ಮಹಾಲಿಂಗಪುರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಧರೆಪ್ಪ ಸಾಂಗಲಿಕರ ಮಾತನಾಡಿದರು. ಮಹಾದೇವ ಮೇಟಿ, ಶ್ರೀಶೈಲಪ್ಪ ಉಳ್ಳಾಗಡ್ಡಿ ಇದ್ದರು. 
ಬಾಗಲಕೋಟೆ

10ರಂದು ಬೆಳಗಾವಿಯಲ್ಲಿ ಮೌನ ಮೆರವಣಿಗೆ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಕ್ಷ ಧರೆಪ್ಪ ಸಾಂಗಲೀಕರ ಹೇಳಿಕೆ
  • ಬಸವಜಯ ಮೃತ್ಯುಂಜಯ ಶ್ರೀಗಳ ನೇತೃತ್ವ
  • ಲಾಠಿ ಚಾರ್ಜ್‌ಗೆ ಖಂಡನೆ
ಮಹಾಲಿಂಗಪುರ: ಕಳೆದ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಜಗದ್ಗುರು ಬಸವಜಯ ಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ 2ಎ ಮೀಸಲಾತಿಗಾಗಿ ನಡೆದ ಹೋರಾಟ ವೇಳೆ ರಾಜ್ಯ ಸರ್ಕಾರ ಅನಾವಶ್ಯಕವಾಗಿ ಲಾಠಿ ಚಾರ್ಜ್‌ಮಾಡಿದ್ದು ಖಂಡನೀಯ ಎಂದು ಪಂಚಮಸಾಲಿ ಸಮಾಜ ಜಿಲ್ಲಾಧ್ಯಕ್ಷ ಧರೆಪ್ಪ ಸಾಂಗಲಿಕರ ಹೇಳಿದರು.
ಪಟ್ಟಣದ ಕೆಎಂಎ್ ಕಚೇರಿಯಲ್ಲಿ ಭಾನುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಸಮಾಜದ ಬೇಡಿಕೆ ಮತ್ತು ಹೋರಾಟಕ್ಕೆ ಸಮಂಜಸವಾಗಿ ಸ್ಪಂದಿಸದೆ ಲಾಠಿ ಚಾರ್ಜ್ ಮಾಡಿದ್ದು, ಪಂಚಮಸಾಲಿ ಸಮಾಜದ ಹೋರಾಟದಲ್ಲಿ ಕಪ್ಪುಚುಕ್ಕೆಯಾಗಿ ಉಳಿದಿದೆ ಎಂದರು.
ಲಾಠಿ ಚಾರ್ಜ್ ಖಂಡಿಸಿ ಸಮಾಜದ ಎಲ್ಲ ಜನರು ಸದಾ ಜಾಗೃತವಾಗಿಟ್ಟುಕೊಂಡು ಸಮಯ ಬಂದಾಗ ಸರಿಯಾಗಿ ಪ್ರತ್ಯುತ್ಯುತ್ತರ ನೀಡಬೇಕೆಂಬ ಉದ್ದೇಶದಿಂದ ಡಿ. 10 ರಂದು ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಬೆಳಗಾವಿಯ ಮಹಾತ್ಮಾ ಗಾಂಧಿ ಭವನದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಮೌನ ಮೆರವಣಿಗೆ ಮಾಡಲಾಗುವುದು ಎಂದರು.
ಜಗದ್ಗುರು ಬಸವಜಯ ಮೃತ್ಯುಂಜಯ ಶ್ರೀಗಳು ಮೆರವಣಿಗೆ ನೇತೃತ್ವ ವಹಿಸಲಿದ್ದು, ಸಮಾಜದ ಅನೇಕ ಮುಖಂಡರು ಭಾಗವಹಿಸುವರು. ಸರ್ಕಾರದ ದಬ್ಬಾಳಿಕೆ ಸಮಾಜದ ಜನತೆಯ ಮನದಲ್ಲಿ ನೆನಪಿಸಲು ಈ ಪ್ರತಿಭಟನೆ ಮಾಡಲಾಗುವುದು. ವಿವಿಧ ಜಿಲ್ಲೆಗಳ ಜನರು ಭಾಗವಹಿಸಬೇಕು ಎಂದು ಆಗ್ರಹಿಸಿದರು.
ಸಮಾಜದ ಮುಖಂಡರಾದ ಮಹಾದೇವ ಮೇಟಿ, ಶ್ರೀಲಪ್ಪ ಉಳ್ಳಾಗಡ್ಡಿ, ಚನ್ನಪ್ಪ ಪಟ್ಟಣಶೆಟ್ಟಿ, ಹಣಮಂತ ಶಿರೋಳ, ಶ್ರೀಶೈಲ ಬಿರಾದಾರ, ನಾಗಪ್ಪ ಖೇತಗೌಡ, ಮಲ್ಲಪ್ಪ ಕೌಜಲಗಿ, ಬಸವರಾಜ ಕೊಪ್ಪದ ಇದ್ದರು.