ಬಾಗಲಕೋಟೆ ಕ್ಷೇತ್ರದ ನಾಗರಾಳ ಮತ್ತು ನಾಗಸಂಪಗಿ ಗ್ರಾಮಗಳ ರಸ್ತೆ ಡಾಂಬರೀಕರಣಕ್ಕೆ ಗುರುವಾರ ಶಾಸಕ ಉಮೇಶ ಮೇಟಿ ಚಾಲನೆ ನೀಡಿದರು.
ಬಾಗಲಕೋಟೆ: ಕ್ಷೇತ್ರದ ಗ್ರಾಮಗಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಹಂತ ಹಂತವಾಗಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಉಮೇಶ ಮೇಟಿ ಹೇಳಿದರು.
ಬಾಗಲಕೋಟೆ ಕ್ಷೇತ್ರದ ನಾಗರಾಳ ಗ್ರಾಮ ಮತ್ತು ನಾಗಸಂಪಗಿ ಗ್ರಾಮಗಳಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಗುರುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಗ್ರಾಮೀಣ ರಸ್ತೆ ಸಂಪರ್ಕವನ್ನು ಮತ್ತಷ್ಟು ಸುಧಾರಿಸುವ ಉದ್ದೇಶದಿಂದ ಎರಡೂ ಗ್ರಾಮಗಳು ಸೇರಿ ಒಟ್ಟು ೯೫ ಲಕ್ಷ ರೂ.ಗಳ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಉತ್ತಮ ರಸ್ತೆಗಳ ನಿರ್ಮಾಣದಿಂದ ಸಾರ್ವಜನಿಕರ ಸಂಚಾರ ಸುಗಮವಾಗುವುದರ ಜೊತೆಗೆ ಗ್ರಾಮಗಳ ಅಭಿವೃದ್ಧಿಗೂ ವೇಗ ಸಿಗಲಿದೆ ಎಂದರು.
ಬಸವAತಪ್ಪ ಮೇಟಿ, ಹನಮಂತ ಗಣಿ, ಆನಂದ ಮೇಟಿ, ಹುಲ್ಲಪ್ಪ ತೇಜಿ, ಬಸಲಿಂಗಪ್ಪ ಬಿರಾದಾರ, ಹನಮಂತ ಹಂಡಿ ಮತ್ತಿತರರು ಇದ್ದರು.