ಗುಳೇದಗುಡ್ಡ ಸಮೀಪದ ಅಮರೇಶ್ವರ ಬ್ರಹನ್ಮಠ ಜನಕಲ್ಯಾಣ ಪ್ರತಿಷ್ಠಾನ ಅಮರೇಶ್ವರ ಮಠದ ವತಿಯಿಂದ ಹಮ್ಮಿಕೊಂಡಿದ್ದ ಬಸಯ್ಯಸ್ವಾಮಿಗಳ ನುಡಿ ನಮನ ಕಾರ್ಯಕ್ರಮವನ್ನು ಕಾಶಿ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಉದ್ಘಾಟಿಸಿದರು. ಕಮತಗಿ ಕೋಟೆಕಲ್ ಹೊಳೆಹುಚ್ಚೇಶ್ವರ ಸ್ವಾಮೀಜಿ, ಕೆರೂರು ಚರಂತಿಮಠದ ಡಾ. ಶಿವಕುಮಾರ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಅಮರೇಶ್ವರ ಮಠದ ಡಾ.ನೀಲಕಂಠ ಶಿವಾಚಾರ್ಯ ಸ್ವಾಮೀಜಿ, ಒಪ್ಪತ್ತೇಶ್ವರ ಮಠದ ಒಪ್ಪತ್ತೇಶ್ವರ ಮಹಾಸ್ವಾಮಿಗಳು, ಮುರುಘಾಮಠದ ಕಾಶಿನಾಥ ಮಹಾಸ್ವಾಮಿಗಳು ಇದ್ದರು. 
ಬಾಗಲಕೋಟೆ

ಶಿಷ್ಯ ಗುರುವನ್ನೂ ಮೀರಿಸಬೇಕು..!

ಪ್ರಮುಖ ಮುಖ್ಯಾಂಶಗಳು

  • ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಅಭಿಮತ
  • ಶಿಷ್ಯ ಯಾವತ್ತೂ ಗುರುವನ್ನು ಮೀರಿಸುವಂತಿರಬೇಕು
  • ಶ್ರೀಮಠದ ಸೇವಾಧಾರಿಗಳಾಗಿದ್ದ ಬಸಯ್ಯಸ್ವಾಮಿಗಳ ನುಡಿ ನಮನ ಕಾರ್ಯಕ್ರಮ
ಗುಳೇದಗುಡ್ಡ: ಶಿಷ್ಯ ಯಾವತ್ತೂ ಗುರುವನ್ನು ಮೀರಿಸುವಂತಿರಬೇಕು. ಯಾವುದೇ ಕ್ಷೇತ್ರದಲ್ಲಿ ಇರಲಿ ಗುರು-ಶಿಷ್ಯ ಪರಂಪರೆ ಇದ್ದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದು ಕಾಶಿ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಅಮರೇಶ್ವರ ಬ್ರಹನ್ಮಠ ಜನಕಲ್ಯಾಣ ಪ್ರತಿಷ್ಠಾನ, ಅಮರೇಶ್ವರ ಮಠದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಶ್ರೀಮಠದ ಸೇವಾಧಾರಿಗಳಾಗಿದ್ದ ಬಸಯ್ಯಸ್ವಾಮಿಗಳ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸೇವೆ ಮಾಡುವುದು ಎಲ್ಲಕ್ಕಿಂತ ದೊಡ್ಡ ಧರ್ಮ. ಸೇವಾ ಪ್ರತ್ಯಕ್ಷ ಧರ್ಮವಾಗಿ ಬಂದವರೂ ಎಂದರೆ
ಬಸಯ್ಯಸ್ವಾಮಿಗಳು, ಲಕ್ಷ್ಮೀಬಾಯಿ ಅಮ್ಮನವರು, ಯಾವ ಪೂಜೆ ತಪಸ್ಸಿನಿಂದ ಬಾರದಂತಹ ಶಕ್ತಿಯನ್ನು ಸೇವೆಯಿಂದ ಪಡೆದುಕೊಳ್ಳಲು ಸಾಧ್ಯ. ತಮ್ಮ ಜೀವನದ ಕೊನೆಯ ಕ್ಷಣದವರೆಗೂ ಜನರ ಸೇವೆಗೆ ಮುಡಿಪಾಗಿಟ್ಟಿದ್ದರು ಎಂದು ಬಣ್ಣಿಸಿದರು.
ಕಮತಗಿ ಕೋಟೆಕಲ್ ಹೊಳೆಹುಚ್ಚೇಶ್ವರ ಸ್ವಾಮೀಜಿ, ಕೆರೂರು ಚರಂತಿಮಠದ ಡಾ. ಶಿವಕುಮಾರ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಅಮರೇಶ್ವರ ಮಠದ ಡಾ. ನೀಲಕಂಠ ಶಿವಾಚಾರ್ಯ ಸ್ವಾಮೀಜಿ, ಒಪ್ಪತ್ತೇಶ್ವರ ಮಠದ ಒಪ್ಪತ್ತೇಶ್ವರ ಮಹಾಸ್ವಾಮಿಗಳು, ಮುರುಘಾಮಠದ ಕಾಶಿನಾಥ ಮಹಾಸ್ವಾಮಿಗಳು, ಮರಡಿಮಠದ ಕಾಡಸಿದ್ಧೇಶ್ವರ ಮಹಾಸ್ವಾಮಿಗಳು, ಟೀಕಿನಮಠದ ಮಲ್ಲಿಕಾರ್ಜುನ ದೇವರು, ಬಸವರಾಜ ಶಾಸೀಗಳು ಸಾನ್ನಿಧ್ಯ ವಹಿಸಿದ್ದರು.
ಮಾಜಿ ಶಾಸಕರಾದ ರಾಜಶೇಖರ ಶೀಲವಂತ, ರಾಮನಗೌಡ ಪಾಟೀಲ, ಜಿ.ಎಸ್.ದೇಸಾಯಿ, ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ.ಪಾಟೀಲ, ನಾಗೇಶ ಮೊರಬದ, ಪ್ರಭು ಮೊರಬದ ಇತರರಿದ್ದರು.