ಬನಹಟ್ಟಿಯ ಭದ್ರಣ್ಣವರ ಕಲ್ಯಾಣಮಂಟಪದಲ್ಲಿ ಜರುಗಿದ ಭಕ್ತಿಯ ಗುರುವಂದನೆ ಕಾರ್ಯಕ್ರಮವನ್ನು ಹಿರೇಮಠದ ಶರಣಬಸವ ಶಿವಾಚಾರ್ಯರು ಉದ್ಘಾಟಿಸಿದರು. ಡಾ. ಡಿ.ಎ. ಬಾಗಲಕೋಟೆ, ಎಚ್.ಆರ್. ಮೆಟಗುಡ್ಡ, ಜಯವಂತ ಕಾಡದೇವರ, ಅಶೋಕ ಪತ್ತಾರ, ಎ.ಸಿ. ಹಳ್ಳಿ, ಸಿದ್ಧರಾಮ ಹಾವಿನಾಳ ಇತರರಿದ್ದರು.
- ಹಿರೇಮಠದ ಶರಣಬಸವ ಶಿವಾಚಾರ್ಯರು ಹೇಳಿಕೆ
- ವಯಸ್ಸಾದ ತಂದೆ-ತಾಯಿ ಪೋಷಣೆ ಅಗತ್ಯ
- ವಿದ್ಯಾರ್ಥಿಗಳು ಕಲಿಸಿದ ಗುರುಗಳಿಗಿಂತ ಉನ್ನತ ಸ್ಥಾನ ತಲುಪಬೇಕು
ರಬಕವಿ/ಬನಹಟ್ಟಿ: ವಿದ್ಯಾರ್ಥಿಗಳು ಕಲಿಸಿದ ಗುರುಗಳಿಗಿಂತ ಉನ್ನತ ಸ್ಥಾನ ತಲುಪಬೇಕು. ಆಗ ಮಾತ್ರ ವಿದ್ಯೆ ಕಲಿಸಿದ ಗುರುಗಳಲ್ಲಿ ಸಾರ್ಥಕಭಾವ ಮೂಡುತ್ತದೆಯೆಂದು ಹಿರೇಮಠದ ಶರಣಬಸವ ಶಿವಾಚಾರ್ಯರು ಹೇಳಿದರು.
ಬನಹಟ್ಟಿಯ ಭದ್ರನ್ನವರ ಕಲ್ಯಾಣಮಂಟಪದಲ್ಲಿ ಭಾನುವಾರ ಜರುಗಿದ ಸರ್ಕಾರಿ ಶಾಲೆಯ 2000-2001ನೇ ಸಾಲಿನ ವಿದ್ಯಾರ್ಥಿಗಳ ಭಕ್ತಿ ಗುರುವಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಸ್‌ಆರ್‌ಎ ಶಾಲೆಯಲ್ಲಿ ವ್ಯಾಸಾಂಗ ಮಾಡಿದ ವಿದ್ಯಾರ್ಥಿಗಳು ವಿಶ್ವದೆಲ್ಲೆಡೆ ಸಿಗುತ್ತಾರೆ. ದೇಶ ವಿದೇಶಗಳಲ್ಲಿ ಉತ್ತಮ ಸ್ಥಾನ-ಮಾನ ಹೊಂದಿದ್ದಾರೆ. ವಿದ್ಯಾರ್ಥಿಗಳು ಉನ್ನತ ಸ್ಥಾನವೆಂಬುದು ಎಷ್ಟೇ ದೊಡ್ಡದಿರಲಿ ನಮ್ಮ ಸಂಸ್ಕೃತಿಯನ್ನು ಬಿಡಬಾರದು. ವಯಸ್ಸಾದ ತಂದೆ-ತಾಯಿ ಪೋಷಣೆ ಅಗತ್ಯ ಎಂದು ತಿಳಿಸಿದರು.
ಶಾಲೆಯಲ್ಲಿ ಮಾಡುತ್ತಿದ್ದ ಚೇಷ್ಟೆಗಳು, ನೆನಪುಗಳನ್ನು ಹಳೆಯ ವಿದ್ಯಾರ್ಥಿಗಳು ಹಂಚಿಕೊಂಡರು. ಅಧ್ಯಕ್ಷತೆ ಡಾ.ಡಿ.ಎ. ಬಾಗಲಕೋಟೆ ವಹಿಸಿದ್ದರು. ನಿವೃತ್ತ ಶಿಕ್ಷಕರಿಗೆ ಗೌರವ ಸಮರ್ಪಣೆ ಮಾಡಲಾಯಿತು.
ಎಚ್.ಆರ್. ಮೆಟಗುಡ್ಡ, ಜಯವಂತ ಕಾಡದೇವರ, ಅಶೋಕ ಪತ್ತಾರ, ಎ.ಸಿ. ಹಳ್ಳಿ, ಸಿದ್ಧರಾಮ ಹಾವಿನಾಳ, ಆರ್.ಡಿ. ಪಾಠಕ, ಎನ್.ಎಸ್. ಕಂಕನಮೇಲಿ, ಡಾ. ಎಚ್.ಬಿ.ನದ್ಾ, ಎಂ.ಪಿ. ಧೂಪದಾಳ, ಆರ್.ಎಂ. ಉಕ್ಕಲಿ, ಬಿ.ಜಿ. ಜೋರಾಪುರ, ಎಸ್.ಆರ್. ಕಲಾದಗಿ, ಎಂ.ಎನ್. ವಲ್ಯಾಪುರ, ಎಂ.ಎಸ್. ಹೊಸೂರ, ಎಸ್.ಆರ್. ಪದಕಿ, ಜಿ.ಕೆ. ಸುರಪುರ, ಎಸ್.ಕೆ. ಹುನ್ನೂರ ಇತರರಿದ್ದರು.