ಬಾಗಲಕೋಟೆ ನಗರದ ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನಲ್ಲಿ ನವಜಾತ ಶಿಶುವಿಗೆ ಚಿಕ್ಕಮಕ್ಕಳ ಶಸ್ತçಚಿಕಿತ್ಸಾ ತಜ್ಞ ಡಾ.ರಮೇಶ ಬಾ. ಹಟ್ಟಿ ನೇತೃತ್ವದ ವೈದ್ಯರ ತಂಡ ಚಿಕಿತ್ಸೆ ನೀಡಿದರು. ಶಸ್ತçಚಿಕಿತ್ಸಾ ತಜ್ಞ ಡಾ.ವಿಕ್ರಮ್ ನಾಗಠಾಣ, ಅರವಳಿಕೆ ತಜ್ಞೆ ಡಾ.ಶಿಲ್ಪಾ ಮಾಸೂರ, ಚಿಕ್ಕಮಕ್ಕಳ ತಜ್ಞ ಡಾ.ಗಂಗಾಧರ ಮಿರ್ಜಿ ಹಾಗೂ ಸಿಬ್ಬಂದಿ ಇದ್ದರು.  
ಬಾಗಲಕೋಟೆ

ಕುಮಾರೇಶ್ವರ ಆಸ್ಪತ್ರೆಯಲ್ಲಿ ನವಜಾತ ಶಿಶುವಿಗೆ ಯಶಸ್ವಿ ಚಿಕಿತ್ಸೆ

ಬಾಗಲಕೋಟೆ: ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ಮೆಡಿಕಲ್ ಕಾಲೇಜ್ ಮತ್ತು ಹಾನಗಲ್ಲ ಕುಮಾರೇಶ್ವರ ಆಸ್ಪತ್ರೆಯಲ್ಲಿ ೧.೧ ಕೆ.ಜಿ ತೂಕದ ನವಜಾತ ಶಿಶುವಿಗೆ ಚಿಕ್ಕಮಕ್ಕಳ ಶಸ್ತçಚಿಕಿತ್ಸಾ ತಜ್ಞ ಡಾ.ರಮೇಶ ಬಾ. ಹಟ್ಟಿ ನೇತೃತ್ವದ ವೈದ್ಯರ ತಂಡ ಕ್ಲಿಷ್ಟಕರವಾದ ಶಸ್ತçಚಿಕಿತ್ಸೆ ಮಾಡಿ ಪ್ರಾಣಾಪಾಯದಿಂದ ಪಾರುಮಾಡಿದರು.
ಕುಮಾರೇಶ್ವರ ಆಸ್ಪತ್ರೆಯ ಪ್ರಸೂತಿ ವಿಭಾಗದಲ್ಲಿ ಅವಽಗೆ ಮೊದಲೇ ಜನಿಸಿದ್ದ ಮಗು ತೀವ್ರ ಕಡಿಮೆ ತೂಕದೊಂದಿಗೆ ಪ್ರಾಣಕ್ಕೆ ಅಪಾಯಕಾರಿಯಾದ ಎರಡು ಅಪರೂಪದ ಜನ್ಮಜಾತ ಸಮಸ್ಯೆಗಳಿಂದ ಬಳಲುತ್ತಿತ್ತು. ನವಜಾತ ಶಿಶುವನ್ನು ಎಚ್.ಎಸ್.ಕೆ ಸುಪರ್ ಸ್ಪೆಷಾಲಿಟಿ ಆಸ್ಪತ್ರೆಯ ಚಿಕ್ಕಮಕ್ಕಳ ಶಸ್ತçಚಿಕಿತ್ಸಾ ವಿಭಾಗಕ್ಕೆ ಚಿಕಿತ್ಸೆಗೆಂದು ದಾಖಲಿಸಲಾಯಿತು.
ಪರೀಕ್ಷಿಸಿದ ವೈದ್ಯರು ಶಿಶುವಿನ ಸಣ್ಣಕರುಳಿನ ದಾರಿಯಲ್ಲಿ ತಡೆಯುಂಟಾಗುವ ಡ್ಯುಒಡಿನಲ್ ಅಟ್ರೆಸಿಯಾ ಮತ್ತು ಮಲದ್ವಾರದ ರಚನೆಯಲ್ಲಿ ಲೋಪವಿರುವ ಅನೋರೆಕ್ಟಲ್ ಮಾರ್ಲಾರ್ಮೇಷನ್ ಎನ್ನುವ ಎರಡು ಗಂಭೀರ ತೊಂದರೆಗಳಿರುವುದನ್ನು ಗುರುತಿಸಿದರು. ಏಕಕಾಲಕ್ಕೆ ನವಜಾತ ಶಿಶುವಿನ ಎರಡು ತೊಂದರೆಗಳಿಗೆ ಶಸ್ತçಚಿಕಿತ್ಸೆ ಮಾಡುವುದು ಸವಾಲಿನ ಕೆಲಸವಾಗಿತ್ತು. ವೈದ್ಯರ ತಂಡ ಸಮಯೋಚಿತ ನಿರ್ಧಾರ ತೆಗೆದುಕೊಂಡು ಅತ್ಯಾಧುನಿಕ ಶಸ್ತçಚಿಕಿತ್ಸಾ ಕೌಶಲ್ಯದಿಂದ ಶಸ್ತçಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ನವಜಾತ ಶಿಶುವಿನ ಪ್ರಾಣಕ್ಕೆ ಅಪಾಯವಾಗಿದ್ದ ಎರಡು ತೊಂದರೆಗಳನ್ನು ಸರಿಪಡಿಸಿರುವರು.
ಶಸ್ತçಚಿಕಿತ್ಸೆ ಸಂದರ್ಭ ಚಿಕ್ಕಮಕ್ಕಳ ತಜ್ಞರು, ಅರವಳಿಕೆ ತಜ್ಞರು, ಅರೆ ವೈದ್ಯಕೀಯ ಸಿಬ್ಬಂದಿ ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಶಸ್ತçಚಿಕಿತ್ಸಾ ತಜ್ಞರಿಗೆ ಅಗತ್ಯದ ಸಹಾಯ ನೀಡಿದರು. ಶಸ್ತçಚಿಕಿತ್ಸೆ ನಂತರ ಮಗು ಚೇತರಿಸಿಕೊಂಡಿದ್ದು ಆರೋಗ್ಯದಲ್ಲಿ ಗಮನಾರ್ಹ ಪ್ರಗತಿ ಕಂಡು ಬಂದಿದೆ. ಮಗುವಿನ ಆರೋಗ್ಯದಲ್ಲಿ ಉಂಟಾದ ಸುಧಾರಣೆ ಪಾಲಕರಿಗೆ ಹರ್ಷತಂದಿದೆ. ಚಿಕಿತ್ಸೆ ನಗದು ರಹಿತ ಯೋಜನೆಯಡಿ ಒದಗಿಸಲಾಗಿದೆ.
ಅಪಾಯದಲ್ಲಿದ್ದ ನವಜಾತ ಶಿಶುವಿಗೆ ಯಶಸ್ವಿ ಶಸ್ತçಚಿಕಿತ್ಸೆ ಮಾಡಿದ ಚಿಕ್ಕಮಕ್ಕಳ ಶಸ್ತç ಚಿಕಿತ್ಸಾ ತಜ್ಞ ಡಾ.ರಮೇಶ ಬಾ. ಹಟ್ಟಿ, ಶಸ್ತçಚಿಕಿತ್ಸಾ ತಜ್ಞ ಡಾ.ವಿಕ್ರಮ್ ನಾಗಠಾಣ, ಅರವಳಿಕೆ ತಜ್ಞೆ ಡಾ.ಶಿಲ್ಪಾ ಮಾಸೂರ, ಚಿಕ್ಕಮಕ್ಕಳ ತಜ್ಞ ಡಾ.ಗಂಗಾಧರ ಮಿರ್ಜಿ ತಂಡದ ಕಾರ್ಯಕ್ಕೆ ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಸಿ.ಚರಂತಿಮಠ, ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಎಂ.ಸಜ್ಜನ (ಬೇವೂರ), ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಭುವನೇಶ್ವರಿ ಯಳಮಲಿ, ವೈದ್ಯಕೀಯ ಅಽÃಕ್ಷಕ ಡಾ.ಶ್ರೀರಾಮ ಕೋರಾ, ಎಚ್.ಎಸ್.ಕೆ ಸುಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ರೊಜೆಕ್ಟ್ ಡೈರೆಕ್ಟರ್ ಡಾ.ನವೀನ ವಿ.ಚರಂತಿಮಠ, ಉಪಪ್ರಾಚಾರ್ಯ ಡಾ.ಸಿ.ಎಸ್.ಹಿರೇಮಠ ಹರ್ಷ ವ್ಯಕ್ತಪಡಿಸಿದ್ದಾರೆ.