ಬನಹಟ್ಟಿಯ ಎಸ್‌ಟಿಸಿ ಕಾಲೇಜಿನಲ್ಲಿ ಒಂದು ರಾಷ್ಟ್ರ ಒಂದು ತೆರಿಗೆ ಕುರಿತು ಹಮ್ಮಿಕೊಂಡಿದ್ದ ಎರಡು ದಿನಗಳ ರಾಷ್ಟ್ರ ಮಟ್ಟದ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ ವಿವಿಧ ಕಾಲೇಜ್‌ಗಳ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆಮಾಡಲಾಯಿತು. ಚಿದಾನಂದ ಢವಳೇಶ್ವರ, ಎಸ್. ಬಿ. ಆಕಾಶ ಇದ್ದರು. 
ಬಾಗಲಕೋಟೆ

ಸಮದ್ಧ ಶೈಕ್ಷಣಿಕ ವಾತಾವರಣಕ್ಕೆ ವಿಚಾರ ಸಂಕಿರಣ ಪೂರಕ

ಪ್ರಮುಖ ಮುಖ್ಯಾಂಶಗಳು

  • ಹಣಕಾಸು ಅಧಿಕಾರಿ ಚಿದಾನಂದ ಢವಳೇಶ್ವರ ಅಭಿಮತ
  • ಕಲಿಕಾ ಹಂತದಲ್ಲಿಯೇ ಜಿಎಸ್‌ಟಿ ಮಾಹಿತಿ ತಿಳಿವಳಿಕೆ ಅಗತ್ಯ
  • ವಿಚಾರ ಸಂಕಿರಣಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಗುಣಾತ್ಮಕ ಬೆಳವಣಿಗೆಗೆ ದಾರಿ
ರಬಕವಿ/ಬನಹಟ್ಟಿ : ವಿಚಾರ ಸಂಕಿರಣಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಗುಣಾತ್ಮಕ ಬೆಳವಣಿಗೆಗೆ ದಾರಿಯಾಗಿದ್ದು, ಸಮದ್ಧ ಶೈಕ್ಷಣಿಕ ವಾತಾವರಣ ನಿರ್ಮಾಣಕ್ಕೆ ಪ್ರಮುಖ ಪಾತ್ರವಹಿಸುತ್ತವೆ ಎಂದು ಬಾಗಲಕೋಟ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಚಿದಾನಂದ ಢವಳೇಶ್ವರ ಹೇಳಿದರು.
ನಗರದ ಎಸ್‌ಟಿಸಿ ಕಾಲೇಜಿನಲ್ಲಿ ಒಂದು ರಾಷ್ಟ್ರ-ಒಂದು ತೆರಿಗೆ (ಜಿಎಸ್‌ಟಿ) ವಿಷಯದ ಮೇಲೆ ಹಮ್ಮಿಕೊಂಡಿದ್ದ ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಕಲಿಕಾ ಹಂತದಲ್ಲಿಯೇ ಜಿಎಸ್‌ಟಿ ಕುರಿತಾಗಿ ತಜ್ಞರಿಂದ ಮಾಹಿತಿ ನೀಡುವುದು ಅವರ ಭವಿಷ್ಯಕ್ಕೆ ಸಹಕಾರಿಯಾಗುತ್ತದೆ ಎಂದರು.
ಪ್ರಾಚಾರ್ಯ ಜಿ.ಆರ್. ಜುನ್ನಾಯ್ಕರ್ ಮಾತನಾಡಿ, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ವೇದಿಕೆಯಾಗುತ್ತವೆ. ರಾಷ್ಟ್ರಮಟ್ಟದ ಕಾರ್ಯಕ್ರಮಗಳನ್ನು ಸಣ್ಣ ಪಟ್ಟಣಗಳಲ್ಲಿ ಆಯೋಜಿಸುವುದು ವಿದ್ಯಾರ್ಥಿಗಳ ಜ್ಞಾನವದ್ಧಿಗೆ ಸಹಾಯಕ ಎಂದು ಹೇಳಿದರು.
ಬೆಳಗಾವಿ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ವಾಣಿಜ್ಯ ವಿಭಾಗದ ಹಿರಿಯ ಉಪನ್ಯಾಸಕರಾದ ಎಸ್.ಬಿ. ಆಕಾಶ, ವಿಶೇಷ ಅಕಾಧಿರಿ ಬಿ.ಎಸ್. ನಾವಿ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ ವ್ಯವಹಾರ ನಿರ್ವಹಣಾ ಶಾಸ್ತ್ರದ ಪ್ರಾಧ್ಯಾಪಕ ಎಂ. ಮುನ್ಷಿ, ಬೆಂಗಳೂರಿನ ಲೆಕ್ಕ ಪರಿಶೋಧಕರಾದ ಶಂಕರ ಕೌಜಲಗಿ, ಮಹೇಂದ್ರ ಹೊರಗಿಮನಿ, ಉಪನ್ಯಾಸಕರಾದ ಶಂಕರ ಹಳಿಂಗಳಿ, ಶಂಕರ ಸೊಪಡ್ಲ, ಚೇತನ ಡಾಗಾ, ರವಿಕುಮಾರ ಕುರನಾಲ, ತೆರಿಗೆ ಸಲಹೆಗಾರ ಶಂಕ್ರಯ್ಯ ಮಠಪತಿ, ಸೇರಿ ವಿವಿಧ ಕಾಲೇಜ್‌ಗಳ ಉಪನ್ಯಾಸಕರು ಪ್ರಬಂಧ ಮಂಡಿಸಿದರು. ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಮನೋಹರ ಶಿರಹಟ್ಟಿ, ವಿಜಯಲಕ್ಷ್ಮಿ ಮಾಚಕನೂರ, ಶ್ವೇತಾ ಮಠದ, ರಶ್ಮಿ ಮುನ್ನೊಳ್ಳಿ ಮಾತನಾಡಿದರು. ಜೆಎಸ್‌ಎಸ್ ಸಂಘದ ನಿರ್ದೇಶಕ ಪಂಡಿತ ಹನಗಂಡಿ, ಮಂಜುನಾಥ ಬೆನ್ನೂರ, ಸಂಯೋಜಕ ಪ್ರಕಾಶ ಕೆಂಗನಾಳ, ಗೀತಾ ಸಜ್ಜನ, ರೇಶ್ಮಾ ಗಜಾಕೋಶ, ಸುರೇಶ ನಡೋಣಿ, ಎಸ್.ಬಿ. ಉಕ್ಕಲಿ, ರಮೇಶ ಮಾಗುರಿ, ರಶ್ಮಿ ಕೊಕಟನೂರ, ಎನ್.ಬಿ. ಹೊಸಪೇಟಿ, ಶಿವು ಇಟ್ನಾಳ, ವಿ.ವೈ. ಪಾಟೀಲ, ಅವಿನಾಶ ಹಟ್ಟಿ ಸೇರಿ ಅನೇಕರು ಇದ್ದರು.