ಬಾಗಲಕೋಟೆ ಜಿಪಂ ಸಭಾಭವನದಲ್ಲಿ ಗುರುವಾರ ಲೋಕಾಯುಕ್ತದಲ್ಲಿ ಬಾಕಿ ಇರುವ ಜಿಲ್ಲೆಯ ಪ್ರಕರಣ ವಿಚಾರಣೆ ಹಾಗೂ ವಿಲೇವಾರಿ ಕಾರ್ಯಕ್ರಮವನ್ನು ಉಪ ಲೋಕಾಯುಕ್ತ ಬಿ.ವೀರಪ್ಪ ಉದ್ಘಾಟಿಸಿದರು. ಲೋಕಾಯುಕ್ತ ವಿಶೇಷ ನ್ಯಾಯಾಽÃಶ ಅರವಿಂದ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಽÃಶ ಮಾಸ್ಟರ್ ಆರ್.ಕೆ.ಜಿ.ಎಂ.ಎA ಮಹಾಸ್ವಾಮೀಜಿ ಸೇರಿದಂತೆ ಇತರರು ಇದ್ದರು 
ಬಾಗಲಕೋಟೆ

ಕಾನೂನು ಬಲಿಷ್ಠ, ಅನುಷ್ಠಾನಧಿಕಾರಿಗಳು ಬಲಿಷ್ಠರಲ್ಲ

ಬಾಗಲಕೋಟೆ: ನಮ್ಮ ದೇಶದಲ್ಲಿ ಬಲಿಷ್ಠ ಕಾನೂನು ಇದೆ. ಆದರೆ, ಆ ಕಾನೂನು ಅನುಷ್ಠಾನಗೊಳಿಸುವ ಅಽಕಾರಿಗಳು ಬಲಿಷ್ಠರಾಗಿಲ್ಲ. ಹೀಗಾಗಿಯೇ ದೇಶಕ್ಕೆ ಸ್ವಾತಂತ್ರ‍್ಯ ಸಿಕ್ಕು ೮೦ ವರ್ಷಗಳಾದರೂ ಸಮಪಾಲು, ಸಮಬಾಳು ಸಿಗುತ್ತಿಲ್ಲ. ನಮ್ಮ ಸಂವಿಧಾನದ ಆಶಯದಂತೆ ಸಮಾನತೆ ಮತ್ತು ಗೌರವ ಬದುಕು ಸಂಪೂರ್ಣ ಅನುಷ್ಠಾನಗೊಂಡರೆ ಗಾಂಽÃಜಿ ಕಂಡ ಕನಸು ನನಸಾಗುತ್ತದೆ. ಇದು ಆಗಬೇಕಿದ್ದರೆ ಅಽಕಾರಿಗಳಲ್ಲಿ ಜಿಡ್ಡುಗಟ್ಟಿರುವ ಜಡತ್ವ ಹೋಗಬೇಕು ಎಂದು ಉಪ ಲೋಕಾಯುಕ್ತ ಬಿ.ವೀರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ನೂತನ ಸಭಾಭವನದಲ್ಲಿ ಗುರುವಾರ ಲೋಕಾಯುಕ್ತ ಇಲಾಖೆಯಲ್ಲಿ ಇರುವ ಬಾಕಿ ಇರುವ ಜಿಲ್ಲೆಯ ಎಲ್ಲ ತಾಲೂಕುಗಳ ಪ್ರಕರಣಗಳ ವಿಚಾರಣೆ ಮತ್ತು ವಿಲೇವಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿಂದೆ ದೇಶದಲ್ಲಿ ಶೇ. ೧೮ ರಷ್ಟು ವಿದ್ಯಾವಂತರು ಇದ್ದರೆ ಶೇ. ೯೫ ರಷ್ಟು ದೇಶಭಕ್ತರು ಇರುತ್ತಿದ್ದರು. ಈಗ ಶೇ. ೮೦ ರಿಂದ ೯೦ ರಷ್ಟು ವಿದ್ಯಾವಂತರೇನೋ ಇದ್ದಾರೆ. ಆದರೆ, ದೇಶಭಕ್ತಿ ಶೇ. ೨೦ ರಷ್ಟು ಮಾತ್ರ ಕಂಡು ಬರುತ್ತಿದೆ. ಹೀಗಾಗಿ ಮಂಕು ತಿಮ್ಮನ ಕಗ್ಗದಲ್ಲಿ ಹೇಳುವಂತೆ ವಿದ್ಯಾವಂತ ಮೋಸಗಾರರಿಂದ ದೇಶ ಅಧೋಗತಿಗೆ ಹೋಗುತ್ತದೆ ಎಂದು ಉಲ್ಲೇಖಿಸಿದರು.
ದೇಶದಲ್ಲಿ ಲೋಕಪಾಲ ಮತ್ತು ಲೋಕಾಯುಕ್ತ ಬಲಹೀನಗೊಳಿಸುವ ಸಾಕಷ್ಟು ಪ್ರಯತ್ನಗಳು ನಡೆದಿವೆ. ಅದಕ್ಕೆ ಅವಕಾಶ ಕೊಡಬಾರದು. ಕಾನೂನು ಎನ್ನುವುದು ರಾಜರಿಗೆ ರಾಜ ಇದ್ದಂತೆ. ಇವತ್ತು ನಾಲ್ಕು ಅಂಗಗಳು ಬಲಹೀನವಾಗಿದೆ. ಅದರಲ್ಲಿ ಸ್ವಲ್ಪಮಟ್ಟಿಗೆ ನ್ಯಾಯಾಂಗ ಮತ್ತು ಪತ್ರಿಕಾರಂಗ ಮಾತ್ರ ಇನ್ನೂ ನಾವು ಇದ್ದೇವೆ ಎಂದು ತೋರಿಸಿತ್ತಿವೆ. ಮಾಧ್ಯಮ ರಂಗ ಇನ್ನೂ ಹೆಚ್ಚೆಚ್ಚು ಕಿಚ್ಚು ಬೆಳೆಸಿಕೊಳ್ಳಬೇಕು. ಮೈಕ್ ಗನ್ ಆಗಬೇಕು, ಪೆನ್ನು ಕತ್ತಿಯಾಗಬೇಕು. ಎಲ್ಲೆಡೆ ವ್ಯಾಪಿಸಿರುವ ಭ್ರಷ್ಟಾಚಾರ ತೊಳೆದುಹಾಕಲು ನ್ಯಾಯಾಂಗ ಮತ್ತು ಪತ್ರಿಕಾರಂಗ ಹೆಚ್ಚೆಚ್ಚು ಬಲಶಾಲಿಯಾಗಬೇಕು ಎಂದರು.
ಕಾನೂನು ರಾಜರಿಗೆ ರಾಜ ಎನ್ನುವುದಕ್ಕೆ ರಾಜ್ಯದಲ್ಲಿ ನಡೆದಿರುವ ಎರಡು ಘಟನೆಗಳು ನಮ್ಮೆದುರಿಗೆ ಇವೆ. ಚಿತ್ರನಟ ಹಾಗೂ ಮಾಜಿ ಎಂಪಿ ಜೈಲಿ ಸೇರಿದ್ದು ಎಂದ ಅವರು, ಲೋಕಾಯುಕ್ತದಲ್ಲೂ ಭ್ರಷ್ಟಾಚಾರ ಇಲ್ಲ ಎನ್ನಲು ಆಗಲ್ಲ. ಸಂಸ್ಥೆಯಲ್ಲಿ ಇರುವವರು ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಅಂತ ಅಽಕಾರಿಗಳು ಕಂಡು ಬಂದರೆ ತಕ್ಷಣವೇ ದೂರು ಕೊಡಿ ಎಂದು ತಿಳಿಸಿದರು.
ಮಾನವ ಹಕ್ಕು, ಮಾಹಿತಿ ಹಕ್ಕು, ರಕ್ಷಣಾ ವೇದಿಕೆ ಹೀಗೆ ನಾನಾ ಸಂಘ, ಸಂಸ್ಥೆಗಳಲ್ಲಿ ದುಡ್ಡು ಹೊಡೆಯವವರು ಸೇರಿಕೊಳ್ಳದಂತೆ ಎಚ್ಚರಿಕೆ ವಹಿಸಬೇಕು. ಇದರಿಂದ ಜನರ ವಿಶ್ವಾಸ ಕಳೆದುಕೊಳ್ಳುವ ಪ್ರಸಂಗ ಬರುತ್ತದೆ. ಅದಕ್ಕೆ ಸಂಸ್ಥೆಗಳು ಅವಕಾಶ ಕೊಡಬಾರದು. ಅಂತ ದುಷ್ಟರ ಇದ್ದರೆ ಅವರನ್ನು ಹೊರಹಾಕಿ. ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆ ಮುಚ್ಚಿಹಾಕಿ ಎಸಿಬಿ ತಂದಿದ್ದರು. ಆದರೆ, ನಾನು ನ್ಯಾಯಾಽÃಶ ಇದ್ದಾಗಲೇ ಈ ಕೇಸ ಬಂದಿತ್ತು. ನಾನು ಆಗ ಲೋಕಾಯುಕ್ತ ಸಂಸ್ಥೆ ಉಳಿಯುವಂತೆ ಮಾಡಿದೆ ಎಂದು ತಿಳಿಸಿದರು.
ಭ್ರಷ್ಟಾಚಾರ ತೊಲಗಬೇಕು ಎಂದರೆ ಮೊದಲು ದುಡ್ಡು ಪಡೆದು ಮತ ಹಾಕುವುದನ್ನು ನಿಲ್ಲಿಸಿ, ಸಂಸ್ಥಾರವAತರನ್ನು ಚುನಾವಣೆಯಲ್ಲಿ ಗೆಲ್ಲಿಸಿ. ದುಡ್ಡು ಕೊಡುವವರನ್ನು ದೂರವಿಡಿ. ಯಾವುದಾದರೂ ಇಲಾಖೆಯಲ್ಲಿ ಅಽಕಾರಿಗಳು ದುಡ್ಡು ಕೇಳಿದರೆ ಟ್ರ‍್ಯಾಪ್ ಮಾಡಿ ಕೊಡಿ. ಜನರೊಂದಿಗೆ ನಾವು ಇದ್ದೇವೆ. ಜನರ ಪರವಾಗಿ ಲೋಕಾಯುಕ್ತ ಸಂಸ್ಥೆ ಇದೆ ಎಂದು ಹೇಳಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಽÃಶ ಮಾಸ್ಟರ್ ಆರ್.ಕೆ.ಜಿ.ಎಂ.ಎA ಮಹಾಸ್ವಾಮೀಜಿ ಮಾತನಾಡಿ, ಉತ್ತಮ ಆಡಳಿತ ನೀಡಬೇಕಾದರೆ ಸಾರ್ವಜನಿಕರ ಕುಂದುಕೊರತೆಗಳಿಗೆ ತ್ವರಿತ ಸ್ಪಂದನೆ ನೀಡುವುದು ಹಾಗೂ ಭ್ರಷ್ಟಾಚಾರಕ್ಕೆ ಯಾವುದೇ ಅವಕಾಶ ನೀಡದೇ ಪಾರದರ್ಶಕ ಆಡಳಿತ ವ್ಯವಸ್ಥೆ ನಿರ್ಮಾಣವಾಗಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು ಎಂದರು.
ಜಿಲ್ಲಾಽಕಾರಿ ಸಂಗಪ್ಪ ಅವರು ಸಹ ಮಾತನಾಡಿದರು. ಲೋಕಾಯುಕ್ತ ಇಲಾಖೆಯ ವಿಶೇಷ ನ್ಯಾಯಾಽÃಶ ಅರವಿಂದ, ಜಿ.ಪಂ ಸಿಇಒ ಗಜಾನನ ಬಾಲೆ, ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಸಿದ್ದಾರ್ಥ ಗೋಯಲ್, ಉಪ ಅರಣ್ಯ ಸಂರಕ್ಷಣಾಽಕಾರಿ ಸ್ವಪ್ನಿಲ್ ಅಹೀರೆ, ಅಪರ ಜಿಲ್ಲಾಽಕಾರಿ ಅಶೋಕ ತೇಲಿ, ಲೋಕಾಯುಕ್ತ ಇಲಾಖೆಯ ಪೊಲೀಸ್ ಅಽÃಕ್ಷಕ ನಂದಗಾAವಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ, ಜಿ.ಪಂ ಉಪ ಕಾರ್ಯದರ್ಶಿ ಎನ್.ವೈ.ಬಸರಿಗಿಡದ, ಲೋಕಾಯುಕ್ತ ಡಿಎಸ್ಪಿ ಸುರೇಶ ರೆಡ್ಡಿ ಇತರರು ಉಪಸ್ಥಿತರಿದ್ದರು.