‘ಉತ್ತಮ ಎಸ್‌ಡಿಎಂಸಿ ’ ಪ್ರಶಸ್ತಿ ಪಡೆದಿರುವ ಕಲಾದಗಿ ಸಮೀಪದ ಛಬ್ಬಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ರಮೇಶ ಮೇಟಿ, ಉಪಾಧ್ಯಕ್ಷೆ ಸುಮಂಗಳಾ ವಾಲಿಕಾರ ಅವರನ್ನು ಸನ್ಮಾನಿಸಲಾಯಿತು. ಛಬ್ಬಿ ಪಿಕೆಪಿಎಸ್ ಅಧ್ಯಕ್ಷ ಚಂದ್ರಶೇಖರ ಸಾಳಗುಂದಿ, ಮಾಜಿ ಗ್ರಾ.ಪಂ. ಸದಸ್ಯ ಪರಶುರಾಮ ಸಾಳಗುಂದಿ, ಹಣಮಂತ ಹಾದಿಮನಿ, ಮುತ್ತಪ್ಪ ಮಾದರ ಇತರರಿದ್ದರು. 
ಬಾಗಲಕೋಟೆ

ಶಾಲೆ ಅಭಿವೃದ್ಧಿಗೆ ಎಸ್‌ಡಿಎಂಸಿ ಪಾತ್ರ ಅನನ್ಯ

ದತ್ತಾತ್ರೇಯ ಪಿ ಕುಲಕರ್ಣಿ

ಪ್ರಮುಖ ಮುಖ್ಯಾಂಶಗಳು

  • ಮುಖ್ಯ ಗುರುಮಾತೆ ಪಿ.ಬಿ. ಬಂದಿಕೇರಿ ಅಭಿಮತ
  • ಛಬ್ಬಿ ಶಾಲೆಗೆ ಪ್ರಶಸ್ತಿ
  • ಸನ್ಮಾನ
ಕಲಾದಗಿ :

ಮಕ್ಕಳ ಕಲಿಕಾ ಮಟ್ಟ, ಶಾಲಾ ಮೂಲ ಸೌಕರ್ಯ ಅಭಿವೃದ್ಧಿ, ಶಾಲೆ ಮತ್ತು ಮಕ್ಕಳ ಶೈಕ್ಷಣಿಕ ಪ್ರಗತಿ ಹಾಗೂ ದಾಖಲಾತಿ ಹೆಚ್ಚಳ ಸೇರಿ ಶಾಲೆಯ ಅಭಿವೃದ್ಧಿಯಲ್ಲಿ ಎಸ್‌ಡಿಎಂಸಿ ಸಮಿತಿಗಳ ಪಾತ್ರ ಮಹತ್ವದ್ದಾಗಿದೆ ಎಂದು ಛಬ್ಬಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಗುರುಮಾತೆ ಪಿ.ಬಿ. ಬಂದಿಕೇರಿ ಹೇಳಿದರು.

ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ನೌಕರರ ಸಂಸ್ಕೃತಿ ಹಾಗೂ ಸಾಹಿತ್ಯ ಪರಿಷತ ಬೆಂಗಳೂರು ನೀಡಿರುವ ‘ಉತ್ತಮ ಎಎಸ್‌ಡಿಎಂಸಿ’ ಪ್ರಶಸ್ತಿ ಪಡೆದಿರುವ ಬಗ್ಗೆ ಮಾತನಾಡಿದ ಅವರು, ಶಾಲೆ ಮತ್ತು ಸಮುದಾಯಗಳ ನಡುವೆ ಉತ್ತಮ ಬಾಂಧವ್ಯ ಬೆಳೆಸುವಲ್ಲಿ ಎಸ್‌ಡಿಎಂಸಿ ಸದಸ್ಯರು ನಿರಂತರವಾಗಿ ಸಹಕರಿಸುತ್ತಿದ್ದಾರೆ ಎಂದರು.
ಉಪನ್ಯಾಸಕ ಎಂ.ಬಿ. ಸಿದ್ದಗೋಣಿ ಮಾತನಾಡಿ, ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಶಿಕ್ಷಕರು, ಪೋಷಕರು, ಎಸ್‌ಡಿಎಂಸಿ ಸದಸ್ಯರು ಹಾಗೂ ಸಮುದಾಯಗಳ ಸಹಭಾಗಿತ್ವ ಅತ್ಯಂತ ಅಗತ್ಯವಾಗಿದೆ ಎಂದರು.
ನೂತನವಾಗಿ ಆಯ್ಕೆಯಾದ ಎಸ್‌ಡಿಎಂಸಿ ಅಧ್ಯಕ್ಷ ರಮೇಶ ಮೇಟಿ, ಉಪಾಧ್ಯಕ್ಷೆ ಸುಮಂಗಳಾ ವಾಲಿಕಾರ ಹಾಗೂ ಸದಸ್ಯರನ್ನು ಸನ್ಮಾನಿಸಲಾಯಿತು.
ಛಬ್ಬಿ ಪಿಕೆಪಿಎಸ್ ಅಧ್ಯಕ್ಷ ಚಂದ್ರಶೇಖರ ಸಾಳಗುಂದಿ, ಮಾಜಿ ಗ್ರಾ.ಪಂ. ಸದಸ್ಯ ಪರಶುರಾಮ ಸಾಳಗುಂದಿ, ಹಣಮಂತ ಹಾದಿಮನಿ, ಮುತ್ತಪ್ಪ ಮಾದರ, ಲಕ್ಷ್ಮಣ ವಾಲಿಕಾರ, ಭೀಮಪ್ಪ ಪೂಜಾರಿ, ಹೊಳೆಬಸಪ್ಪ ಅಂತಾಪುರ ಇದ್ದರು.