ಬಾಗಲಕೋಟೆಯಲ್ಲಿ ಬುಧವಾರ ಸಂಖ್ಯಾ ಶಾಸ್ತçಜ್ಞ ಪಿ.ಸಿ.ಮಹಾಲನೋಬಿಸ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಜಿಪಂ ಮುಖ್ಯ ಯೋಜನಾಽಕಾರಿ ಅಲ್ಲಮಪ್ರಭು ಅಲ್ಲಾಪುರ ಉದ್ಘಾಟಿಸಿದರು. ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ, ಪ್ರೊ. ಮಲ್ಲೇಶ ಸಿದ್ದಲಿಂಗಪ್ಪನವರ ಮತ್ತಿತರರು ಇದ್ದರು.
ಬಾಗಲಕೋಟೆ: ನಿಖರವಾದ ಅಂಕಿ-ಅAಶಗಳು ದೇಶದ ಅಭಿವೃದ್ಧಿ ಯೋಜನೆಗಳ ರೂಪಿಸುವಿಕೆ ಹಾಗೂ ಪರಿಣಾಮಕಾರಿ ಅನುಷ್ಠಾನಕ್ಕೆ ಭದ್ರ ಬುನಾದಿಯಾಗಿವೆ ಎಂದು ಜಿ.ಪಂ ಮುಖ್ಯ ಯೋಜನಾಽಕಾರಿ ಅಲ್ಲಮಪ್ರಭು ಅಲ್ಲಾಪೂರ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಆರೋಗ್ಯ ಇಲಾಖೆಯ ಸಭಾಭವನದಲ್ಲಿ ಬುಧವಾರ ಜಿಲ್ಲಾ ಸಂಖ್ಯಾಸAಗ್ರಹಣಾಽಕಾರಿಗಳ ಕಾರ್ಯಾಲಯದ ವತಿಯಿಂದ ಸಂಖ್ಯಾ ಶಾಸ್ತçಜ್ಞ ಪಿ.ಸಿ.ಮಹಾಲನೋಬಿಸ್ ಅವರ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಸಾಂಖ್ಯಿಕ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೃಷಿ, ಆರೋಗ್ಯ, ಶಿಕ್ಷಣ, ಕೈಗಾರಿಕೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ವೈಜ್ಞಾನಿಕ ದತ್ತಾಂಶ ಮತ್ತು ವಿಶ್ವಾಸಾರ್ಹ ಸಾಂಖ್ಯಿಕ ಮಾಹಿತಿಯ ಆಧಾರದ ಮೇಲೆ ಯೋಜನೆಗಳನ್ನು ರೂಪಿಸಿದಾಗ ಮಾತ್ರ ಅಭಿವೃದ್ಧಿಯ ಗುರಿಗಳನ್ನು ಸಮರ್ಥವಾಗಿ ತಲುಪಲು ಸಾಧ್ಯವಾಗುತ್ತದೆ ಎಂದರು.
ಸಾAಖ್ಯಿಕ ತಜ್ಞ ಮಹಾಲನೋಬಿಸ್ ಅವರು ಪಂಚವಾರ್ಷಿಕ ಯೋಜನೆಗಳ ರೂಪಿಸುವಿಕೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದು, ದೇಶದ ಆರ್ಥಿಕ ಬೆಳವಣಿಗೆಯನ್ನು ವೈಜ್ಞಾನಿಕ ಅಂಕಿ ಅಂಶಗಳು ಮತ್ತು ದತ್ತಾಂಶಗಳ ಆಧಾರದ ಮೇಲೆ ಯೋಜಿಸುವ ಪರಿಕಲ್ಪನೆಯನ್ನು ಬಲಡಪಡಿಸಿದ್ದಾರೆ. ಯೋಜನಾ ರೂಪಿಸುವಿಕೆ, ಸಂಪನ್ಮೂಲ ಹಂಚಿಕೆ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ
ಮೌಲ್ಯಮಾಪನದಲ್ಲಿ ಸಂಖ್ಯಾಶಾಸ್ತçದ ಮಹತ್ವವನ್ನು ಸ್ಥಾಪಿಸಿದವರು ಮಹಾಲನೋಬಿಸ್ ಎಂದು ತಿಳಿಸಿದರು.
ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ಮಾತನಾಡಿ, ರೈತರ ಅಭಿವೃದ್ಧಿಗೆ ಸಂಬAಽಸಿದ ಯೋಜನೆಗಳನ್ನು ರೂಪಿಸುವುದರಿಂದ ಹಿಡಿದು ಬೆಳೆಗಳ ಉತ್ಪಾದನೆ, ಮಾರುಕಟ್ಟೆ ವ್ಯವಸ್ಥೆ ಹಾಗೂ ಸಂಪನ್ಮೂಲಗಳ ಸಮಪರ್ಕಕ ನಿರ್ವಹಣೆಯಲ್ಲಿಯೂ ಸಾಂಖ್ಯಿಕ ಮಾಹಿತಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪಿ.ಸಿ.ಮಹಾಲನೋಬಿಸ್ ಅವರು ಭಾರತೀಯ ಸಂಖ್ಯಾಶಾಸ್ತçದ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದ್ದು, ಅವರ ಸಂಶೋಧನೆಗಳು ಹಾಘೂ ಸಂಖ್ಯಾಶಾಸ್ತಿçÃಯ ವಿಧಾನಗಳು ಇಂದಿಗೂ ದೇಶದ ಯೋಜನಾ ವ್ಯವಸ್ಥೆಗೆ ಮಾರ್ಗದರ್ಶಿಯಾಗಿವೆ ಎಂದರು.
ಬಾದಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೊ.ಮಲ್ಲೇಶ ಸಿದ್ದಲಿಂಗಪ್ಪನವರ ಉಪನ್ಯಾಸ ನೀಡಿ, ಮಾನವ ಅಭಿವೃದ್ಧಿಯಲ್ಲಿಯೂ ಕೂಡಾ ಸಂಖ್ಯಾಶಾಸ್ತç ಮಹತ್ವದ ಪಾತ್ರ, ಸವಾಲುಗಳು, ಹಂಚಿಕೆ ಕುರಿತು ವಿವರಿಸಿದರು.
ಜಿಲ್ಲಾ ಸಂಖ್ಯಾ ಸಂಗ್ರಹಾಣಾಽಕಾರಿ ಗೌರಮ್ಮ ಸುಂಕದ ಪ್ರಾಸ್ತಾವಿಕವಾಗಿ ಮಾತನಾಡಿದರು. ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ ಚಿಕ್ಕೂರ, ಜಿ.ಪಂ ಯೋಜನಾ ಅಂದಾಜು ಮತ್ತು ಮೌಲ್ಯಮಾಪನ ಅಽಕಾರಿ ಮುಬಶೀರ ಅಲಿ ಇತರರು ಉಪಸ್ಥಿತರಿದ್ದರು.