ಮುರುಡಿ ಸಮೀಪದ ಇಟ್ಟಿಗೆ ಭಟ್ಟಿಯಲ್ಲಿ ಒತ್ತೆಯಾಳಾಗಿ ದುಡಿಯುತ್ತಿದ್ದ ಹೊರ ರಾಜ್ಯದ ಕಾರ್ಮಿಕರನ್ನು ರಕ್ಷಣೆ ಮಾಡಿ ಗುಳೇದಗುಡ್ಡ ತಹಸೀಲ್ದಾರ ಕಚೇರಿಗೆ ಕರೆ ತರಲಾಯಿತು. ತಹಸೀಲ್ದಾರ ಎಸ್.ಎ್. ಬೊಮ್ಮಣ್ಣವರ, ಉಪ ತಹಸೀಲ್ದಾರ ಜಿ.ವಿ. ರಜಪೂತ ಇದ್ದರು. 
ಬಾಗಲಕೋಟೆ

ಜೀತದಾಳಾಗಿ ದುಡಿಯುತ್ತಿದ್ದ 10 ಕಾರ್ಮಿಕರ ರಕ್ಷಣೆ

ಪ್ರಮುಖ ಮುಖ್ಯಾಂಶಗಳು

  • ಮುರುಡಿ ಗ್ರಾಮದ ಹತ್ತಿರದ ಇಟ್ಟಿಗೆ ಬಟ್ಟಿಯ ಮೇಲೆ ಕಂದಾಯ ಇಲಾಖೆ ಹಾಗೂ ಕಾರ್ಮಿಕ ಇಲಾಖೆ ಸಿಬ್ಬಂದಿ ದಾಳಿ
  • ಒತ್ತೆಯಾಳಾಗಿ ದುಡಿಯುತ್ತಿದ್ದ ಹೊರ ರಾಜ್ಯದ ಕಾರ್ಮಿಕರ ರಕ್ಷಣೆ
  • ಇಟ್ಟಿಗೆ ಭಟ್ಟಿ ಮಾಲೀಕ ಶರಣಪ್ಪ ಬಸಪ್ಪ ತೋಳಮಟ್ಟಿ ಅವರ ಮೇಲೆ ಪ್ರಕರಣ ದಾಖಲಿಸಲು
ಗುಳೇದಗುಡ್ಡ : ಸಮೀಪದ ಮುರುಡಿ ಗ್ರಾಮದ ಹತ್ತಿರದ ಇಟ್ಟಿಗೆ ಬಟ್ಟಿಯ ಮೇಲೆ ಕಂದಾಯ ಇಲಾಖೆ ಹಾಗೂ ಕಾರ್ಮಿಕ ಇಲಾಖೆ ಸಿಬ್ಬಂದಿ ದಾಳಿಮಾಡಿ ಒತ್ತೆಯಾಳಾಗಿ ದುಡಿಯುತ್ತಿದ್ದ ಹೊರ ರಾಜ್ಯದ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ.
ಗುರುವಾರ ತಹಸೀಲ್ದಾರ ಎಸ್.ಎಫ್. ಬೊಮ್ಮಣ್ಣವರ ನಿರ್ದೇಶನದ ಮೆರೆಗೆ ಜಿಲ್ಲಾ ಕಾರ್ಮಿಕ ಅಧಿಕಾರಿಗಳು, ತಾಲೂಕ ಕಾರ್ಮಿಕ ಅಧಿಕಾರಿಗಳು, ಕಂದಾಯ ನಿರೀಕ್ಷಕರು ಹಾಗೂ ಪೊಲೀಸ್ ಸಿಬ್ಬಂದಿ ಜಂಟಿ ಕಾರ್ಯಾಚರಣೆ ಮಾಡಿ ಸಮೀಪದ ಮುರಡಿ ಗ್ರಾಮದ ಹತ್ತಿರ ಇಟ್ಟಿಗೆ ಭಟ್ಟಿಯಲ್ಲಿ ಒತ್ತೆಯಾಳಾಗಿ ಕೆಲಸ ಮಾಡುತ್ತಿದ್ದ ಒಡಿಸಾ ರಾಜ್ಯದ 10 ಜನ ಕಾರ್ಮಿಕರನ್ನು ರಕ್ಷಣೆ ಮಾಡಿದರು. ಬಳಿಕ ಅವರ ತವರಿಗೆ ಕಳುಹಿಸಿ ಕೊಡಲಾಯಿತು. ಈ ಬಗ್ಗೆ ಇಟ್ಟಿಗೆ ಭಟ್ಟಿ ಮಾಲೀಕ ಶರಣಪ್ಪ ಬಸಪ್ಪ ತೋಳಮಟ್ಟಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಕಾರ್ಮಿಕರನ್ನು ತಹಸೀಲ್ದಾರರವರ ಕಚೇರಿಯಲ್ಲಿ ಕರೆತಂದು ತಹಸೀಲ್ದಾರ ಎಸ್.ಎಫ್. ಬೊಮ್ಮಣ್ಣವರ, ಉಪತಹಸೀಲ್ದಾರ ಜಿ.ವಿ. ರಜಪೂತ ಅವರು ವಿಚಾರಣೆ ನಡೆಸಿದರು. ಕಾರ್ಮಿಕರನ್ನು ಉಪವಿಭಾಗದಿಕಾರಿಗಳ ಎದುರು ವಿಚಾರಣೆಗೆ ಹಾಜರುಪಡಿಸಿ ಬಳಿಕ ಎಲ್ಲ ಕಾರ್ಮಿಕರನ್ನು ಅವರ ಸ್ವಂತ ರಾಜ್ಯಕ್ಕೆ ಕಳುಹಿಸಲಾಯಿತು ಎಂದು ಕಂದಾಯ ನಿರೀಕ್ಷಕ ಶಿವರಾಯಪ್ಪ ಜೋಗಿನ ತಿಳಿಸಿದ್ದಾರೆ.