ಶಂಕರ ಮಠದಲ್ಲಿ ಶನಿವಾರ ಸಭೆ ನಡೆಸಿದ ಪ್ರಮುಖರು
ಬಾಗಲಕೋಟೆ: ದೇಶದ ಇತಿಹಾಸದಲ್ಲಿ ಆದಿ ಜಗದ್ಗುರು ಶಂಕರಾಚಾರ್ಯರು ತಮ್ಮದೆಯಾದ ಕೊಡುಗೆ ನೀಡಿದ್ದಾರೆ. ಧಾರ್ಮಿಕ, ಸಾಮಾಜಿಕ ಶಕ್ತಿಯಾಗಿದ್ದಾರೆ. ಸನಾದನ ಧರ್ಮ ಪುನರ್ ಸ್ಥಾಪಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಇಂತಹ ಮಹಾನ್ ತತ್ವಜ್ಞಾನಿ ಕುರಿತು ಅವಹೇಳನ ಖಂಡನೀಯ ಎಂದು ಬಾಗಲಕೋಟೆ ಶಂಕರ ಸ್ವಾಧ್ಯಾಯ ಮಂಡಳಿ ಹಾಗೂ ಶೃಂಗೇರಿ ಶಂಕರಮಠ ಸಮಿತಿ ತಿಳಿಸಿದೆ.
ಇಲ್ಲಿನ ಶಂಕರ ಮಠದಲ್ಲಿ ಗುರುವಾರ ಸಭೆ ನಡೆಸಿದ ಪ್ರಮುಖರು, ದೇಶದಲ್ಲಿ ನಾಲ್ಕು ಭಾಗದಲ್ಲಿ ನಾಲ್ಕು ಆಮನಾಯ ಪೀಠ ಸ್ಥಾಪಿಸಿದ ಶಂಕರಾಚಾರ್ಯರು 32 ವರ್ಷದ ಜೀವಿತಾವಧಿಯಲ್ಲಿ ಅವಿಸ್ಮರಣೀಯವಾಗಿ ಆಧ್ಯಾತ್ಮಿಕ ಶಕ್ತಿ ತುಂಬಿದ್ದಾರೆ. ಆದರೇ ಕೆಲ ಅಜ್ಞಾನಿಗಳು ಅವರನ್ನು ತತ್ವಾದರ್ಶ ಮೂಲಕ ಎದುರಿಸಲಾಗದೇ ನಿಂದನೆಯಲ್ಲಿ ನಿರತರಾಗಿದ್ದಾರೆ. ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಮಕ್ಕಳಲ್ಲಿ ಭಕ್ತಿ ಗೀತೆ ಮೂಲಕ ಹಾಗೂ ಕೆಲವು ಗ್ರಂಥಗಳ ಮೂಲಕ ಅವಹೇಳನ ಮಾಡಲು ಮುಂದಾಗಿರುವುದು ಹಾಸ್ಯಾಸ್ಪದ. ಇಂತಹ ಘಟನೆಗಳಿಗೆ ಮುಂದಿನ ದಿನಗಳಲ್ಲಿ ಅವಕಾಶ ನೀಡಬಾರದು. ಬೆಂಗಳೂರಿನ ಪೂರ್ಣ ಪ್ರಜ್ಞ ವಿದ್ಯಾಪೀಠವು ಮಣಿ ಮಂಜರಿ ಗ್ರಂಥ ಪ್ರಕಟಿಸಿ ಸಾಮಾಜಿಕ ವ್ಯವಸ್ಥೆಯನ್ನೆ ಹದಗೆಡಿಸುತ್ತಿದೆ. ಇದಕ್ಕೆ ಗೃಹ ಸಚಿವಾಲಯ ಪರಿಶೀಲನೆ ಮಾಡಿ ನಿಷೇಧ ಮಾಡಬೇಕು.
ಸರ್ಕಾರವು ಶಂಕರಾಚಾರ್ಯರು ಕುರಿತು ಟೀಕೆ, ಟಿಪ್ಪಣಿ ಗ್ರಂಥಗಳನ್ನು ನಿಷೇಧಿಸಬೇಕು. ದೇಶದ ಧಾರ್ಮಿಕ, ಆಚರಣೆ , ಪದ್ದತಿಗಳಿಗೆ ಕಂಟಕವಾಗುವ ಯಾವುದೇ ಪ್ರಕ್ರಿಯೆಗೆ ಪೂರ್ಣ ವಿರಾಮ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಶಂಕರ ಸ್ವಾಧ್ಯಾಯ ಮಂಡಳದ ಅಧ್ಯಕ್ಷ,ಬಾಗಲಕೋಟೆ ಶಂಕರ ಮಠದ ವ್ಯವಸ್ಥಾಪಕ ಶಿವರಾಮ ಹೆಗಡೆ, ಶಂಕರ ಸ್ವಾಧ್ಯಾಯ ಮಂಡಳದ ಗೌರವ ಅಧ್ಯಕ್ಷ ವಾಮನರಾವ ಕವಟೇಕರ, ಕಾರ್ಯದರ್ಶಿ ಕಿರಣ ಬಾಗಲಕೋಟ, ಹಿರಿಯರಾದ ಜಿ.ಎನ್.ಕುಲಕರ್ಣಿ, ಡಾ.ವಿನೋದ ಪುರಾಣಿಕ, ಡಾ.ಗಿರೀಶ ಮಾಸೂರಕರ, ಮಹಾದೇವ ದೀಕ್ಷಿತ್, ರಘುನಾಥ್ ಗುಡಿ, ಶ್ರೀಮಠದ ಪ್ರಧಾನ ಅರ್ಚಕ ಸಂಜೀವ ಪಾಟೀಲ ತಿಳಿಸಿದ್ದಾರೆ.