ಇಳಕಲ್ಲದ ಹೊರ ವಲಯದ ಖಾಸಗಿ ಪೆಟ್ರೋಲ್ ಬಂಕ್ ಸಮೀಪ ಸೊಲ್ಲಾಪುರ ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ ನುಜ್ಜುಗುಜ್ಜಾಗಿರುವ ಥಾರ್ ವಾಹನ.
- ನುಜ್ಜುಗುಜ್ಜಾದ ಥಾರ್ ವಾಹನ
- ಸೊಲ್ಲಾಪುರ ಮಂಗಳೂರು ರಾಷ್ಟ್ರೀಯ ಹೆದ್ದಾರಿ
- ಟ್ರಾೃಕ್ಟರ್ ಲೋಡ್ ತುಂಬಿದ ಗೂಡ್ಸ್ ವಾಹನ
ಇಳಕಲ್ಲ : ಇಲ್ಲಿನ ಖಾಸಗಿ ಪೆಟ್ರೋಲ್ ಬಂಕ್ ಹತ್ತಿರದ ಸೊಲ್ಲಾಪುರ ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ ಬುಧವಾರ ನಡೆದಿದೆ.
ಹೆದ್ದಾರಿಯಲ್ಲಿ ಟ್ರಾೃಕ್ಟರ್ ಲೋಡ್ ತುಂಬಿದ ಗೂಡ್ಸ್ ವಾಹನದ ಚಾಲಕ ಹೆದ್ದಾರಿಯಲ್ಲಿ ಏಕಾಏಕಿ ಬ್ರೇಕ್ ಹಾಕಿದ್ದರಿಂದ ಹಿಂದೆ ಬರುತ್ತಿದ್ದ ಥಾರ್ ವಾಹನವು ಡಿಕ್ಕಿ ಹೊಡೆದಿದೆ. ಅದರ ಹಿಂದೆ ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದಿವೆ. ಘಟನೆಯಲ್ಲಿ ಮಹೇಂದ್ರ ಥಾರ್ ವಾಹನ ಮಧ್ಯ ಭಾಗದಲ್ಲಿ ಸಿಲುಕಿ ನುಜ್ಜುಗುಜ್ಜಾಗಿದೆ. ಥಾರ್ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ಶಹರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.