ಟಿ ಇತರರಿದ್ದರು.