ಬಾಗಲಕೋಟೆ ಪಿಎಂಎನ್ ದಂತ ವೈದ್ಯಕೀಯ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ರ‌್ಯಾಗಿಂಗ್ ವಿರೋಧಿ ಅಭಿಯಾನದ ವಿಚಾರ ಸಂಕಿರಣದಲ್ಲಿ ಭಾರತೀಯ ದಂತ ವೈದ್ಯಕೀಯ ಮಂಡಳಿ ಸದಸ್ಯ ಡಾ. ಶಿವಶರಣ ಶೆಟ್ಟಿ ಮಾತನಾಡಿದರು. ಸಿಪಿಐ ಅಶೋಕ ಚವಾಣ್, ಡಾ. ಕಾಶೀನಾಥ ಆರಬ್ಬಿ, ಡಾ.ಸಿದ್ಧರಾಮ ಪಾಟೀಲ ಮತ್ತಿತರರಿದ್ದರು. 
ಬಾಗಲಕೋಟೆ

ಕ್ರಿಯಾತ್ಮಕ ವಿಚಾರಗಳಲ್ಲಿ ಸಮಯ ವಿನಿಯೋಗಿಸಿ

ದತ್ತಾತ್ರೇಯ ಪಿ ಕುಲಕರ್ಣಿ

ಪ್ರಮುಖ ಮುಖ್ಯಾಂಶಗಳು

  • ಡಾ. ಶಿವಶರಣ ಶೆಟ್ಟಿ ಸಲಹೆ
  • ರ‌್ಯಾಗಿಂಗ್ ವಿರೋಧಿ ಅಭಿಯಾನದ ವಿಚಾರ ಸಂಕಿರಣ
  • ವಿದ್ಯಾರ್ಥಿ ಜೀವನದಲ್ಲಿ ತಾನು ಏನು ಮಾಡಬೇಕು ಎಂದು ನಿರ್ಧರಿಸುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ.
ಬಾಗಲಕೋಟೆ: ವಿದ್ಯಾರ್ಥಿಗಳು ಅಧ್ಯಯನ ಮತ್ತು ಕ್ರಿಯಾತ್ಮಕ ವಿಚಾರಗಳಲ್ಲಿ ಸಮಯ ವಿನಿಯೋಗಿಸುವುದು ಅಗತ್ಯವಾಗಿದೆ. ಕ್ರಿಯಾತ್ಮಕ ವಿಚಾರಗಳಿಂದ ರ‌್ಯಾಂಗಿಗ್ ಪಿಡುಗನ್ನು ನಿರ್ಮೂಲನೆ ಮಾಡಲು ಸಾಧ್ಯವಿದೆ ಎಂದು ಭಾರತೀಯ ದಂತ ವೈದ್ಯಕೀಯ ಮಂಡಳಿ ಸದಸ್ಯ ಡಾ.ಶಿವಶರಣ ಶೆಟ್ಟಿ ಹೇಳಿದರು.
ನಗರದ ಪಿ.ಎಂ.ಎನ್. ದಂತ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ರ‌್ಯಾಗಿಂಗ್ ವಿರೋಧಿ ಅಭಿಯಾನದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ತಾನು ಏನು ಮಾಡಬೇಕು ಎಂದು ನಿರ್ಧರಿಸುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ. ಈ ದಿಸೆಯಲ್ಲಿ ನಿಮ್ಮ ವಿಚಾರಗಳು ಕ್ರಿಯಾತ್ಮಕವಾಗಿದ್ದು ಹೊಸತನದಿಂದ ಕೂಡಿರಲಿ. ಹೊಸ ತಂತ್ರಜ್ಞಾನ ದಂತ ವೈದ್ಯಕೀಯ ಕ್ಷೇತ್ರಕ್ಕೆ ಕಾಲಿಟ್ಟಿದೆ. ತಂತ್ರಜ್ಞಾನವನ್ನು ಬಳಸಿಕೊಂಡು ಈ ಕ್ಷೇತ್ರದಲ್ಲಿ ಪ್ರಗತಿ ಮತ್ತು ಬದಲಾವಣೆ ಮಾಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಪ್ರಾಚಾರ್ಯ ಡಾ. ರವಿರಾಜ ದೇಸಾಯಿ ಮಾತನಾಡಿದರು.
ವಿದ್ಯಾರ್ಥಿಗಳ ಶೈಕ್ಷಣಿಕ ಯಶಸ್ಸಿಗೆ ಕಾಲೇಜುಗಳಲ್ಲಿ ರ‌್ಯಾಗಿಂಗ್ ಮುಕ್ತ ವಾತಾವರಣದ ಅವಶ್ಯಕತೆ ಇದೆ ಎಂದರು.
ಡಾ. ಸಿದ್ಧರಾಮ ಪಾಟೀಲ, ಡಾ. ನಿವೇದಿತಾ, ಡಾ. ವಿಜಯಲಕ್ಷ್ಮೀ, ಕಾಲೇಜಿನ ಆ್ಯಂಟಿ ರ‌್ಯಾಗಿಂಗ್ ಸಮಿತಿಯ ನೋಡಲ್ ಅಧಿಕಾರಿ ಡಾ. ಕಾಶಿನಾಥ ಅರಬ್ಬಿ ಮತ್ತು ನವನಗರ ಸಿಪಿಐ ಅಶೋಕ ಚವಾಣ್ ಉಪಸ್ಥಿತರಿದ್ದರು.