ರಬಕವಿ/ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದಲ್ಲಿ ಚಿಲ್ಡ್ರನ್ ಆ್ ಇಂಡಿಯಾ ೌಂಡೇಶನ್ ಹಾಗೂ ಗ್ರಾಪಂನವರ ಸಂಯುಕ್ತ ಆಶ್ರಯದಲ್ಲಿ ಕಿಶೋರಿಯರಿಗಾಗಿ ಹಮ್ಮಿಕೊಂಡಿದ್ದ ಫ್ಯಾಷನ್ ಡಿಸೈನಿಂಗ್ ಹಾಗೂ ವೃತ್ತಿಪರ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಕಿಶೋರಿಯರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಗ್ರಾಪಂ ಮಾಜಿ ಅಧ್ಯಕ್ಷೆ ರೇಖಾ ಕಾಂತಿ, ದಾನಪ್ಪ ಆಸಂಗಿ ಇತರರಿದ್ದರು. 
ಬಾಗಲಕೋಟೆ

ಕಿಶೋರಿಯರಿಗೆ ಕೌಶಲ ಅತ್ಯಗತ್ಯ

ಪ್ರಮುಖ ಮುಖ್ಯಾಂಶಗಳು

  • ರೇಖಾ ಕಾಂತಿ ಅಭಿಮತ
  • ವೃತ್ತಿಪರ ತರಬೇತಿಯ ಸಮಾರೋಪ ಸಮಾರಂಭ
  • ಹಿಂದುಳಿದ ವರ್ಗದ ಮಕ್ಕಳಿಗೆ ಶಿಕ್ಷಣ ಮತ್ತು ವೃತ್ತಿಪರ ತರಬೇತಿ ಅತ್ಯಂತ ಅಗತ್ಯ
ರಬಕವಿ/ಬನಹಟ್ಟಿ: ಹಿಂದುಳಿದ ವರ್ಗದ ಮಕ್ಕಳಿಗೆ ಶಿಕ್ಷಣ ಮತ್ತು ವೃತ್ತಿಪರ ತರಬೇತಿ ಅತ್ಯಂತ ಅಗತ್ಯ. ಕೌಶಲದ ಮೂಲಕ ಕಿಶೋರಿಯರ ಬದುಕಿಗೆ ಹೊಸ ಬದಲಾವಣೆ ಸಿಗುತ್ತದೆ ಎಂದು ನಾವಲಗಿ ಗ್ರಾಪಂ ಮಾಜಿ ಅಧ್ಯಕ್ಷೆ ರೇಖಾ ಕಾಂತಿ ಹೇಳಿದರು.
ತಾಲೂಕಿನ ನಾವಲಗಿ ಗ್ರಾಮದಲ್ಲಿ ಚಿಲ್ಡ್ರನ್ ಆ್ ಇಂಡಿಯಾ ೌಂಡೇಶನ್ ಹಾಗೂ ಗ್ರಾಪಂನವರ ಸಂಯುಕ್ತ ಆಶ್ರಯದಲ್ಲಿ ಕಿಶೋರಿಯರಿಗಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಫ್ಯಾಷನ್ ಡಿಸೈನಿಂಗ್ ಹಾಗೂ ವೃತ್ತಿಪರ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಿಶೋರಿಯರಿಗೆ ಅವಕಾಶಗಳ ಕೊರತೆಯಿಂದ ಅವರಲ್ಲಿರುವ ಪ್ರತಿಭೆ ಗುರುತಿಸಲಾಗುತ್ತಿಲ್ಲ. ಇಂತಹ ಸಮಾಜಮುಖಿ ಕಾರ್ಯಕ್ರಮಗಳಿಂದ ಅವರ ಬದುಕಿನಲ್ಲಿ ಹೊಸ ಭರವಸೆ ಮೂಡುತ್ತದೆ ಎಂದರು.
ಗ್ರಾಪಂ ಸದಸ್ಯ ದಾನಪ್ಪ ಆಸಂಗಿ ಮಾತನಾಡಿ, ಮಹಿಳೆಯರು ಆರ್ಥಿಕವಾಗಿ ಸದೃಢವಾದಾಗ ಮಾತ್ರ ಕುಟುಂಬದ ಆರ್ಥಿಕ ಸ್ಥಿತಿಗತಿ ಸುಧಾರಿಸುತ್ತದೆ. ಜತೆಗೆ ಸಮಾಜದ ಅಭಿವೃದ್ಧಿ ಆಗುತ್ತದೆ. ಗ್ರಾಮೀಣ ಭಾಗದ ಹೆಣ್ಣುಮಕ್ಕಳು ತಮ್ಮಲ್ಲಿರುವ ಪ್ರತಿಭೆ ಗುರುತಿಸಿ, ಸ್ವಂತ ಉದ್ಯೋಗ ಆರಂಭಿಸುವ ನಿಟ್ಟಿನಲ್ಲಿ ಬೆಳೆಯಬೇಕು. ಕಿಶೋರಿಯರಿಗೆ ಇಂತಹ ತರಬೇತಿಗಳಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ತರಬೇತಿ ಪಡೆದ ಪ್ರತಿಯೊಬ್ಬ ಮಹಿಳೆಯರು ಸ್ವಾವಲಂಬನೆ ಬದುಕು ಕಟ್ಟಿಕೊಂಡು ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳಬೇಕೆಂದರು.
ಜಿಲ್ಲಾ ಸಂಯೋಜಕ ಸಾಗರ ತೆಳಗಡೆ ತರಬೇತಿಯಲ್ಲಿ ಭಾಗವಹಿಸಿದ ಮಹಿಳೆಯರಿಗೆ ಪ್ರಮಾಣ ಪತ್ರ ನೀಡಿದರು.
ಹಿರಿಯ ಮುತ್ತಪ್ಪ ಅಂಗಡಿ, ಜೇನಿರ್ ರಿಸೋರ್ಸರ್ ಅಚಲಾ, ರೇಖಾ ಗಾಡಿ, ಸರಸ್ವತಿ ಪಿ. ಕಲ್ಪನಾ.ಕೆ ಸೇರಿ ಅನೇಕರಿದ್ದರು.