ಬೀಳಗಿಯ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಮಾಜಿ ಸಚಿವ ಡಾ. ಮುರುಗೇಶ ಆರ್. ನಿರಾಣಿಯವರ 61ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ರಾಮಣ್ಣ ಕಾಳಪ್ಪಗೋಳ, ಸಿದ್ದನಗೌಡ ಪಾಟೀಲ, ಮುದಕಪ್ಪ ಮಳೆನ್ನವರ, ಗಂಗಾಧರ ಬಿಂಗಿ, ಬಸವಂತಪ್ಪ ಸಂಕಾನಟ್ಟಿ, ಸಿದ್ದಲಿಂಗ ನಾಗರಾಳ, ಮುತ್ತು ಬೋರ್ಜಿ, ರವಿ ಚವಾಣ್ ಇತರರಿದ್ದರು. 
ಬಾಗಲಕೋಟೆ

ಬೀಳಗಿ ಕ್ಷೇತ್ರದ ಜನರ ಋಣ ಮರೆಯುವುದಿಲ್ಲ

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ ನಿರಾಣಿ ಹೇಳಿಕೆ
  • 61ನೇ ಜನ್ಮ ದಿನ ಕಾರ್ಯಕ್ರಮ
  • ಸನ್ಮಾನ ಸ್ವೀಕಾರ ಗೋ ಮಾತೆ, ದೇವರಿಗೆ ಪೂಜೆ ಸಲ್ಲಿಕೆ
ಬೀಳಗಿ: ಬೀಳಗಿ ಮತಕ್ಷೇತ್ರದ ಮತದಾರರ ಆಶೀರ್ವಾದದಿಂದ ಮೂರು ಭಾರಿ ಶಾಸಕ ಹಾಗೂ ಎರಡು ಸಾರಿ ಸಚಿವರನ್ನಾಗಿ ರಾಜ್ಯ ಜನರ ಸೇವೆ ಮಾಡುವ ಭಾಗ್ಯ ನೀಡಿದ ಋಣವನ್ನು ನಾನು ಎಂದು ಮರೆಯಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಡಾ. ಮುರುಗೇಶ ಆರ್. ನಿರಾಣಿ ಹೇಳಿದರು.
ಬೀಳಗಿಯಲ್ಲಿ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಶುಕ್ರವಾರ ಮತಕ್ಷೇತ್ರದ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗೂ ಅವರ ಅಪಾರ ಅಭಿಮಾನ ಬಳಗದವರು ಹಮ್ಮಿಕೊಂಡಿದ್ದ 61ನೇ ಜನ್ಮದ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಆವರು ಮಾತನಾಡಿದರು.
ಪ್ರತಿವರ್ಷವು ಈ ಭಾಗದ ಜನ ಸಾಮಾನ್ಯರು ಅಭಿಲಾಶೆಯಂತೆ ಉತ್ತರ ಕರ್ನಾಟಕ ಜೀವನದಿ ಕೃಷ್ಣಾ ನದಿಗೆ ಭವ್ಯ ಕೃಷ್ಣಾ ಆರತಿ ಮಾಡುವ ಮೂಲಕ ನಮ್ಮ ಸಂಸ್ಕೃತಿಯ ಪರಂಪರೆ ಉಳಿವಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಇದರಿಂದ ರೈತಾಪಿ ಜನರಲ್ಲಿ ಉತ್ಸಾಹ ಇಮ್ಮಡಿಗೊಳ್ಳಲಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಎಚ್.ಆರ್. ನಿರಾಣಿ, ಬಿಜೆಪಿ ಹಿರಿಯ ಮುಖಂಡರಾದ ಶಿವಾನಂದ ನಿಂಗನೂರ, ಎಂ.ಎಂ. ಶಂಭೋಜಿ, ಮಲ್ಲಿಕಾರ್ಜುನ ಅಂಗಡಿ, ಬಿಜೆಪಿ ತಾಲೂಕು ಅಧ್ಯಕ್ಷ ಹೊಳಬಸು ಬಾಳಶಟ್ಟೆ, ರಾಮಣ್ಣ ಕಾಳಪ್ಪಗೋಳ, ಸಿದ್ದನಗೌಡ ಪಾಟೀಲ, ಮುದಕಪ್ಪ ಮಳೆನ್ನವರ, ಗಂಗಾಧರ ಬಿಂಗಿ, ಬಸವಂತಪ್ಪ ಸಂಕಾನಟ್ಟಿ, ಸಿದ್ದಲಿಂಗ ನಾಗರಾಳ, ಮುತ್ತು ಬೋರ್ಜಿ, ರವಿ ಚವಾಣ್ ಇತರರಿದ್ದರು.
ನಾಗರಾಳ ತಾಂಡಾ ಹತ್ತಿರದ ಗೋಶಾಲೆಯಲ್ಲಿ ಗೋಮಾತೆ ಪೂಜೆ, ಸಿದ್ಧೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಕಾರ್ಯಕರ್ತರು, ಅಭಿಮಾನಿಗಳು ಸಲ್ಲಿಸಿದರು. ನಿರಾಣಿಯವರ ಜನ್ಮ ದಿನದ ಪ್ರಯುಕ್ತ ಎಂ.ಆರ್.ಎನ್. (ನಿರಾಣಿ) ಫೌಂಡೇಶನ್​ ಹಾಗೂ ಹುಬ್ಬಳ್ಳಿಯ ಡಾ. ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ಶಸ ಚಿಕಿತ್ಸೆ ಶಿಬಿರದಲ್ಲಿ ಕಣ್ಣಿನ ಪೊರೆ ನೇತ್ರ ಚಿಕಿತ್ಸೆಗೆ ಒಳಪಡುವ 46 ಜನ ಲಾನುಭವಿಗಳಿಗೆ ಉಚಿತ ಸೇವೆ ಒದಗಿಸುವ ಮೂಲಕ ಹುಬ್ಬಳ್ಳಿಗೆ ಡಾ. ಎಂ.ಎಂ. ಜೋಶಿ, ನೇತ್ರ ವಿಜ್ಞಾನ ಸಂಸ್ಥೆ ವಾಹನದ ವ್ಯವಸ್ಥೆಯ ಮಾಡುವ ಮೂಲಕ ಕಳುಹಿಸಿಕೊಡಲಾಯಿತು.