ಬೀಳಗಿ ತಾಲೂಕಿನ ಬಾಡಗಂಡಿ ಎಸ್.ಆರ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ಅಂಬುಲೆನ್ಸ್ ಸೇವೆಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಸ್.ಆರ್.ಪಾಟೀಲ ಚಾಲನೆ ನೀಡಿದರು. ಸಂಸ್ಥೆ ಕಾರ್ಯದರ್ಶಿ ಎಂ.ಎನ್.ಪಾಟೀಲ, ವೈದ್ಯಕೀಯ ಅಧಿಕ್ಷಕ ಡಾ.ವಿಜಯಾನಂದ ಹಳ್ಳಿ, ಆಡಳಿತಾಧಿಕಾರಿ ಡಾ.ರಾಘವೇಂದ್ರ ಪಾಟೀಲ, ಮೆಡಿಕಲ್ ಕಾಲೇಜ್ ಪ್ರಾಂಶುಪಾಲ ಡಾ.ಮಹಮ್ಮದ ಆಸ್ಲಂ ಇತರರಿದ್ದರು. 
ಬಾಗಲಕೋಟೆ

ಅವಳಿ ಜಿಲ್ಲೆ ಜನರ ಸೇವೆ ನಮ್ಮ ಆದ್ಯತೆ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಚಿವ ಎಸ್.ಆರ್.ಪಾಟೀಲ ಹೇಳಿಕೆ
  • ಹೈಟೆಕ್ ವೆಚ್ಚದ ನೂತನ ಅಂಬುಲೆನ್ಸ್ ಸೇವೆಗೆ ಚಾಲನೆ
  • ಅವಳಿ ಜಿಲ್ಲೆಯ ಜನಸಾನಾನ್ಯರು ಆರೋಗ್ಯವಾಗಿ ಇರಬೇಕು
ಬೀಳಗಿ: ಅವಳಿ ಜಿಲ್ಲೆಯ ಜನಸಾನಾನ್ಯರು ಆರೋಗ್ಯವಾಗಿ ಇರಬೇಕು. ಇತರೆ ಕಾಯಿಲೆಗಳ ಪರೀಕ್ಷೆಗೆ ದುಂದು ವೆಚ್ಚದಿಂದ ಅವರಿಗೆ ಆರ್ಥಿಕವಾಗಿ ಹೊರೆಯಾಗಬಾರದೆಂಬ ದಿಸೆಯಿಂದ ಉಚಿತ ಸೇವೆಯಿಂದ ವೈದ್ಯಕೀಯ ದಿನಾಚಾರಣೆ ಪ್ರಯುಕ್ತ ನಮ್ಮ ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಅಲ್ಟ್ರಾಸೌಂಡ್ ಪರೀಕ್ಷೆಗಳು ಹಾಗೂ ಎಕ್ಸ್-ರೇ ಸೇವೆ ಉಚಿತವಾಗಿ ನೀಡಲಾಗುತ್ತಿದೆ. ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಎಸ್.ಆರ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಸ್.ಆರ್.ಪಾಟೀಲ ಹೇಳಿದರು.
ತಾಲೂಕಿನ ಬಾಡಗಂಡಿ ಎಸ್.ಆರ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ಬುಧವಾರ 35 ಲಕ್ಷ ರೂ.ಗಳ ವೆಚ್ಚದ ಎಲ್ಲ ಸೌಲಭ್ಯವುಳ್ಳ ಹೈಟೆಕ್ ವೆಚ್ಚದ ನೂತನ ಅಂಬುಲೆನ್ಸ್ ಸೇವೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ಆಸ್ಪತ್ರೆಯಲ್ಲಿ ಲಕ್ಷಾಂತರ ಒಳ ಮತ್ತು ಹೋರ ರೋಗಿಗಳಿಗೆ ಸೇವೆ ಮಾಡುವ ಭಾಗ್ಯ ಸಿಕ್ಕಿಂದರಿಂದ ನನಗೆ ತೃಪ್ತಿ ತಂದಿದೆ. ಈ ಅಂಬುಲೆನ್ಸ್ ಒಂದು ಮಿನಿ ಐಸಿಯು ಮಾದರಿಯ ಸೌಲಭ್ಯ ಹೊಂದಿದ್ದು, ವೆಂಟಿಲೇಟರ್, ಡಿಫಿಬ್ರಿಲೇಟರ್, ಮಲ್ಟಿಪ್ಯಾರಾ ಮಾನಿಟರ್, ಸಿರಿಂಜ್ ಪಂಪ್, 12-ಚಾನೆಲ್ ಆಮ್ಲಜನಕ ವ್ಯವಸ್ಥೆ, ವೀಲ್ ಚೇರ್, ಎಸಿ ಸೇರಿ ಆತ್ಯಾಧುನಿಕ ಜೀವ ರಕ್ಷಕ ವೈದ್ಯಕೀಯ ಉಪಕರಣ ಅಳವಡಿಸಲಾಗಿದೆ. ಇದರ ಮೂಲಕ ತುರ್ತು ಪರಿಸ್ಥಿತಿಯಲ್ಲಿ ರೋಗಿಗಳಿಗೆ ಆಸ್ಪತ್ರೆಗೆ ತಲುಪುವ ಮುನ್ನವೇ ಅಗತ್ಯವಾದ ಪ್ರಾಥಮಿಕ ಮತ್ತು ತುರ್ತು ಚಿಕಿತ್ಸೆ ನೀಡಲು ಸಾಧ್ಯವಾಗಲಿದ್ದು, ಸಾರ್ವಜನಿಕರಿಗೆ ಗುಣಮಟ್ಟದ ತುರ್ತು ಆರೋಗ್ಯ ಸೇವೆ ಒದಗಿಸಲು ಈ ಅಂಬುಲೆನ್ಸ್ ಮಹತ್ತರ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಸಂಸ್ಥೆ ಕಾರ್ಯದರ್ಶಿ ಎಂ.ಎನ್.ಪಾಟೀಲ, ವೈದ್ಯಕೀಯ ಅಧಿಕ್ಷಕ ಡಾ.ವಿಜಯಾನಂದ ಹಳ್ಳಿ, ಆಡಳಿತಾಧಿಕಾರಿ ಡಾ. ರಾಘವೇಂದ್ರ ಪಾಟೀಲ, ಮೆಡಿಕಲ್ ಕಾಲೇಜ್ ಪ್ರಾಂಶುಪಾಲ ಡಾ.ಮಹಮ್ಮದ ಆಸ್ಲಂ, ಅರ್ಯುವೇದಿಕ ವೈದ್ಯಕೀಯ ಪ್ರಾಂಶುಪಾಲ ಡಾ.ರಾಜೇಶ್ವರಿ ಬಿರಾದಾರ, ಆರ್ಯುವೇದಿಕ ಆಸ್ಪತ್ರೆ ವೈದ್ಯಕೀಯ ಅಧಿಕ್ಷಕ ಡಾ.ಸಿ.ಎಸ್.ಪೂಜಾರಿ, ನರಸಿಂಗ್ ಕಾಲೇಜ್ ಪ್ರಾಂಶುಪಾಲ ಪ್ರೊ.ಪ್ರಸಾದ ಪಾಟೀಲ, ನರಸಿಂಗ್ ಅಧಿಕ್ಷಕ ಉಮೇಶ ಸಿಂಗ್ರಿ, ಡಾ.ಸಂಗಮೇಶ ರಕರಡ್ಡಿ, ಡಾ.ಶಿವನಗೌಡ ಪಾಟೀಲ ಇದ್ದರು.
"

ತುರ್ತು ವೈದ್ಯಕೀಯ ಸೇವೆಯನ್ನು ಇನಷ್ಟು ಪರಿಣಾಮಕಾರಿಯಾಗಿ ಹಾಗೂ ಗುಣಮಟ್ಟದಿಂದ ಒದಗಿಸುವ ಉದ್ದೇಶದಿಂದ 35 ಲಕ್ಷ ರೂ. ವೆಚ್ಚದಲ್ಲಿ ನೂತನ ಅಂಬುಲೆನ್ಸ್ ಖರೀದಿಸಲಾಗಿದೆ. ಉಚಿತವಾಗಿ ಎಲ್ಲ ರೀತಿಯ ಪರೀಕ್ಷೆಗಳು ಹಾಗೂ ಎಕ್ಸ್-ರೇ ಸೇವೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ.
- ಎಸ್.ಆರ್.ಪಾಟೀಲಮಾಜಿ ಸಚಿವ