ಬಾಗಲಕೋಟೆ ವಿದ್ಯಾಗಿರಿಯ ಕುಮಾರೇಶ್ವರ ವಿಶ್ವಧರ್ಮ ಶಾಂತಾಶ್ರಮದಲ್ಲಿ ನಡೆದ 49ನೇ ಮಾಸಿಕ ಶರಣ ಚಿಂತನಗೋಷ್ಠಿಯಲ್ಲಿ ಸಾಹಿತಿ ಲಕ್ಷ್ಮಣ ಬಾದಾಮಿ ಅವರನ್ನು ಸನ್ಮಾನಿಸಲಾಯಿತು. ಜಿ.ಎನ್.ಪಾಟೀಲ, ಶ್ರೀಶೈಲ ಕರಿಶಂಕರಿ ಮತ್ತಿತರರಿದ್ದರು. 
ಬಾಗಲಕೋಟೆ

ಶ್ರೇಷ್ಠ ವಚನಕಾರ ಷಣ್ಮುಖ ಶಿವಯೋಗಿ

ಪ್ರಮುಖ ಮುಖ್ಯಾಂಶಗಳು

  • 49ನೇ ಮಾಸಿಕ ಶರಣ ಚಿಂತನ ಗೋಷ್ಠಿ
ಬಾಗಲಕೋಟೆ: ಶರಣ ಷಣ್ಮುಖ ಶಿವಯೋಗಿಗಳ ವಚನದಲ್ಲಿ ಜೀವನ ಮೌಲ್ಯ ಅಡಗಿವೆ, ವೈರಾಗ್ಯ ಅಡಗಿದೆ ಎಂದು ಸಾಹಿತಿ ಲಕ್ಷ್ಮಣ ಬಾದಾಮಿ ಹೇಳಿದರು.
ಇಲ್ಲಿನ ವಿದ್ಯಾಗಿರಿ ಕುಮಾರೇಶ್ವರ ವಿಶ್ವಧರ್ಮ ಶಾಂತಾಶ್ರಮ, ಸಮಾನ ಮನಸ್ಕ ಹಿರಿಯ ನಾಗರಿಕ ವೇದಿಕೆ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಸೇರಿ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಈಚೆಗೆ ನಡೆದ 49ನೇ ಮಾಸಿಕ ಶರಣ ಚಿಂತನ ಗೋಷ್ಠಿಯಲ್ಲಿ ಬಸವೋತ್ತರ ಯುಗದ ಶ್ರೇಷ್ಠ ವಚನಕಾರ ಶರಣ ಷಣ್ಮುಖ ಶಿವಯೋಗಿಗಳ ಕುರಿತು ಉಪನ್ಯಾಸ ನೀಡಿದರು.
ಅಕ್ಕಮಹಾದೇವಿ ಅವರು ಚೆನ್ನಮಲ್ಲಿಕಾರ್ಜುನನನ್ನು ಕೂಡುವ ತವಕವನ್ನು ಕಂಡಂತೆ ಶಿವಯೋಗಿಗಳು ಅಖಂಡೇಶ್ವರ ಶಿವನಲ್ಲಿ ಕೂಡುವ ತವಕವನ್ನು ಕಾಣುತ್ತೇವೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿ.ಎನ್.ಪಾಟೀಲ ಮಾತನಾಡಿ, ಶರಣ ಷಣ್ಮುಖ ಸ್ವಾಮಿಗಳ ಐತಿಹಾಸಿಕ ಹಿನ್ನೆಲೆಯನ್ನು ವಿವರಿಸಿದರು.
ಕುಸಮಾ ಹೆಬ್ಬಳ್ಳಿ, ಜಯಶ್ರೀ ಯರನಾಳ ಇವರಿಂದ ವಚನ ಗಾಯನ ನಡೆಯಿತು. ಮಹಾಬಳೇಶ ಗುಡಗುಂಟಿ ಸ್ವಾಗತಿಸಿದರು. ಎಸ್.ವಿ.ಚವಡಾಪುರ ನಿರೂಪಿಸಿದರು.