ಬಾದಾಮಿ ಕಾಳಿದಾಸ ಶಿಕ್ಷಣ ಸಂಸ್ಥೆ ಆವರಣದಲ್ಲಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ವಿಜ್ಞಾನ ವಸ್ತು ಪ್ರದರ್ಶ ವೀಕ್ಷಣೆ ಮಾಡಿದರು. ಸಹಾಯಕ ಪ್ರಾಧ್ಯಾಪಕ ವಿಠಲ ಕೊರಣ್ಣವರ, ಸಂಸ್ಥೆ ಸಮನ್ವಯಾಧಿಕಾರಿ ಡಾ. ರಾಘವನ್ ಕಾವಲನ ಇತರರಿದ್ದರು. 
ಬಾಗಲಕೋಟೆ

ವಿಜ್ಞಾನ ಪ್ರಯೋಗದಿಂದ ವೈಜ್ಞಾನಿಕ ಜ್ಞಾನ ವೃದ್ಧಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಭೀಮಸೇನ ಚಿಮ್ಮನಕಟ್ಟಿ ಅಭಿಮತ
  • ವಿಜ್ಞಾನ, ತಂತ್ರಜ್ಞಾನ
  • ಕಲಾ ಪ್ರದರ್ಶನ ವೀಕ್ಷಣೆ
ಬಾದಾಮಿ : ಇಲ್ಲಿನ ಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ಮತ್ತು ಶುಕ್ರವಾರ ಎರಡು ದಿನಗಳ ಕಾಲ ಕಾಳಿದಾಸ ಶಿಕ್ಷಣ ಸಂಘ ಕ್ಯಾಂಪಸ್‌ನಲ್ಲಿ ನಡೆದ ವಿಜ್ಞಾನ, ತಂತ್ರಜ್ಞಾನ ಮತ್ತು ಕಲಾ ಪ್ರದರ್ಶನವನ್ನು ಶಾಸಕ ಭೀಮಸೇನ ಚಿಮ್ಮನಕಟ್ಟಿ ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ವಿಜ್ಞಾನ ಪ್ರಯೋಗಗಳನ್ನು ಮಾಡುವುದರಿಂದ ವೈಜ್ಞಾನಿಕ ಮನೋಭಾವನೆ ಬೆಳೆಯುವುದರಿಂದ ಜೊತೆಗೆ ವಿಷಯ ಬಹಳ ದಿನಗಳವರೆಗೆ ನೆನಪಿನಲ್ಲಿರುತ್ತದೆ ಎಂದು ಹೇಳಿದರು.
ಕೆನಡಾ ಟೊರೊನಾಟೊ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ವಿಠಲ ಕೊರಣ್ಣವರ, ಸಂಸ್ಥೆ ಸಮನ್ವಯಾಧಿಕಾರಿ ಡಾ. ರಾಘವನ್ ಕಾವಲನ ಇತರರಿದ್ದರು.