ಕಲಾದಗಿಯಲ್ಲಿ ಆರಂಭವಾಗಿರುವ ಶುದ್ಧ ನೀರಿನ ಘಟಕ. 
ಬಾಗಲಕೋಟೆ

ಅಂತೂ ಚಾಲನೆಗೊಂಡ ಶುದ್ಧ ನೀರಿನ ಘಟಕ..!

ಪ್ರಮುಖ ಮುಖ್ಯಾಂಶಗಳು

  • ಮೂರು ದಿನಗಳಿಂದ ಸ್ಪಂದಿಸದ ಅಧಿಕಾರಿಗಳು, ಗುತ್ತಿಗೆದಾರ
  • ಪತ್ರಿಕೆ ವರದಿಗೆ ಸಾರ್ವಜನಿಕರ ಶ್ಲಾಘನೆ
ಕಲಾದಗಿ: ಕಳೆದ ಮೂರು ದಿನಗಳಿಂದ ಬಂದ್ ಆಗಿ ಸಾರ್ವಜನಿಕರ ಹೈರಾಣಕ್ಕೆ ಕಾರಣವಾಗಿದ್ದ ಗ್ರಾಮದ ಹೊಸೂರ್ ಚೌಕ ಸಮೀಪ ಇರುವ ಶುದ್ಧ ನೀರಿನ ಘಟಕ ಅಂತೂ ಇಂತೂ ಶನಿವಾರ ಚಾಲನೆಗೊಂಡಿದೆ.
ಏ. 24ರಂದು `ವಿಜಯವಾಣಿ' ಯಲ್ಲಿ ಈ ಬಗ್ಗೆ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಎಚ್ಚೆತ್ತ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಹಾಗೂ ಈ ಘಟಕದ ನಿರ್ವಹಣೆಯ ಟೆಂಡರ್ ಪಡೆದಿರುವ ಖಾಸಗಿ ಏಜನ್ಸಿಯವರು ಘಟಕಕ್ಕೆ ದುರಸ್ತಿಗೊಳಿಸಿ ಕಾಯಿನ್ ಬಾಕ್ಸ್ ಅಳವಡಿಸಿದ್ದಾರೆ.
ಕಳೆದ ಮೂರು ದಿನಗಳಿಂದಲೂ ಸ್ಥಳಿಯ ಗ್ರಾಪಂ ಪಿಡಿಒ, ತಾಪಂ ಇಒ ಹಾಗೂ ಪತ್ರಿಕೆಯ ದೂರವಾಣಿ ಕರೆಗೆ ಸ್ಪಂದಿಸಿದೇ ದಿವ್ಯ ನಿರ್ಲಕ್ಷ್ಯ ತೋರಿದ್ದ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಅಽಕಾರಿಗಳು ಹಾಗೂ ಖಾಸಗಿ ಏಜೆನ್ಸಿಯವರು ಕೊನೆಗೆ `ಪತ್ರಿಕೆ'ಯ ವರದಿಗೆ ದಿಢೀರ್ ಎಚ್ಚೆತ್ತುಕೊಂಡು ಸಮಸ್ಯೆ ಪರಿಹರಿಸಲು ಮುಂದಾಗಿದ್ದಕ್ಕೆ ಸಾರ್ವಜನಿಕರು `ವಿಜಯವಾಣಿ'ಗೆ ಕೃತಜ್ಞತೆ ಸಲ್ಲಿಸಿದ್ದಾರೆ.