ಬಾಗಲಕೋಟೆ ನಗರದಲ್ಲಿ ಭಾನುವಾರ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಮಾತನಾಡಿದರು. ದ್ಯಾಮಣ್ಣ ಗಾಳಿ, ಸರಸಿಂಹಯ್ಯ, ವೆಂಕಟೇಶ ನಾಯಕ್ ಮತ್ತಿತರರು ಇದ್ದರು.
ಬಾಗಲಕೋಟೆ: ಮೀಸಲಾತಿ ಭಿಕ್ಷೆಯಲ್ಲ. ಅದು ಭಾರತ ಸಂವಿಧಾನ ನೀಡಿರುವ ಹಕ್ಕು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸಿರುವ ಮೀಸಲಾತಿ ಪ್ರಮಾಣ ಒಳಗೊಂಡ ಒಟ್ಟು ಶೇ. ೫೬ ಮೀಸಲಾತಿಯನ್ನು ೯ನೇ ಷೆಡ್ಯೂಲ್ ಸೇರಿಸಬೇಕು ಎಂದು ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಸರ ವೇದಿಕೆ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಬಸವರಾಜ ಬೊಮ್ಮಾಯಿ ಸರ್ಕಾರ ಹಾಗೂ ಇದೇ ವರ್ಷ ಸಿದ್ಧರಾಮಯ್ಯ ಸರ್ಕಾರ ೯ನೇ ಷೆಡ್ಯೂಲ್‌ಗೆ ಸೇರಿಸುವಂತೆ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಆದರೂ ಅದಕ್ಕೆ ಬೇಕಾದ ಒತ್ತಡವನ್ನು ಹಾಕುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಮತ ಪಡೆದು ಗೆದ್ದು ಬಂದಿರುವ ೨೨೪ ಶಾಸಕರು, ರಾಜ್ಯದ ಸಂಸದವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಒತ್ತಾಯಿಸಿದರು.
ಜನಸಂಖ್ಯೆಗೆ ಅನುಗುಣವಾಗಿ ಎಸ್‌ಸಿ ಮತ್ತು ಎಸ್ಟಿ ವರ್ಗದವರಿಗೆ ಮೀಸಲಾತಿ ನೀಡಬೇಕು ಎಂಬುದು ಸಂವಿಧಾನದ ನಿರ್ದೇಶನ ಇರುತ್ತದೆ. ಅದರಂತೆ ಲೋಕಸಭೆ, ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ನೀಡಲಾಗಿರುತ್ತದೆ. ಎಸ್‌ಸಿಪಿ, ಟಿಎಸ್‌ಪಿ ಕಾನೂನಿನಡಿ ಜನಸಂಖ್ಯೆಗೆ ಅನುಗುಣವಾಗಿ ರಾಜ್ಯದ ಆಯವ್ಯಯದಲ್ಲಿ ಪ್ರತಿ ವರ್ಷ ಎಸ್ಸಿ, ಎಸ್ಟಿಗೆ ಅನುದಾನ ನೀಡುತ್ತಿದೆ ಎಂದರು.
ಜನಸAಖ್ಯೆ ಆಧಾರದಲ್ಲಿ ಪರಿಶಿಷ್ಟ ಜಾತಿಗೆ ಶೇ.೧೫ ರಿಂದ ೧೭ ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ. ೩ ರಿಂದ ೭ಕ್ಕೆ ಮೀಸಲಾತಿ ಹೆಚ್ಚಿಸಲಾಗಿದೆ. ಇದರಿಂದ ರಾಜ್ಯದಲ್ಲಿ ಮೀಸಲಾತಿ ಪ್ರಮಾಣ ಶೇ.೫೬ಕ್ಕೆ ಹೆಚ್ಚಳವಾಗಿದೆ. ಇದರ ಅಡಿಯಲ್ಲಿ ಶಿಕ್ಞಣದಲ್ಲಿ ಪ್ರವೇಶ ಮತ್ತು ಉದ್ಯೋಗಗಳನ್ನು ಪಡೆದಿರುತ್ತಾರೆ. ಆದರೆ, ಈಚೆಗೆ ಶೇ.೫೬ ಮೀಸಲಾತಿ ವಿಚಾರವಾಗಿ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ತಡೆಯಾಜ್ಞೆ ತರಲಾಗಿದೆ. ಹೀಗಾಗಿ ಸರ್ಕಾರ ಕೂಡಲೇ ನ್ಯಾಯಾಲಯದಲ್ಲಿ ತಡೆಯಾಜ್ಞೆ ತೆರವುಗೊಳಿಸಲು ಸಮರ್ಪಕ ವಕೀಲರನ್ನು ನೇಮಕ ಮಾಡಿ ಅರ್ಜಿ ಸಲ್ಲಿಸಬೇಕು. ತೆರವಾಗದಿದ್ದರೆ ವಿಶೇಷ ಅರ್ಜಿಯನ್ನು ಸರ್ವೋಚ್ಛ ನ್ಯಾಯಾಲಯದಲ್ಲಿ ದಾಖಲು ಮಾಡಬೇಕು. ಈ ವಿಚಾರವಾಗಿ ಮೊದಲು ಸರ್ವ ಪಕ್ಷಗಳ ಸಭೆಯನ್ನು ಕರೆಯಬೇಕು. ಸರ್ವ ಪಕ್ಷಗಳ ನಿಯೋಗವನ್ನು ಪ್ರಧಾನ ಮಂತ್ರಿಗಳ ಬಳಿಗೆ ಕೊಂಡೊಯ್ಯಬೇಕು. ರಾಜ್ಯದಲ್ಲಿ ಎಸ್ಸಿ, ಎಸ್ಟಿ ವರ್ಗಗಳ ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಲಕ್ಷಾಂತರ ಜನರು ಪಡೆದು ಸೌಲಭ್ಯ ಪಡೆಯುತ್ತಿರುವವರ ಮೇಲೆ ಹಾಗೂ ಸುಳ್ಳು ಪ್ರಮಾಣ ಪತ್ರ ನೀಡುತ್ತಿರುವ ಅಽಕಾರಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಉಗ್ರಪ್ಪ ಅವರು, ಮೀಸಲಾತಿ ಸೌಲಭ್ಯ ಪಡೆದು ಅಽಕಾರ, ಗೌರವ ಪಡೆದುಕೊಂಡವರು ಪಾಳೇಗಾರರು ಆಗಬಾರದು. ಸಮಾಜದ ಬದುಕಿಗೆ ಆಶ್ರಯದಾತರು ಆಗಬೇಕು ಎಂದು ತೀಕ್ಷ÷್ಣವಾಗಿ ಪ್ರತಿಕ್ರಿಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ದ್ಯಾಮಣ್ಣ ಗಾಳಿ, ಎಂ.ನರಸಿAಹಯ್ಯ, ವೆಂಕಟೇಶ ನಾಯಕ್, ರಾಜಣ್ಣ, ಈ ರಾಜಪ್ಪ ಮತ್ತಿತರರು ಇದ್ದರು.
ಎಸ್ಸಿ, ಎಸ್ಟಿ ಸೇರ್ಪಡೆಗೆ ವಿರೋಧ ಇಲ್ಲ:
ಅನೇಕ ಸಮಾಜಗಳು ತಮ್ಮನ್ನು ಎಸ್ಸಿ, ಎಸ್ಟಿ ವರ್ಗಕ್ಕೆ ಸೇರಿಸುವಂತೆ ಹೋರಾಟ ಮಾಡುತ್ತಿವೆ. ಮೀಸಲಾತಿ ಪಡೆಯಲು ಅರ್ಹರು ಇದ್ದರೆ ಅವರ ಸೇರ್ಪಡೆಗೆ ನಮ್ಮ ವಿರೋಧ ಇಲ್ಲ. ಅದರೆ, ಈ ಬಗ್ಗೆ ಮೊದಲು ಕುಲಶಾಸö ಅಧ್ಯಯನ ನಡೆಯಬೇಕು. ಸೇರಿಸುವ ಜಾತಿಯ ಜನಸಂಖ್ಯೆ ಎಷ್ಟು ಎಂದು ತಿಳಿಸಬೇಕು ಎಂದು ಉಗ್ರಪ್ಪ ತಿಳಿಸಿದರು.
ರಾಜ್ಯದಲ್ಲಿ ಭೋವಿ ಮತ್ತು ವಡ್ಡರ ಸಮಾಜದ ಜನರಿಗೆ ಎಸ್ಸಿ ಪ್ರಮಾಣ ಪತ್ರ ನೀಡುವ ವಿಚಾರದಲ್ಲಿ ಅಽಕಾರಿಗಳು ಸೃಷ್ಟಿಸುತ್ತಿರುವ ಗೊಂದಲಗಳಿಗೆ ತೆರೆ ಎಳೆಯಬೇಕು. ಭೋವಿ ಮತ್ತು ವಡ್ಡರ ಜಾತಿಗಳು ಸಂಪೂರ್ಣ ವಿಭಿನ್ನ. ಸರ್ಕಾರಿ ಕಚೇರಿಗಳಲ್ಲಿ ಭೋವಿ ಜಾತಿಯವರು ಎಸ್ಸಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದಾಗ, ಅಽಕಾರಿಗಳು ನಿಮಗೂ ವಡ್ಡರ ಸಮಾಜಕ್ಕೂ ಸಂಬAಧವಿದೆಯೇ ಎಂದು ಪ್ರಶ್ನಿಸಿ, ಇದ್ದರೆ ಪ್ರಮಾಣ ಪತ್ರ, ಇಲ್ಲವೆಂದರೆ ಇಲ್ಲ ಎನ್ನುವ ನಿಯಮ ಹೇರುತ್ತಿದ್ದಾರೆ. ಇದನ್ನು ಸರಿಪಡಿಸಬೇಕು ಎಂದು ಉಗ್ರಪ್ಪ ಆಗ್ರಹಿಸಿದರು.