ಬನಹಟ್ಟಿಯ ಕಾಡಸಿದ್ಧೇಶ್ವರ ಕುಸ್ತಿ ಮೈದಾನದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಹಿಂದೂ ಸಮಾವೇಶ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್‌ನ ಕರ್ನಾಟಕ ಉತ್ತರ ಮತ್ತು ದಕ್ಷಿಣ ಪ್ರಚಾರ ಪ್ರಮುಖ ಸಂಚಾಲಕ ಅರುಣಕುಮಾರ ಮಾತನಾಡಿದರು. ಶರಣ ಬಸವ ಶಿವಾಚಾರ್ಯರು, ಸಾವಿತ್ರಿ ಕಾಡದೇವರ, ಶ್ರೀಶೈಲ ಗೊಂಬಿ ಇದ್ದರು.
- ಪ್ರಚಾರ ಪ್ರಮುಖ ಸಂಚಾಲಕ ಅರುಣಕುಮಾರ ಆತಂಕ
- ಜಾತಿ, ಭಾಷೆ, ಕಾಯಕ ಯಾವುದೇ ಇರಲಿ ನಾವೆಲ್ಲ ಹಿಂದೂ
- ಭಾರತ ಗೋವಿನ ಸಂತತಿಯ ರಾಷ್ಟ್ರವಾಗಿತ್ತು
ರಬಕವಿ-ಬನಹಟ್ಟಿ : ಭಾರತ ಗೋವಿನ ಸಂತತಿಯ ರಾಷ್ಟ್ರವಾಗಿತ್ತು. ಕ್ರೂರಿಗಳಿಂದ ಇತ್ತೀಚಿನ ದಿನಗಳಲ್ಲಿ ಜೊಲ್ಲು ಬೀಳುವ ನೆಲದಲ್ಲಿ ರಕ್ತ ಬೀಳುವಂತಾಗಿದೆ. ಇದರಿಂದ ಭಾರತಾಂಬೆಗೆ ನೋವುಂಟಾಗಿದ್ದು, ಗೋವಿನ ಸಂತತಿ ಹೆಚ್ಚಿಸಬೇಕಿದೆ ಎಂದು ಆರ್‌ಎಸ್‌ಎಸ್‌ನ ಕರ್ನಾಟಕ ಉತ್ತರ ಮತ್ತು ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ ಸಂಚಾಲಕ ಅರುಣಕುಮಾರ ಹೇಳಿದರು.
ಬನಹಟ್ಟಿಯ ಕಾಡಸಿದ್ಧೇಶ್ವರ ದೇವಸ್ಥಾನದ ಕುಸ್ತಿ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹಿಂದೂ ಸಮಾವೇಶದಲ್ಲಿ ಅವರು ಮಾತನಾಡಿ, ಜಾತಿ, ಕಾಯಕ, ಭಾಷೆ, ಆಹಾರ, ಉಡುಗೆ ಸೇರಿ ಏನೇ ಇದ್ದರೂ ಸಹ ನಾವೆಲ್ಲ ಒಂದಾಗಿ ಬಾಳಬೇಕು. ಜಾತಿ ನೆಪದಲ್ಲಿ ಪ್ರತ್ಯೇಕತೆ ಸರಿಯಲ್ಲ. ಇದರಿಂದ ದೂರ ಉಳಿದು ಹಿಂದೂ ರಾಷ್ಟ್ರಕ್ಕಾಗಿ ಒಗ್ಗುಡಿಕೊಂಡು ಹೋಗಬೇಕು ಎಂದರು.
ಜಗತ್ತಿನಲ್ಲಿ ಇಸ್ಲಾಂ ಹಾಗೂ ಕ್ರೈಸ್ತರು ಮತಾಂತರ ಮಾಡುವ ವ್ಯವಸ್ಥಿತ ಪಿತೂರಿ ಮಾಡುತ್ತಿದ್ದಾರೆ. ಇದ್ಯಾವುದಕ್ಕೂ ಜಗ್ಗದೆ ನಮ್ಮ ಸನಾತನ ಧರ್ಮದ ಮೂಲಕ ಹಿಂದೂ ಸಂಸ್ಕೃತಿ ಉಳಿಸಿ, ಬೆಳೆಸುವ ಕಾರ್ಯವಾಗಬೇಕು. ‘ಲವ್ ಜಿಹಾದ್’ ಮೂಲಕ ಶತ್ರುಗಳು ನಮ್ಮ ಮನೆ ಅಂಗಳಕ್ಕೆ ಧಾವಿಸುತ್ತಿದ್ದಾರೆ. ಈ ಬಗ್ಗೆ ಎಚ್ಚರ ಇರಬೇಕು ಎಂದರು.
ಮುಖಂಡ ಶ್ರೀಶೈಲ ಗೊಂಬಿ ಮಾತನಾಡಿ, ಪ್ರತಿಯೊಬ್ಬ ಹಿಂದೂ ಒಗ್ಗಟ್ಟಾಗುವ ಮೂಲಕ ಧರ್ಮ ರಕ್ಷಣೆಗೆ ಮುಂದಾಗಬೇಕು. ಪೂರ್ವಿಕರ ಶ್ರಮ ಬಲಿದಾನದಿಂದಾಗಿ ಸನಾತನ ಹಿಂದೂ ಧರ್ಮವು ಇನ್ನೂ ಜೀವಂತವಿದ್ದು, ಅದರ ಪಾಲನೆ ಮಾಡಬೇಕಾಗಿದೆ ಎಂದರು.
ಬನಹಟ್ಟಿ ಹಿರೇಮಠದ ಶರಣ ಬಸವ ಶಿವಾಚಾರ್ಯರು, ಮಹಿಳಾ ಪ್ರತಿನಿಧಿ ಸಾವಿತ್ರಿ ಚಂದ್ರಶೇಖರ ಕಾಡದೇವರ, ಶಾಸಕ ಸಿದ್ದು ಸವದಿ ಉಪಸ್ಥಿತರಿದ್ದರು.