ಬಾಗಲಕೋಟೆ ನಗರದ ಬಿವಿವಿ ಸಂಘದ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಎಂ.ಕಾಂ. ಪಿಜಿ ವಿಭಾಗ ಮತ್ತು ಕರೀಯರ್ ಗೈಡೆನ್ಸ್ ಪ್ಲೇಸಮೆಂಟ್ ಸೆಲ್ ವತಿಯಿಂದ ಹಮ್ಮಿಕೊಂಡಿದ್ದ ಯುಜಿಸಿ ನೆಟ್ ಮತ್ತು ಕೆ - ಸೆಟ್ ಸಕ್ಸಸ್ ಬ್ಲೂ-ಪ್ರಿಂಟ್ ಒಂದು ದಿನದ ಕಾರ್ಯಾಗಾರವನ್ನು ರಾಣಿಚನ್ನಮ್ಮ ವಿವಿಯ ಜೆ.ಆರ್.ಎಫ್. ರಿಸರ್ಚ್ ಸ್ಕಾಲರ್ ದಯಾನಂದ ಹುಡೇದ ಉದ್ಘಾಟಿಸಿದರು. ಪಿಜಿ ವಿಭಾಗದ ಮುಖ್ಯಸ್ಥರಾದ ಕೆ. ಜೆ. ಮಾಳಜಿ, ಐಕ್ಯೂಎಸಿ ಸಂಯೋಜಕ ಜಿ.ಎಂ.ನಾವದಗಿ, ಆರ್.ಎಂ. ತ್ಯಾಪಿ, ಎಂ.ಎಂ.ಶಿವಂಗಿ, ಎಸ್.ಎಸ್. ಚಬ್ಬಿ, ಟಿ.ಪಿ.ದರ್ಬಾರ್ ಇದ್ದರು.
- ದಯಾನಂದ ಹುಡೇದ ಸಲಹೆ
- ಸ್ಪರ್ಧಾತ್ಮಕ ಯುಗದಲ್ಲಿ ಉನ್ನತ ಶಿಕ್ಷಣ ಮತ್ತು ಉತ್ತಮ ಉದ್ಯೋಗ ಪಡೆಯಲು ಯುಜಿಸಿ ನೆಟ್ ಪರೀಕ್ಷೆಯು ಮಹತ್ವದ ಹೆಜ್ಜೆಯಾಗಿದೆೆ
- ಯುಜಿಸಿ ನೆಟ್ ಮತ್ತು ಕೆ - ಸೆಟ್ ಸಕ್ಸಸ್ ಬ್ಲೂ-ಪ್ರಿಂಟ್ ಒಂದು ದಿನದ ಕಾರ್ಯಾಗಾರ
ಬಾಗಲಕೋಟೆ: ಸ್ಪರ್ಧಾತ್ಮಕ ಯುಗದಲ್ಲಿ ಉನ್ನತ ಶಿಕ್ಷಣ ಮತ್ತು ಉತ್ತಮ ಉದ್ಯೋಗ ಪಡೆಯಲು ಯುಜಿಸಿ ನೆಟ್ ಪರೀಕ್ಷೆಯು ಮಹತ್ವದ ಹೆಜ್ಜೆಯಾಗಿದೆೆ. ಸರಿಯಾದ ಯೋಜನೆ ಮತ್ತು ಪರಿಶ್ರಮದಿಂದ ಉತ್ತೀರ್ಣರಾಗುವುದು ಸುಲಭ ಎಂದು ರಾಣಿಚನ್ನಮ್ಮ ವಿವಿಯ ಜೆ.ಆರ್.ಎಫ್. ರಿಸರ್ಚ್ ಸ್ಕಾಲರ್ ದಯಾನಂದ ಹುಡೇದ ಹೇಳಿದರು.
ನಗರದ ಬಿವಿವಿ ಸಂಘದ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಎಂ.ಕಾಂ. ಪಿಜಿ ವಿಭಾಗ ಮತ್ತು ಕರೀಯರ್ ಗೈಡೆನ್ಸ್ ಪ್ಲೇಸಮೆಂಟ್ ಸೆಲ್ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಯುಜಿಸಿ ನೆಟ್ ಮತ್ತು ಕೆ - ಸೆಟ್ ಸಕ್ಸಸ್ ಬ್ಲೂ-ಪ್ರಿಂಟ್ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಇನ್ನೊಬ್ಬರಿಗೆ ಹೋಲಿಕೆ ಮಾಡಿಕೊಳ್ಳದೆ ಸ್ವಂತ ವಿಚಾರಧಾರೆಗಳನ್ನು ರೂಪಿಸಿಕೊಂಡರೆ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯ. ವಿದ್ಯಾರ್ಥಿಗಳು ಸ್ಪಷ್ಟ ಗುರಿ, ದೃಢ ನಿಶ್ಚಯ ಇಟ್ಟುಕೊಂಡರೆ ಪ್ರಯತ್ನಗಳಿಗೆ ದಿಕ್ಕು ಸಿಗುತ್ತದೆ. ಎಲ್ಲರ ಸಲಹೆ ಪಡೆದುಕೊಂಡು ಆಲೋಚನೆಗಳೊಂದಿಗೆ ನಮ್ಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದರು.
ಓದಿನ ಜತೆಗೆ ಮರುಪಠಣ ಮಾಡುವುದರಿಂದ ದೃಢವಾಗಿ ನೆನಪಿಟ್ಟುಕೊಳ್ಳು ಸಹಾಯಕವಾಗುತ್ತದೆ. ಸಮಯ ನಿರ್ವಹಣೆ ಬಹಳ ಮುಖ್ಯ ಪ್ರತಿದಿನವೂ ಒಂದು ನಿಶ್ಚಿತ ಸಮಯವನ್ನು ಓದಿಗೆ ಮೀಸಲಿಡಬೇಕು. ಆತ್ಮವಿಶ್ವಾಸ ಅಗತ್ಯವಾಗಿದ್ದು ಎಷ್ಟೇ ಅಡಚಣೆ ಬಂದರೂ ಹಿಂಜರಿಯದೆ ಗುರಿಯತ್ತ ಹೆಜ್ಜೆ ಹಾಕಿ ಎಂದು ತಿಳಿಸಿದರು.
ಪ್ರಾಚಾರ್ಯ ಡಾ. ಜಗನ್ನಾಥ ಚವಾಣ್ ಮಾತನಾಡಿ, ವ್ಯಕ್ತಿಯ ರೂಪಕ್ಕಿಂತ ಅವರ ವ್ಯಕ್ತಿತ್ವ ದೊಡ್ಡದು. ವಿದ್ಯಾ ದೇವತೆಯು ಎಲ್ಲರಲ್ಲೂ ನೆಲಸಿದ್ದು ಅದನ್ನು ಅರ್ಥೈಸಿಕೊಂಡು ಅಧ್ಯಯನದಲ್ಲಿ ತೊಡಗಬೇಕು. ವಿದ್ಯಾರ್ಥಿ ಜೀವನ ಕಲಿಕೆಯ ಪ್ರಮುಖ ಘಟ್ಟವಾಗಿದ್ದು ಹಿಂಜರಿಯದೇ ಕೇಳಿ ತಿಳಿದುಕೊಳ್ಳಬೇಕು ಎಂದರು.
ಪಿಜಿ ವಿಭಾಗದ ಮುಖ್ಯಸ್ಥ ಕೆ. ಜೆ. ಮಾಳಜಿ, ಐಕ್ಯೂಎಸಿ ಸಂಯೋಜಕ ಜಿ.ಎಂ.ನಾವದಗಿ, ಆರ್.ಎಂ. ತ್ಯಾಪಿ, ಎಂ.ಎಂ.ಶಿವಂಗಿ, ಎಸ್.ಎಸ್. ಚಬ್ಬಿ, ಟಿ.ಪಿ.ದರ್ಬಾರ್ ಇದ್ದರು.