ಜಮಖಂಡಿ ನಗರದ ಟಿಪ್ಪು ಸುಲ್ತಾನ್ ಸರ್ಕಲ್‌ನಲ್ಲಿ ಸಿಗ್ನಲ್ ಲೈಟ್ ಕಂಬ ಅಳವಡಿಸಿರುವುದು. 
ಬಾಗಲಕೋಟೆ

ಜಮಖಂಡಿಯಲ್ಲಿ ಸುಗಮ ಸಂಚಾರಕ್ಕೆ ಸಿಗ್ನಲ್ ವ್ಯವಸ್ಥೆ...!

ಶಿಲ್ಪಾ ಪವಾರ

ಪ್ರಮುಖ ಮುಖ್ಯಾಂಶಗಳು

  • ನಗರದ ದೇಸಾಯಿ ವೃತ್ತ, ಟಿಪ್ಪು ಸುಲ್ತಾನ್ ಸರ್ಕಲ್‌ನಲ್ಲಿ ಅಳವಡಿಕೆ
  • ಜನತೆಯಲ್ಲಿ ಹರ್ಷ

ಎಂ.ಎನ್. ನದಾಫ್ ಜಮಖಂಡಿ

ನಗರದಲ್ಲಿ ಹೆಚ್ಚುತ್ತಿರುವ ವಾಹನ ಸಂಚಾರ ದಟ್ಟಣೆಯಿಂದ ಉಂಟಾಗುತ್ತಿದ್ದ ಸಂಚಾರಿ ಸಿಕ್ಕಿಗೆ ಕಡಿವಾಣ ಹಾಕಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ನಗರಸಭೆ ವತಿಯಿಂದ ಪ್ರಮುಖ ವೃತ್ತಗಳಲ್ಲಿ ಸಿಗ್ನಲ್ ವ್ಯವಸ್ಥೆ ಅಳವಡಿಸುವ ಕಾರ್ಯ ಭರದಿಂದ ಸಾಗಿದೆ.
ನಗರದ ಪ್ರಮುಖ ಹಾಗೂ ಜನನಿಬಿಡ ಪ್ರದೇಶಗಳಾದ ದೇಸಾಯಿ ಸರ್ಕಲ್ ಮತ್ತು ಟಿಪ್ಪು ಸುಲ್ತಾನ್ ಸರ್ಕಲ್‌ನಲ್ಲಿ ಟ್ರಾಫಿಕ್ ಸಿಗ್ನಲ್ ಲೈಟ್ ಕಂಬಗಳನ್ನು ಅಳವಡಿಸಲಾಗುತ್ತಿದೆ.
ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಿತ್ಯ ಬೆಳಗ್ಗೆ ಮತ್ತು ಸಂಜೆ ವೇಳೆ ಉಂಟಾಗುತ್ತಿದ್ದ ಸಂಚಾರ ದಟ್ಟಣೆಯಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಇದೀಗ ಸಿಗ್ನಲ್ ವ್ಯವಸ್ಥೆ ಜಾರಿಯಾಗುತ್ತಿರುವುದು ನಾಗರಿಕರಲ್ಲಿ ನಿಟ್ಟುಸಿರು ಮೂಡಿಸಿದೆ.
ದೇಸಾಯಿ ಸರ್ಕಲ್‌ನಲ್ಲಿ ಐದು ರಸ್ತೆಗಳ ಸಂಚಾರ ನಿಯಂತ್ರಣಕ್ಕೆ ಹಾಗೂ ಟಿಪ್ಪು ಸುಲ್ತಾನ್ ಸರ್ಕಲ್‌ನಲ್ಲಿ ನಾಲ್ಕು ರಸ್ತೆಗಳ ಸಂಚಾರ ನಿಯಂತ್ರಣಕ್ಕೆ ಸಿಗ್ನಲ್ ಲೈಟ್ ಕಂಬಗಳನ್ನು ಅಳವಡಿಸಲಾಗುತ್ತಿದೆ. ಸಿಗ್ನಲ್ ಅಳವಡಿಕೆ ಕಾರ್ಯ ಪೂರ್ಣಗೊಂಡು ವ್ಯವಸ್ಥೆ ಕಾರ್ಯಾರಂಭಿಸಿದರೆ ವಾಹನ ಸವಾರರಿಗೆ ಹೆಚ್ಚಿನ ಅನುಕೂಲವಾಗುವುದರ ಜತೆಗೆ ಸಾರ್ವಜನಿಕರ ಸಂಚಾರವೂ ಸುಗಮವಾಗಲಿದೆ ಎಂಬ ಆಶಾಭಾವನೆ ನಾಗರಿಕರಲ್ಲಿ ಮೂಡಿದೆ.
"

ಜಮಖಂಡಿ ನಗರದಲ್ಲಿ ಇತ್ತೀಚೆಗೆ ವಾಹನ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಸಂಚಾರ ವ್ಯವಸ್ಥೆ ಸುಗಮಗೊಳಿಸುವ ಉದ್ದೇಶದಿಂದ ಪ್ರಮುಖ ವೃತ್ತಗಳಲ್ಲಿ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ ಅಳವಡಿಸಲಾಗುತ್ತಿದೆ.

— | ಜ್ಯೋತಿ ಗಿರೀಶ ನಗರಸಭೆ ಆಯುಕ್ತ ಜಮಖಂಡಿ

"

ನಗರದಲ್ಲಿ ಪ್ರತಿದಿನ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ಪ್ರಮುಖ ವೃತ್ತಗಳಲ್ಲಿ ಸಂಚಾರಿ ಸಿಕ್ಕು ಸಮಸ್ಯೆ ಎದುರಾಗುತ್ತಿತ್ತು. ಸಿಗ್ನಲ್ ವ್ಯವಸ್ಥೆ ಜಾರಿಯಾದರೆ ವಾಹನ ದಟ್ಟಣೆ ಕಡಿಮೆಯಾಗಿ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಅದರಂತೆ ಬಸವೇಶ್ವರ ಸರ್ಕಲ್‌ನಲ್ಲಿಯೂ ಸಿಗ್ನಲ್ ಕಂಬ ಅಳವಡಿಸಬೇಕು.

— | ಶ್ರೀಧರ ಕಂಬಿ, ಜಮಖಂಡಿ ನಗರ ನಿವಾಸಿ