ಇಳಕಲ್ಲದ ಎಸ್.ಆರ್. ಕಂಠಿ ವೃತ್ತದಲ್ಲಿ ಹಿಂದೂ ಸೇವಾ ಟ್ರಸ್ಟ್ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿದರು. ಕುಷ್ಟಗಿ ನಾಗಾಸಾಧು ಮಹಾಂತ ಸಹದೇವಾನಂದಗಿರಿ, ಗುಳೇದಗುಡ್ಡದ ನೀಲಕಂಠ ಮಹಾಸ್ವಾಮಿಗಳು, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಇತರರಿದ್ದರು. 
ಬಾಗಲಕೋಟೆ

ರಾಜ್ಯದಲ್ಲಿ ಮತ್ತೆ ಕೇಸರಿ ಸರ್ಕಾರ

ಪ್ರಮುಖ ಮುಖ್ಯಾಂಶಗಳು

  • ವಿ.ಪ. ಸದಸ್ಯ ಸಿ.ಟಿ. ರವಿ ವಿಶ್ವಾಸ
  • ಹಿಂದೂ ಸೇವಾ ಟ್ರಸ್ಟ್ ವತಿಯಿಂದ ಶಿವಾಜಿ ಜಯಂತ್ಯುತ್ಸವ
  • ರಾಜ್ಯದಲ್ಲಿ ಕಾಂಗ್ರೆಸ್ ಜನ ವಿರೋಧಿ ಆಡಳಿತ ನೀಡುತ್ತಿದೆ
ಇಳಕಲ್ಲ: ರಾಜ್ಯದಲ್ಲಿ ಕಾಂಗ್ರೆಸ್ ಜನ ವಿರೋಧಿ ಆಡಳಿತ ನೀಡುತ್ತಿದೆ. ಮುಂಬರುವ ಚುನಾವಣೆಯಲ್ಲಿ ಅವರಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ. ಎರಡು ವರ್ಷದಲ್ಲಿ ರಾಜ್ಯದಲ್ಲಿ ಕೇಸರಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ವಿ.ಪ. ಸದಸ್ಯ ಸಿ.ಟಿ. ರವಿ ಹೇಳಿದರು.
ಇಲ್ಲಿನ ಹಿಂದೂ ಸೇವಾ ಟ್ರಸ್ಟ್ ವತಿಯಿಂದ ಭಾನುವಾರ ಎಸ್.ಆರ್. ಕಂಠಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿವಾಜಿ ಮಹಾರಾಜರು ಕೇವಲ ರಾಜರಾಗಿರಲಿಲ್ಲ, ಬದಲಾಗಿ ತಮ್ಮ ಜನರ ಹಕ್ಕುಗಳು ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ದಾರ್ಶನಿಕರು. ಪೊಲೀಸರ ಯಾವ ಕೇಸ್‌ಗೂ ನಾವು ಹೆದರುವುದಿಲ್ಲ. ಗುಂಡಿಗೂ ಬಗ್ಗುವುದಿಲ್ಲ. ಕಾಲ ಹೀಗೆಯೇ ಇರುವುದಿಲ್ಲ. ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ದಾಖಲಿಸಿದಕ್ಕೆ ತಕ್ಕ ಉತ್ತರ ಬಿಜೆಪಿ ಸರ್ಕಾರ ಕೊಡುತ್ತದೆ ಎಂದು ಹೇಳಿದರು.
ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಹಿಂದೂ ಸೇವಾ ಟ್ರಸ್ಟ್ ಸಂಸ್ಥೆಯ ಗೋ ಶಾಲಾ ಖರೀದಿಗೆ ನನ್ನ ತಂದೆಯವರ ಹೆಸರಿನ ಮೇಲೆ 1 ಎಕರೆ ಭೂ ದಾನ ಮಾಡುತ್ತೇನೆ. ಹಿಂದೂ ಸೇವಾ ಟ್ರಸ್‌ಗೆ ಆರ್‌ಎಸ್‌ಎಸ್ ಪ್ರೇರಣಾ ಶಕ್ತಿಯಾಗಿ ನಿಂತಿದೆ. ಆರ್‌ಎಸ್‌ಎಸ್ ನಿಷೇಧ ಮಾಡಲು ಯಾರಿಂದಲು ಸಾಧ್ಯವಿಲ್ಲ. ಯುವಕರು ದುಶ್ಚಟಗಳಿಗೆ ಬಲಿಯಾಗದಿರಂತೆ ಮನವಿ ಮಾಡಿದರು.
ಕುಷ್ಟಗಿಯ ನಾಗಾಸಾಧು ಮಹಾಂತ ಸಹದೇವಾನಂದಗಿರಿ, ಗುಳೇದಗುಡ್ಡದ ನೀಲಕಂಠ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ರಾಜ್ಯಸಭಾ ಸದಸ್ಯ ನಾರಾಯಣ ಭಾಂಡಗೆ, ಯುವ ವಾಗ್ಮಿ ಅಮೋಘ ಹಿರೇಮಠ, ಹಿಂದೂ ಸೇವಾ ಟ್ರಸ್ಟ್ ಸಂಚಾಲಕ ಪರಶುರಾಮ ಬಿಸಲದಿನ್ನಿ ಇದ್ದರು.